Income Tax ಫೈಲ್​ ಮಾಡಲು ಇಂದೇ ಕೊನೆಯ ದಿನ: ಮಾಡದಿದ್ದರೆ ಏನಾಗುತ್ತೆ? ಹೇಗೆ ಮಾಡೋದು? ಡಿಟೇಲ್ಸ್ ಇಲ್ಲಿದೆ...

Published : Sep 15, 2025, 01:46 PM ISTUpdated : Sep 15, 2025, 02:44 PM IST
ITR Filing last date 2025

ಸಾರಾಂಶ

Income Tax ಫೈಲ್​ ಮಾಡಲು ಇಂದೇ ಕೊನೆಯ ದಿನ. ಗಡುವು ವಿಸ್ತರಣೆಯಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ತಪ್ಪಿದರೆ ದಂಡ ತೆರಬೇಕಾಗುತ್ತದೆ.

ನಿಮ್ಮ ಆದಾಯ ತೆರಿಗೆ ರಿಟರ್ನ್ (ITR Retrun) ಸಲ್ಲಿಸುವ ಗಡುವು ಇಂದಿಗೆ ಅರ್ಥಾತ್​ ಸೆಪ್ಟೆಂಬರ್ 15ಕ್ಕೆ ಮುಗಿಯಲಿದೆ. ಆದಾಯ ತೆರಿಗೆ ಇಲಾಖೆ X ರಂದು ಪೋಸ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ಐಟಿಆರ್ ಸಲ್ಲಿಕೆ ಅಂತಿಮ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಇಲಾಖೆಯು ದೃಢಪಡಿಸಿದೆ. ಹಲವರು ಕೊನೆಯ ಕ್ಷಣದ ರಶ್​ನಿಂದಾಗಿ ಒಂದೇ ಸಲಕ್ಕೆ ITR ಫೈಲ್​ ಮಾಡಲು ಹೊರಟಿದ್ದರಿಂದ ವೀಕೆಂಡ್​ಗಳಲ್ಲಿ ಹಲವರಿಗೆ ಇದನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ದೂರುಗಳೂ ಬಂದಿದ್ದವು. ಇದರ ಹೊರತಾಗಿಯೂ, ಇದಾಗಲೇ ಸಾಕಷ್ಟು ಕಾಲಾವಕಾಶವನ್ನು ನೀಡಿರುವುದರಿಂದ ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವುದಿಲ್ಲ ( There will be no extension to the ITR Filing deadline Sept 15th is last date) ಎಂದು ಇಲಾಖೆ ಹೇಳಿದೆ. ಗಡುವು ವಿಸ್ತರಿಸಲಾಗಿದೆ ಎಂದು ಸುಳ್ಳು ಸುದ್ದಿಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದನ್ನು ನಂಬದಂತೆ ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Deceased Tax Return: ಮೃತರ ಆದಾಯ ತೆರಿಗೆ ಪಾವತಿ ಮಾಡುವುದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ...

ಸೆಪ್ಟೆಂಬರ್ 15 ರ ಗಡುವನ್ನು ತಪ್ಪಿಸಿಕೊಂಡರೆ ಏನಾಗುತ್ತದೆ?

ನೀವು ಇನ್ನೂ ನಿಮ್ಮ ITR ಸಲ್ಲಿಸದಿದ್ದರೆ, ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು ಅದನ್ನು ಸಲ್ಲಿಸಿ. ಒಂದು ವೇಳೆ ಇವತ್ತು ಅರ್ಥಾತ್​ ಸೆಪ್ಟೆಂಬರ್ 15 ರ ಗಡುವನ್ನು ತಪ್ಪಿಸಿಕೊಂಡರೆ ನಿಮಗೆ ಭಾರಿ ನಷ್ಟ ಆಗಲಿದೆ. ಏಕೆಂದರೆ ನಿಮಗೆ ದಂಡ ಬೀಳಲಿದೆ. ಇದಾಗಲೇ ಇನ್​ಕಮ್​ ಟ್ಯಾಕ್ಸ್​ನಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಯಾವಾಗ ಬೇಕಾದರೂ ITR ಸಲ್ಲಿಕೆಗೆ ಅವಕಾಶವಿದೆ. ಆದರೆ ಅದು ಮುಂದಿನ ವರ್ಷದಿಂದ ಜಾರಿಯಾಗುತ್ತದೆಯೇ ವಿನಾ ಈ ವರ್ಷ ಅಲ್ಲ.

