ಪಾಲಿಸಿಬಜಾರ್ ಜೊತೆ ಸೇರಿ 'ಕೋಟಕ್ ಪ್ರೊಟೆಕ್ಟ್ ಅಡ್ವಾಂಟೇಜ್' ಹೊಸ ಟರ್ಮ್ ಇನ್ಶೂರೆನ್ಸ್ ಬಿಡುಗಡೆ ಮಾಡಿದ ಕೋಟಕ್ ಲೈಫ್!

Published : Sep 29, 2026, 11:06 PM IST
KOtak Life

ಸಾರಾಂಶ

ಕೋಟಕ್ ಮಹೀಂದ್ರಾ ಲೈಫ್ ಇನ್ಶೂರೆನ್ಸ್ ಮತ್ತು ಪಾಲಿಸಿಬಜಾರ್ ಜಂಟಿಯಾಗಿ 'ಕೋಟಕ್ ಪ್ರೊಟೆಕ್ಟ್ ಅಡ್ವಾಂಟೇಜ್' ಎಂಬ ಹೊಸ ಟರ್ಮ್ ಇನ್ಶೂರೆನ್ಸ್ ಯೋಜನೆಯನ್ನು ಪರಿಚಯಿಸಿವೆ. ಡಿಜಿಟಲ್ ಪೀಳಿಗೆಯ ಅಗತ್ಯಗಳಿಗೆ ತಕ್ಕಂತೆ ಈ ಯೋಜನೆ ರೂಪಿಸಲಾಗಿದೆ.

ಬೆಂಗಳೂರು (ಸೆ.29): ದೇಶದ ಪ್ರಮುಖ ಜೀವವಿಮಾ ಸಂಸ್ಥೆಗಳಲ್ಲಿ ಒಂದಾದ ಕೋಟಕ್ ಮಹೀಂದ್ರಾ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ("ಕೋಟಕ್ ಲೈಫ್") ಮತ್ತು ಮುಂಚೂಣಿಯ ಡಿಜಿಟಲ್ ವಿಮಾ ವೇದಿಕೆ "ಪಾಲಿಸಿಬಜಾರ್" ಜಂಟಿಯಾಗಿ 'ಕೋಟಕ್ ಪ್ರೊಟೆಕ್ಟ್ ಅಡ್ವಾಂಟೇಜ್' (Kotak Protect Advantage) ಎಂಬ ನೂತನ, ಟರ್ಮ್ ಇನ್ಶೂರೆನ್ಸ್ ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಕುಟುಂಬದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ಪ್ಲಾನ್, ಜೀವನದ ವಿವಿಧ ಹಂತಗಳಲ್ಲಿ ಬದಲಾಗುವ ರಕ್ಷಣಾ ಅಗತ್ಯಗಳನ್ನು ಪೂರೈಸುವ ವಿನೂತನ ವೈಶಿಷ್ಟ್ಯಗಳನ್ನು ಹೊಂದಿದೆ.

ಡಿಜಿಟಲ್ ಪೀಳಿಗೆಯ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡ ಯೋಜನೆ

ಇಂದಿನ ಯುವ ಗ್ರಾಹಕರು ಹಣಕಾಸಿನ ಯೋಜನೆಯನ್ನು ಸಾಂಪ್ರದಾಯಿಕ ವಿಧಾನಕ್ಕಿಂತ ಭಿನ್ನವಾಗಿ ಯೋಚಿಸುತ್ತಿದ್ದಾರೆ. ಡಿಜಿಟಲ್ ಪ್ಲಾಟ್‌‌ಫಾರ್ಮ್‌ಗಳಲ್ಲಿ ವೈಯಕ್ತಿಕ ಅನುಭವಗಳಿಗೆ ಒಗ್ಗಿಕೊಂಡಿರುವ ಅವರು, ತಮ್ಮ ವಿಮಾ ಆಯ್ಕೆಗಳಲ್ಲಿ ಹೆಚ್ಚಿನ ನಮ್ಯತೆ ಮತ್ತು ನಿಯಂತ್ರಣವನ್ನು ಬಯಸುತ್ತಾರೆ. ಈ ಬದಲಾಗುತ್ತಿರುವ ನಿರೀಕ್ಷೆಗಳನ್ನು ಗುರುತಿಸಿ, ಕೋಟಕ್ ಲೈಫ್‌ನ ರಕ್ಷಣಾ ಪರಿಣತಿ ಮತ್ತು ಪಾಲಿಸಿಬಜಾರ್‌ನ ಯುವ ಗ್ರಾಹಕರ ಮಾರುಕಟ್ಟೆ ತಿಳುವಳಿಕೆಯನ್ನು ಒಗ್ಗೂಡಿಸಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಈ ಕುರಿತು ಮಾತನಾಡಿದ ಕೋಟಕ್ ಲೈಫ್‌ನ ಡೆಪ್ಯುಟಿ ಎಂ.ಡಿ ಅಮಿತ್ ಪಲ್ಟಾ, "ವಿಭಿನ್ನ ವರ್ಗದ ಗ್ರಾಹಕರ ವಿಶಿಷ್ಟ ಅಗತ್ಯಗಳು ಮತ್ತು ಆರ್ಥಿಕ ಆದ್ಯತೆಗಳನ್ನು ಅರ್ಥಮಾಡಿಕೊಂಡು ಉತ್ಪನ್ನಗಳನ್ನು ನಾವೀನ್ಯಗೊಳಿಸುವುದರಲ್ಲೇ ಜೀವವಿಮೆಯ ಭವಿಷ್ಯವಿದೆ. ಡಿಜಿಟಲ್ ಜ್ಞಾನವಿರುವ ಯುವ ಗ್ರಾಹಕರ ಆದ್ಯತೆಗಳನ್ನು ಪೂರೈಸಲು ಕೋಟಕ್ ಪ್ರೊಟೆಕ್ಟ್ ಅಡ್ವಾಂಟೇಜ್ ಅತ್ಯಂತ ಸೂಕ್ತವಾಗಿದೆ" ಎಂದರು.

