ಸುಷ್ಮಿತಾ ಸೇನ್ ಜೊತೆ ಬ್ರೇಕ್ಅಪ್ ಬಳಿಕ ಹೊಸ ಪ್ರೀತಿಯಲ್ಲಿ ಬಿದ್ದ ಲಲಿತ್ ಮೋದಿ

Published : Feb 14, 2025, 08:52 PM ISTUpdated : Feb 27, 2025, 03:05 PM IST
ಸುಷ್ಮಿತಾ ಸೇನ್ ಜೊತೆ ಬ್ರೇಕ್ಅಪ್ ಬಳಿಕ ಹೊಸ ಪ್ರೀತಿಯಲ್ಲಿ ಬಿದ್ದ ಲಲಿತ್ ಮೋದಿ

ಸಾರಾಂಶ

ನಟಿ ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಖಚಿತ ಪಡಿಸಿರುವ ಉದ್ಯಮಿ ಲಲಿತ್ ಮೋದಿ, ಇದೀಗ ಹೊಸ ಪ್ರೀತಿಯಲ್ಲಿ ಬಿದ್ದಿದ್ದಾರೆ. ಪ್ರೇಮಿಗಳ ದಿನದಂದು ತಮ್ಮ ಪ್ರೀತಿಯ ಕುರಿತು ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಲಲಿತ್ ಮೋದಿಯ ಹೊಸ ಸಂಗಾತಿ ಯಾರು?

ಲಂಡನ್(ಫೆ.14) ಐಪಿಎಲ್ ಸಂಸ್ಥಾಪಕ, ಮಾಜಿ ಚೇರ್ಮೆನ್ ಲಲಿತ್ ಮೋದಿ ಸದ್ಯ ಭಾರತ ಬಿಟ್ಟು ಲಂಡನ್‌ನಲ್ಲಿ ನೆಲೆಸಿದ್ದಾರೆ. ಪತ್ನಿ ಮಿನಾಲ್ ಮೋದಿ ನಿಧನದ ಬಳಿಕ ಏಕಾಂಗಿಯಾಗಿದ್ದ ಲಲಿತ್ ಮೋದಿ ಬಳಿಕ ಹಲವರು ನಟಿಯರ ಜೊತೆಗೆ ಹೆಸರು ಥಳುಕುಹಾಕಿಕೊಂಡಿತ್ತು. ಈ ಪೈಕಿ ಸುಷ್ಮಿತಾ ಸೇನ್ ಜೊತೆ ಲಲಿತ್ ಮೋದಿ ಪ್ರೀತಿಯಲ್ಲಿ ಬಿದ್ದಿದ್ದರು. ಗಪ್ ಚುಪ್ ಪ್ರೀತಿಯ ಫೋಟೋಗಳು ಹೊರಬಿದ್ದಿತ್ತು. ಇದು ಪರ ವಿರೋಧಕ್ಕೂ ಕಾರಣವಾಗಿತ್ತು. ಇದೀಗ ಸುಷ್ಮಿತಾ ಸೇನ್ ಜೊತೆಗಿನ ಬ್ರೇಕ್ಅಪ್ ಖಚಿತಪಡಿಸಿರುವ ಲಲಿತ್ ಮೋದಿ, ಹೊಸ ಪ್ರೀತಿಯನ್ನು ಪರಿಚಯಿಸಿದ್ದಾರೆ. ಆದರೆ ಹೊಸ ಗೆಳತಿಯ ಹೆಸರು ಬಹಿರಂಗಪಡಿಸಿಲ್ಲ. ಆದರೆ ಆಕೆಯ ಜೊತೆಗೆ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ, ಗೆಳತನ ಪ್ರೀತಿಯಾಗಿ ಬೇರೂರಿದೆ ಎಂದು ಹೇಳಿಕೊಂಡಿದ್ದಾರೆ.

