ಕಂಪನಿಗಳ ಮುಂಗಡ ತೆರಿಗೆ ಪಾವತಿ ಏರಿಕೆ : ಗುಡ್ ನ್ಯೂಸ್

By Kannadaprabha NewsFirst Published Dec 18, 2020, 9:20 AM IST
Highlights

ದೇಶದ ಆರ್ಥಿಕತೆ ಚೇತರಿಕೆಯಲ್ಲಿದೆ ಎಂಬುದರ  ಸುಳಿವು ಸಿಕ್ಕಿದೆ. 3ನೇ ತ್ರೈಮಾಸಿಕದಲ್ಲಿ ಒಟ್ಟು 1.09 ಲಕ್ಷ ಕೋಟಿ ರು. ಮುಂಗಡ ತೆರಿಗೆ ಪಾವತಿಯಾಗಿದೆ. 
 

ಮುಂಬೈ (ಡಿ.18): ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳು ಪಾವತಿಸುವ ಮುಂಗಡ ತೆರಿಗೆ ಪ್ರಮಾಣ ಶೇ.49ರಷ್ಟುಭಾರೀ ಏರಿಕೆ ಕಂಡಿದೆ. 

ಇದು ದೇಶದ ಆರ್ಥಿಕತೆ ಚೇತರಿಕೆಯಲ್ಲಿದೆ ಎಂಬುದರ ಮತ್ತೊಂದು ಸುಳಿವೆಂದು ವಿಶ್ಲೇಷಿಸಲಾಗಿದೆ. 3ನೇ ತ್ರೈಮಾಸಿಕದಲ್ಲಿ ಒಟ್ಟು 1.09 ಲಕ್ಷ ಕೋಟಿ ರು. ಮುಂಗಡ ತೆರಿಗೆ ಪಾವತಿಯಾಗಿದೆ. 

ಕಳೆದ ವರ್ಷದ ಇದೇ ಅವಧಿಯಲ್ಲಿ ಪಾವತಿಯಾಗಿದ್ದ 73,126 ಕೋಟಿ ರು.ಗೆ ಹೋಲಿಸಿದರೆ ಇದು ಶೇ.49ರಷ್ಟುಅಧಿಕ. ಕಳೆದ ವರ್ಷ ಕೇಂದ್ರ ಸರ್ಕಾರ ಕಾರ್ಪೋರೆಟ್‌ ತೆರಿಗೆಯ ಮೂಲದರವನ್ನು ಶೇ.25ರಷ್ಟುಇಳಿಸಿತ್ತು. ಅದು ಕೂಡ ಈ ವರ್ಷದ ಹೆಚ್ಚಳಕ್ಕೆ ಒಂದು ಕಾರಣವೂ ಹೌದು.

ಅಂಚೆ ಬ್ಯಾಂಕಿಂಗ್‌ ಸೇವೆಗೂ ಬಂತು ಆ್ಯಪ್‌! ...

ಇನ್ನು 3ನೇ ತ್ರೈಮಾಸಿಕದ ಅವಧಿಯಲ್ಲಿ ಸರ್ಕಾರ 1.46 ಲಕ್ಷ ಕೋಟಿ ರು.ಗಳನ್ನು ಗ್ರಾಹಕರಿಗೆ ಮರುಪಾವತಿ ಮಾಡಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.8.1ರಷ್ಟುಕಡಿಮೆ.

click me!