'ಕೋಟಕ್ ಪ್ರೊಟೆಕ್ಟ್ ಅಡ್ವಾಂಟೇಜ್' ಯೋಜನೆಯ ಪ್ರಮುಖ ವೈಶಿಷ್ಟ್ಯಗಳು

ಪಾಲಿಸಿಬಜಾರ್‌ನ ಚೀಫ್ ಬಿಸಿನೆಸ್ ಆಫೀಸರ್ ವಿವೇಕ್ ಜೈನ್ ಅವರು ಯೋಜನೆಯ ಪ್ರಮುಖ ಆಕರ್ಷಣೆಗಳನ್ನು ವಿವರಿಸಿದರು. ಜೀವನದ ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದಾಗ (ಮದುವೆ, ಮಕ್ಕಳ ಜನನ ಇತ್ಯಾದಿ) ಹೆಚ್ಚುವರಿ ವೈದ್ಯಕೀಯ ತಪಾಸಣೆ ಇಲ್ಲದೆಯೇ ವಿಮಾ ಕವರೇಜ್ ಹೆಚ್ಚಿಸಿಕೊಳ್ಳುವ ನಮ್ಯತೆ ನೀಡಲಾಗಿದೆ. ಕ್ಲೈಮ್ ಸೂಚನೆ ನೀಡಿದ ತಕ್ಷಣವೇ ₹2 ಲಕ್ಷ ರೂಪಾಯಿಗಳ ತಕ್ಷಣದ ಪಾವತಿ ಸೌಲಭ್ಯ ಸಿಗಲಿದೆ. ಆರ್ಥಿಕ ಮುಗ್ಗಟ್ಟು ಅಥವಾ ಅಗತ್ಯ ಸಂದರ್ಭಗಳಲ್ಲಿ ಪ್ರೀಮಿಯಂ ಪಾವತಿಯಿಂದ ವಿರಾಮ ಪಡೆಯುವ ಅವಕಾಶ ಸಿಗಲಿದೆ. ಗ್ರಾಹಕರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬೆಂಬಲಿಸುವ ಯೋಗಕ್ಷೇಮ ಪ್ರಯೋಜನಗಳು ಹಾಗೂ ಅವಧಿಯ ಕೊನೆಯಲ್ಲಿ ಪ್ರೀಮಿಯಂ ವಾಪಸಾತಿ (Return of Premium) ಪಡೆಯುವ ವಿಶೇಷ ನಿರ್ಗಮನ ಆಯ್ಕೆ ಹಾಗೂ ಆಕ್ಸಿಲರೇಟೆಡ್ ಟರ್ಮಿನಲ್ ಇಲ್ನೆಸ್ ಬೆನಿಫಿಟ್ ಇದೆ.

ಈ ಉತ್ಪನ್ನವು ಗ್ರಾಹಕರಿಗೆ 2 ಪ್ಲಾನ್ ಆಯ್ಕೆಗಳು ಮತ್ತು 2 ಪೇಔಟ್ ಆಯ್ಕೆಗಳನ್ನು ನೀಡಲಿದ್ದು, ತಮ್ಮ ವೈಯಕ್ತಿಕ ಮತ್ತು ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ಕವರೇಜ್ ರೂಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಕೋಟಕ್ ಮಹೀಂದ್ರಾ ಲೈಫ್ ಇನ್ಶೂರೆನ್ಸ್: ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ನ ಶೇ.100 ರಷ್ಟು ಅಂಗಸಂಸ್ಥೆಯಾಗಿದ್ದು, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಮಾರ್ಚ್ 2026ರ ವೇಳೆಗೆ ದೇಶದ 163 ನಗರಗಳಲ್ಲಿ 372 ಶಾಖೆಗಳನ್ನು ಹೊಂದಿದ್ದು, 5 ಕೋಟಿಗೂ ಹೆಚ್ಚು ಜನರಿಗೆ ವಿಮಾ ರಕ್ಷಣೆ ನೀಡಿದೆ.

ಪಾಲಿಸಿಬಜಾರ್: ಭಾರತದ ಅತಿದೊಡ್ಡ ಡಿಜಿಟಲ್ ವಿಮಾ ವೇದಿಕೆಯಾಗಿದ್ದು, 50ಕ್ಕೂ ಹೆಚ್ಚು ವಿಮಾ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಡಿಸೆಂಬರ್ 2025ರವರೆಗೆ ಸುಮಾರು 62.9 ಮಿಲಿಯನ್ ಪಾಲಿಸಿಗಳನ್ನು ವಿತರಿಸಿರುವ ಹೆಗ್ಗಳಿಕೆ ಇದರದ್ದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

400 ರೂ. ವಸ್ತು ಡಿಮಾರ್ಟ್‌ನಲ್ಲಿ 199 ರೂ.ಗೆ! ತಿಂಗಳ ಕೊನೆ ಶಾಪಿಂಗ್‌ನಲ್ಲಿ ಬಿಗ್‌ ಆಫರ್
EPFO ವೇತನ ಮಿತಿ ₹25,000ಕ್ಕೆ ಏರಿಕೆ; ಸೆಪ್ಟೆಂಬರ್ ತಿಂಗಳ ನಿಮ್ಮ ಸಂಬಳ ಮತ್ತು ಪಿಎಫ್ ಲೆಕ್ಕಾಚಾರ ಇಲ್ಲಿದೆ!