ಪ್ರೇಮಿಗಳ ದಿನಾಚರಣೆ ದಿನ ತಮ್ಮ ಹೊಸ ಗೆಳತಿಯ ಜೊತೆಗಿನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ವಿಡಿಯೋದಲ್ಲಿ ಮೋದಿ ಮತ್ತು ಅವರ ಹೊಸ ಗೆಳತಿಯ ನಡುವಿನ ಸುಂದರ ಕ್ಷಣಗಳನ್ನು ತೋರಿಸಲಾಗಿದೆ. 25 ವರ್ಷಗಳ ಗೆಳೆತನ ಪ್ರೀತಿಗೆ ತಿರುಗಿದೆ ಎಂದು ಅವರು ಬರೆದಿದ್ದಾರೆ.  ನನಗೆ ಎರಡು ಬಾರಿ ಅದೃಷ್ಟ ಸಿಕ್ತು. 25 ವರ್ಷಗಳ ಗೆಳೆತನ ಪ್ರೀತಿಗೆ ತಿರುಗಿದೆ. ಅದು ಎರಡು ಬಾರಿ ಸಂಭವಿಸಿದೆ. ನಿಮಗೆಲ್ಲರಿಗೂ ಸಹ ಹೀಗೆ ಆಗಲಿ ಎಂದು ಆಶಿಸುತ್ತೇನೆ ಎಂದು ಲಲಿತ್ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಿದ್ಧಾರ್ಥ ಮದುವೆಯಲ್ಲಿ ವಿಜಯ್‌ ಮಲ್ಯ, ಲಲಿತ್ ಮೋದಿ; ಫೋಟೋಗಳಲ್ಲಿ ನೋಡಿ

ಈ ಪೋಸ್ಟ್‌ಗೆ ಅನೇಕರು ಶುಭಾಶಯಗಳನ್ನು ಕೋರಿದ್ದಾರೆ. 2022 ರಲ್ಲಿ ಸುಷ್ಮಿತಾ ಸೇನ್ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ಮೋದಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಲಲಿತ್ ಮೋದಿ,  ಸುಷ್ಮಿತಾ ಸೇನ್ ಜೊತೆ ಮಾಲ್ಡೀವ್ಸ್‌ನಲ್ಲಿ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಾಗ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಈ ಕುರಿತು ಸುಷ್ಮಿತಾ ಸೇನ್ ಕೂಡ ಗ್ರೀನ್ ಸಿಗ್ನಲ್ ಮಾತುಗಳನ್ನಾಡಿದ್ದರು. ಆದರೆ, ಕೆಲವು ತಿಂಗಳ ನಂತರ ಅವರ ಸಂಬಂಧ ಮುರಿದುಬಿದ್ದಿತು. ಮೋದಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಸೇನ್ ಬಗ್ಗೆ ಎಲ್ಲಾ ಉಲ್ಲೇಖಗಳನ್ನು ಅಳಿಸಿಹಾಕಿದರು. ಅದಕ್ಕೂ ಮೊದಲು, ಅವರು ಸಂಬಂಧದಲ್ಲಿದ್ದರೂ, ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

 

 

ಸುಷ್ಮಿತಾ ಸೇನ್‌ಗೂ ಮೊದಲು ಲಲಿತ್ ಮೋದಿ ಹೆಸರು ಹಲವು ನಟಿಯರು ಹಾಗೂ ಮಾಡೆಲ್ ಜೊತೆ ಹೆಸರು ಥಳುಕು ಹಾಕಿಕೊಂಡಿತ್ತು. ಲಲಿತ್ ಮೋದಿ 1991ರಲ್ಲಿ ಮಿನಾಲ್ ಸಗ್ರಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮಿನಾಲ್ ಮೋದಿ 2018ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ತೀವ್ರ ಅನಾರೋಗ್ಯದಿಂದ ಕೆಲ ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ರುಚಿರ್ ಮೋದಿ ಹಾಗೂ ಆಲಿಯಾ ಮೋದಿ. ಮಿನಾಲ್ ಮೋದಿ ನಿಧನದ ಬಳಿಕ ಲಲಿತ್ ಮೋದಿ ಏಕಾಂಗಿಯಾಗಿದ್ದರು.  

ಕೆಲ ವರ್ಷಗಳ ಬಳಿಕ ಅಂದರೆ 2022ರಲ್ಲಿ ಸುಷ್ಮಿತಾ ಸೇನ್ ಜೊತೆ ರಿಲೇಶನ್‌ಶಿಪ್ನಲ್ಲಿರುವುದಾಗಿ ಲಲಿತ್ ಮೋದಿ ಬಹಿರಂಗಪಡಿಸಿದ್ದರು. ಇದೀಗ ಹೊಸ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. 

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅಂಪೈರ್‌, ಆಕ್ಷನ್‌ ಫಿಕ್ಸಿಂಗ್‌ ಆರೋಪ ಮಾಡಿದ ಐಪಿಎಲ್‌ ಮಾಜಿ ಕಮೀಷನರ್‌!
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!