ಬರೋಬ್ಬರಿ 5,000 ರೆಸ್ಟೋರೆಂಟ್ ಗಳು ಜೊಮ್ಯಾಟೋ ಪಟ್ಟಿಯಿಂದ ಹೊರಕ್ಕೆ!

Published : Feb 23, 2019, 04:05 PM ISTUpdated : Feb 23, 2019, 04:22 PM IST
ಬರೋಬ್ಬರಿ 5,000 ರೆಸ್ಟೋರೆಂಟ್ ಗಳು ಜೊಮ್ಯಾಟೋ ಪಟ್ಟಿಯಿಂದ ಹೊರಕ್ಕೆ!

ಸಾರಾಂಶ

ಏಕಾಏಕಿ 5 ಸಾವಿರ ರೆಸ್ಟೋರೆಂಟ್ ಗಳನ್ನು ಕೈಬಿಟ್ಟ ಜೊಮ್ಯಾಟೋ| ಜನಪ್ರಿಯ ಆನ್‌ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ| ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ ಪಟ್ಟಿಯಿಂದ ರೆಸ್ಟೋರೆಂಟ್ ಗಳು ಹೊರಕ್ಕೆ| ಎಫ್‌ಎಸ್‌ಎಸ್‌ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆ

ನವದೆಹಲಿ(ಫೆ.23): ಆನ್‌ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ ತನ್ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿರುವ ಸುಮಾರು 5,000 ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಿಂದ ಹೊರ ಹಾಕಿದೆ.

ಎಫ್‌ಎಸ್‌ಎಸ್‌ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 5,000 ರೆಸ್ಟೋರೆಂಟ್ ಗಳನ್ನು ಕೈಬಿಡಲಾಗಿದೆ ಎಂದು ಜೊಮ್ಯಾಟೋ ಸ್ಪಷ್ಟಪಡಿಸಿದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಳನ್ನು ಇಲ್ಲಿ ಓದಿhttps://kannada.asianetnews.com/business

ದೇಶದ ಸುಮಾರು 150 ನಗರಗಳಲ್ಲಿರುವ ಈ 5,000 ರೆಸ್ಟೋರೆಂಟ್ ಗಳ ಪರಿಶೀಲನೆ ನಡೆಸಲಾಗಿ, ನೈರ್ಮಲ್ಯ ಮತ್ತು ಶುದ್ಧೀಕರಣ ಮಾನದಂಡಗಳನ್ನು ಪಾಲಿಸದ ಈ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಜೊಮನ್ಯಾಟೋ ತಿಳಿಸಿದೆ.

ಇಂದಿನ ಕನ್ನಡಪ್ರಭವನ್ನು ಇಲ್ಲಿ ಓದಿhttp://kpepaper.asianetnews.com/

ಈ ಕುರಿತು ಮಾಹಿತಿ ನೀಡಿರುವ ಜೊಮ್ಯಾಟೋ ಸಿಇಒ ಮೊಹಿತ್ ಗುಪ್ತಾ, ಕಂಪನಿ ದಿನಕ್ಕೆ ಸುಮಾರು 400 ಹೊಸ ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಲ್ಲಿ ಸೇರಿಸುತ್ತಿದ್ದು, ಮಾನದಂಡಗಳನ್ನು ಸರಿಯಾಗಿ ಪರಿಶೀಲಿಸಿ ಹೊಸ ರೆಸ್ಟೋರೆಂಟ್ ಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್