ಎರಿಕ್ಸನ್ ಸಾಲ ತೀರಿಸಲು ಅನಿಲ್ ಪ್ಲ್ಯಾನ್: ಬ್ಯುಸಿನೆಸ್ ಅಂದ್ರೆ ಸುಮ್ನೆನಾ ಮ್ಯಾನ್?

Published : Feb 22, 2019, 02:41 PM ISTUpdated : Feb 22, 2019, 03:58 PM IST
ಎರಿಕ್ಸನ್ ಸಾಲ ತೀರಿಸಲು ಅನಿಲ್ ಪ್ಲ್ಯಾನ್: ಬ್ಯುಸಿನೆಸ್ ಅಂದ್ರೆ ಸುಮ್ನೆನಾ ಮ್ಯಾನ್?

ಸಾರಾಂಶ

ಸಾಲ ತೀರಿಸೋ ಪ್ಲ್ಯಾನ್ ಬಿಚ್ಚಿಟ್ಟ ಅನಿಲ್ ಅಂಬಾನಿ| ಅನಿಲ್ ಬತ್ತಳಿಕೆಯಲ್ಲಿವೆ ಇನ್ನೂ ಹಲವು ಅಸ್ತ್ರಗಳು| ಎರಿಕ್ಸನ್ ಕಂಪನಿಗೆ ಸಾಲ ತೀರಿಸಲಿದ್ದಾರೆ ಅನಿಲ್ | ಅಣ್ಣನ ಸಹಾಯ, ರಿಯಲ್ ಎಸ್ಟೇಟ್ ಆಸ್ತಿ ಮಾರಾಟದ ಪ್ಲ್ಯಾನ್|

ಮುಂಬೈ(ಫೆ.22): ಎರಿಕ್ಸನ್ ಕಂಪನಿಗೆ ನೀಡಬೇಕಾದ ಸಾಲವನ್ನು ಕೇವಲ ನಾಲ್ಕು ವಾರಗಳಲ್ಲಿ ತೀರಿಸುವಂತೆ ಸುಪ್ರೀಂ ಕೋರ್ಟ್ ಅನಿಲ್ ಅಂಬಾನಿಗೆ ಆದೇಶ ನೀಡಿದೆ.

ಅನಿಲ್ ಅಂಬಾನಿ ಎರಿಕ್ಸನ್ ಕಂಪನಿಗೆ 550 ಕೋಟಿ ರೂ. ಸಾಲ ಹೇಗೆ ತೀರಿಸಲಿದ್ದಾರೆ ಎಂಬುದೇ ಇದೀಗ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. 

ಅದಾಗಲೇ 118 ಕೋಟಿ ರೂ. ತೀರಿಸಿದ ಅನಿಲ್:

ಸುಪ್ರೀಂ ಆದೇಶದ ಬೆನ್ನಲ್ಲೇ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಎರಿಕ್ಸನ್ ಕಂಪನಿಗೆ ನೀಡಬೇಕಾದ 450 ಕೋಟಿ ರೂ. ಪೈಕಿ 118 ಕೋಟಿ ರೂ.ಗಳನ್ನು ಸುಪ್ರೀಂ ಕೋರ್ಟ್ ಗೆ ನೀಡಿದೆ. ಸಾಲಗಾರರನ್ನು ಸಂಪರ್ಕಿಸಿ ಈ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ ಇದೀಗ ಚಾಲ್ತಿಯಲ್ಲಿದೆ. ಅಲ್ಲದೇ ಉಳಿದ ಹಣವನ್ನೂ ಕೂಡ ಶೀಘ್ರದಲ್ಲೇ ತುಂಬುವ ಭರವಸೆ ನೀಡಲಾಗಿದೆ.

ಅಣ್ಣನ ಸಹಾಯ ಎಷ್ಟು?:

ಈ ಮಧ್ಯೆ ಅನಿಲ್ ಸಾಲ ತೀರಿಸುವಲ್ಲಿ ಹಿರಿಯ ಸಹೋದರ ಮುಖೇಶ್ ಅಂಬಾನಿ ಕೂಡ ಸಹಾಯ ಮಾಡಲಿದ್ದು, ಸ್ಪೆಕ್ಟ್ರಮ್ ಒಪ್ಪಂದದ ಹೊರತಾಗಿ ಹಣದ ಸಹಾಯ ಮಾಡುವ ನಿರೀಕ್ಷೆ ಇದೆ.

ಇದೆಯಲ್ಲಾ ರಿಯಲ್ ಎಸ್ಟೇಟ್:

ಇದ್ಯಾವುದರ ಸಹಾಯವಿಲ್ಲದೇಯೂ ಅನಿಲ್ ಅಂಬಾನಿ ಎರಿಕ್ಸನ್ ಕಂಪನಿಗೆ ನೀಡಬೇಕಾದ ಸಾಲವನ್ನು ತೀರಿಸಬಹುದಾಗಿದೆ. ಅನಿಲ್ ತಮ್ಮ ರಿಯಲ್ ಎಸ್ಟೇಟ್ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲದ ಸುಳಿಯಿಂದ ಹೊರಬರಬಹುದು.

ಈ ಸುದ್ದಿಗಳನ್ನೂ ಓದಿ-

ಅನಿಲ್ ಫಿನಿಷ್: ಸಾಲ ತೀರಿಸಿ ಇಲ್ಲ ಜೈಲಿಗೆ ಹೋಗಿ ಎಂದ ಸುಪ್ರೀಂ!

ಜೈಲು ಅಂತಿದ್ದಂತೇ RCom ಷೇರು ಪಾತಾಳಕ್ಕೆ: ಅನಿಲ್‌ಗೇನೂ ಆಗ್ತಿಲ್ಲ ಮಾಡಕ್ಕೆ!

ಅಣ್ಣನ ಕಾಲ್ ಬರ್ತಿಲ್ಲ: ಅನಿಲ್ ಕಾದಿರುವುದು ಮುಖೇಶ್‌ಗೆ ಗೊತ್ತಿಲ್ಲ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