LPG ಗ್ಯಾಸ್ ದರ ಏರಿಕೆ ಮಾಡಿದ ಕೇಂದ್ರ; ಮನೆ ಅಡುಗೆ ದುಬಾರಿ!

By Suvarna NewsFirst Published Dec 16, 2020, 5:57 PM IST
Highlights

ಕೇಂದ್ರ ಸರ್ಕಾರ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದೆ. LPG ಗ್ಯಾಸ್ ದರ ಏರಿಕೆ ಮಾಡೋ ಮೂಲಕ ಡಿಸೆಂಬರ್ ತಿಂಗಳಲ್ಲಿ ಇದು ಎರಡನೆ ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಸದ್ಯ ಎಷ್ಟು ರೂಪಾಯಿ ಹೆಚ್ಚಾಗಿದೆ? ಇಲ್ಲಿದೆ.
 

ನವದೆಹಲಿ(ಡಿ.16): ಕುದುರೆಯಿಂದ ನೆಗೆಯುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಕಳೆದೊಂದು ವಾರದಿಂದ ತಟಸ್ಥವಾಗಿದೆ. ಇದೀಗ ಗ್ರಾಹಕರಿಗೆ LPG ಗ್ಯಾಸ್ ದರ ಏರಿಕೆ ಬಿಸಿ ತಟ್ಟಿದೆ. ಕೇಂದ್ರ ಸರ್ಕಾರ ಇದೀಗ ಪ್ರತಿ ಸಿಲಿಂಡರ್ ಮೇಲೆ 50 ರೂಪಾಯಿ ಹೆಚ್ಚಳ ಮಾಡಿದೆ. 

ಕರ್ನಾಟಕದ 6 ಸೇರಿ ದೇಶದ 100 ಸ್ಮಾರ್ಟ್‌ಸಿಟಿಯಲ್ಲಿ ಒಟಿಪಿ ಆಧಾರಿತ ಎಲ್‌ಪಿಜಿ!.

ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ 2ನೇ ಬಾರಿಗೆ LPG ಗ್ಯಾಸ್ ದರ ಏರಿಕೆ ಮಾಡುತ್ತಿದೆ 14.2 kg ಸಿಲಿಂಡರ್ ಬೆಲೆ ಇದೀಗ 50 ರೂಪಾಯಿ ಹೆಚ್ಚಾಗಿದೆ. ಪರಿಷ್ಕೃತ ದರ ಡಿಸೆಂಬರ್ 15 ರಿಂದಲೇ ಜಾರಿಯಾಗಿದೆ.  ಸಬ್ಸಿಡಿ ರಹಿತ ಗೃಹ ಬಳಕೆ LPG ಸಿಲಿಂಡರ್ ಬೆಲೆ 644 ರೂಪಾಯಿಗಳಿಂದ 694 ರೂಪಾಯಿ ಹೆಚ್ಚಿಸಲಾಗಿದೆ.

ಡಿಸೆಂಬರ್ ಆರಂಭದಲ್ಲೇ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿತ್ತು. 50 ರೂಪಾಯಿ ಹೆಚ್ಚಿಸೋ ಮೂಲಕ ಬೆಲೆ ಏರಿಕೆ ಮಾಡಿತ್ತು. ಇದೀಗ ಮತ್ತೆ 50 ರೂಪಾಯಿ ಏರಿಸೋ ಮೂಲಕ ಡಿಸೆಂಬರ್ ತಿಂಗಳ ಅರ್ಧಕ್ಕೆ ಒಟ್ಟು 100 ರೂಪಾಯಿ ಹೆಚ್ಚಿಸಿದೆ. ಜುಲೈ ಅಂತ್ಯಕ್ಕೆ ಸಿಲಿಂಡರ್ ಬೆಲೆ 594 ರೂಪಾಯಿಗಳಿತ್ತು. ಇದೀಗ 694 ರೂಪಾಯಿ ಆಗಿದೆ.

ಒಂದಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. ಇದರ ಬಿಸಿ ತಾಳಲಾರದ ಗ್ರಾಹಕರಿಗೆ ಇದೀಗ ಸಿಲಿಂಡರ್ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
 

click me!