ಎಲ್ಲಿಗಾದ್ರೂ ಕಳ್ಸಿ, ಪಾಕ್‌ಗೆ ಮಾತ್ರ ಬೇಡ: ಕರುನಾಡ ರೈತರ ಆಕ್ರೋಶ!

By Web DeskFirst Published Feb 23, 2019, 6:23 PM IST
Highlights

ಪಾಕಿಸ್ತಾನಕ್ಕೆ ಪಾಠ ಕಲಿಸುತ್ತಿದೆ ದೇಶದ ರೈತ ಸಮುದಾಯ| ಬೆಳೆದ ಬೆಳೆ ಪಾಕ್ ಗೆ ಕೊಡದೇ ಬುದ್ಧಿ ಕಲಿಸುತ್ತಿದ್ದಾನೆ ರೈತ| ಪಾಕಿಸ್ತಾನಕ್ಕೆ ಕೋಲಾರ ಟೊಎಮಟೊ ರಫ್ತು ಬಂದ್| ಕೋಲಾರ ಕೃಷಿ ಮಾರುಕಟ್ಟೆಯ ದಿಟ್ಟ ನಿರ್ಧಾರ| 

ಕೋಲಾರ(ಫೆ.23): ಪುಲ್ವಾಮಾ ದಾಳಿ ನಿಜಕ್ಕೂ ಭಾರತವನ್ನು ಈ ಹಿಂದೆಂದೂ ಕಂಡಿರದ ರೀತಿಯಲ್ಲಿ ಒಂದುಗೂಡಿಸಿದೆ. ಭಯೋತ್ಪಾದಕರ ಹೇಡಿ ಕೃತ್ಯವನ್ನು ದೇಶ ಒಂದಾಗಿ ಖಂಡಿಸುತ್ತಿದೆ.

ಇನ್ನು ಭಯೋತ್ಪಾದಕ ಸ್ವರ್ಗವಾಗಿರುವ ಪಾಕಿಸ್ತಾನದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ದೇಶದ ರೈತ ಸಮುದಾಯ ಕೂಡ ಧ್ವನಿಗೂಡಿಸಿದ್ದು, ಅದರಂತೆ ತಾವು ಬೆಳೆದ ಬೆಳೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡದಂತೆ ಸರ್ಕಾರಕ್ಕೆ ರೈತ ಸಮುದಾಯ ಮನವಿ ಮಾಡುತ್ತಿದೆ.

ಪಾಕ್‌ಗೆ ಟೊಮೆಟೊ ಕೊಡಲ್ಲ: ಅನ್ನದಾತನ ನಿರ್ಧಾರ ಅಚಲ!

ಭಾರತದಿಂದ ಪ್ರಮುಖವಾಗಿ ಪಾಕಿಸ್ತಾನಕ್ಕೆ ಟೊಮೆಟೊ ರಫ್ತಾಗುತ್ತಿದ್ದು, ಇದನ್ನು ನಿಲ್ಲಿಸುವಂತೆ ಈಗಾಗಲೇ ಮಧ್ಯಪ್ರದೇಶದ ರೈತರು ಸರ್ಕಾರವನ್ನು ಕೋರಿದ್ದಾರೆ.

ಇದೀಗ ಪಾಕ್ ಗೆ ಟೊಮೆಟೊ ರಫ್ತು ಮಾಡದಿರುವ ನಿರ್ಧಾರವನ್ನು ಕರ್ನಾಟಕದ ರೈತರು ಕೂಡ ಕೈಗೊಂಡಿದ್ದಾರೆ. ಅದರಂತೆ ಪಾಕ್ ಗೆ ಟೊಮೆಟೊ ರಫ್ತು ಮಾಡದಿರುವ ಕುರಿತು ಕೋಲಾರ ಎಪಿಎಂಸಿ ನಿರ್ಣಯ ಕೈಗೊಂಡಿದೆ.

ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

ಕೋಲಾರದ ಕೃಷಿ ಮಾರುಕಟ್ಟೆ ಇಡೀ ಏಷ್ಯಾದಲ್ಲೇ 2ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಯುವ ಕೇಂದ್ರವಾಗಿದೆ.  ಇಲ್ಲಿಂದ ನಿತ್ಯವೂ ಶ್ರೀಲಂಕಾ, ಬಾಂಗ್ಲಾದೇಶ, ಮಲೆಷಿಯಾ ಮತ್ತು ಪಾಕಿಸ್ತಾನಕ್ಕೆ ಟೊಮೆಟೊ ರಫ್ತಾಗುತ್ತದೆ.

ಮುಂಬರುವ ಜೂನ್ ನಿಂದ ಕೋಲಾರ ಕೃಷಿ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಹೆಚ್ಚಾಗಲಿದ್ದು, ರಫ್ತು ವಹಿವಾಟು ಜೋರಾಗಿರುತ್ತದೆ. ಈ ಮಧ್ಯೆ ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದ ರಾಷ್ಟ್ರಗಳಿಗೆ ಟೊಮೆಟೊ ರಫ್ತು ಮಾಡುವ ನಿರ್ಣಯಕ್ಕೆ ಕೋಲಾರ ಎಪಿಎಂಸಿ ಆಡಳಿತ ಮಂಡಳಿ ಬಂದಿದೆ.

click me!