ಆದ್ದರಿಂದ ಸೆಪ್ಟೆಂಬರ್ 15 ರೊಳಗೆ ಅಂದರೆ ಇಂದು ತಮ್ಮ ಐಟಿಆರ್ ಸಲ್ಲಿಸಲು ವಿಫಲವಾದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ತೆರಿಗೆದಾರರಿಗೆ ದಂಡ ವಿಧಿಸಲಾಗುತ್ತದೆ. ಗಡುವಿನೊಳಗೆ ನಿಮ್ಮ ಐಟಿಆರ್ ಸಲ್ಲಿಸಲು ತಪ್ಪಿದರೆ, ನಿಮ್ಮ ಆದಾಯವು ಒಂದು ವೇಳೆ 5 ಲಕ್ಷ ಮೀರಿದರೆ ನೀವು ಪಾವತಿಸಬೇಕಾದ ದಂಡವು 5,000 ವರೆಗೆ ಇರಬಹುದು, ಕಡಿಮೆ ಆದಾಯ ಹೊಂದಿರುವವರಿಗೆ, ಸೆಕ್ಷನ್ 234F ಅಡಿಯಲ್ಲಿ 1,000 ದಂಡ ವಿಧಿಸಲಾಗುತ್ತದೆ.

ದಂಡ ಸಹಿತ ಪಾವತಿಗೆ ಗಡುವು

ದಂಡ ಸಹಿತಿ ಐಟಿಆರ್​ ಫೈಲ್​ ಮಾಡಲು ಡಿಸೆಂಬರ್ 31, 2025 ರವರೆಗೆ ಅವಧಿ ಇದೆ. ಆದರೆ ನವೀಕರಿಸಿದ ರಿಟರ್ನ್ಸ್ (ITR-U) ಅನ್ನು ಮಾರ್ಚ್ 31, 2030 ರವರೆಗೆ ಸಲ್ಲಿಸಬಹುದು. ನೀವು ಗಡುವಿನೊಳಗೆ ITR ಅನ್ನು ಸಲ್ಲಿಸಲು ವಿಫಲವಾದರೆ ಮತ್ತು ಇನ್ನೂ ತೆರಿಗೆಗಳನ್ನು ಬಾಕಿ ಉಳಿಸಿಕೊಂಡಿದ್ದರೆ, I-T ಕಾಯ್ದೆಯ ಸೆಕ್ಷನ್ 234A ಅಡಿಯಲ್ಲಿ ಪಾವತಿಸದ ತೆರಿಗೆ ಮೊತ್ತದ ಮೇಲೆ ನಿಮಗೆ ಬಡ್ಡಿ ವಿಧಿಸಲಾಗುತ್ತದೆ. ಇದು ರಿಟರ್ನ್ ಫೈಲಿಂಗ್ ಅಂತಿಮ ದಿನಾಂಕದಿಂದ ನಿಜವಾದ ಫೈಲಿಂಗ್ ದಿನಾಂಕದವರೆಗೆ ಲೆಕ್ಕಹಾಕಿ ಪಾವತಿಸದ ತೆರಿಗೆಯ ಮೇಲೆ ಪ್ರತಿ ತಿಂಗಳು 1 ಪ್ರತಿಶತದಷ್ಟು ಸರಳ ಬಡ್ಡಿಯನ್ನು ಪಾವತಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ITR ಅನ್ನು ಹೇಗೆ ಸಲ್ಲಿಸುವುದು?

-ಅಧಿಕೃತ ಆದಾಯ ತೆರಿಗೆ ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/ ಗೆ ಹೋಗಿ

-ನಿಮ್ಮ ಬಳಕೆದಾರ ID (PAN/Aadhaar) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ

-ITR ಫೈಲಿಂಗ್ ವಿಭಾಗಕ್ಕೆ ಹೋಗಿ

-ಅನ್ವಯವಾಗುವ ಮೌಲ್ಯಮಾಪನ ವರ್ಷ ಮತ್ತು ರಿಟರ್ನ್ಸ್ ಸಲ್ಲಿಸುವ ವಿಧಾನವನ್ನು ಆರಿಸಿ.

-ಫೈಲಿಂಗ್ ಸ್ಥಿತಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಆಯ್ಕೆಮಾಡಿ ಮತ್ತು ಹೊಸ ಫೈಲಿಂಗ್ ಅನ್ನು ಪ್ರಾರಂಭಿಸಿ

-ನಿಮ್ಮ ಆದಾಯ ಮತ್ತು ಆದಾಯ ವಿಧಾನದ ಪ್ರಕಾರ ಸರಿಯಾದ ಐಟಿಆರ್ ಫಾರ್ಮ್ ಅನ್ನು ಆರಿಸಿ

-ಮಾಹಿತಿಯನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ

-ಬಾಕಿ ಇರುವ ತೆರಿಗೆಗಳನ್ನು ಪಾವತಿಸಿ

-ಸಲ್ಲಿಸಿ ಮತ್ತು ನಂತರ ಇ-ಪರಿಶೀಲಿಸಿ.

ಇದನ್ನೂ ಓದಿ: ಖಾಸಗಿ ಸ್ಥಳದಲ್ಲಿ ವಾಹನ ಬಳಸ್ತಿದ್ರೆ ತೆರಿಗೆ ವಿಧಿಸುವಂತಿಲ್ಲ! ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!