
ನವದೆಹಲಿ(ಜ.01): ಹೊಸ ವರ್ಷ ಸಂತಸ ಸಮಾಧಾನದಿಂದ ಕೂಡಿರಲಿ ಎಂಬುವುದು ಎಲ್ಲರ ಹಾರೈಕೆ. ಹೀಗಿರುವಾಗ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಈ ಹೊಸ ವರ್ಷದಂದೇ ರಾಜ್ಯದ ಜನೆತೆಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು ಕಂದಾಯಯ ಸಚಿವ ಆರ್. ಅಶೋಕ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಆಸ್ತಿ ಖರೀದಿಸುವವರಿಗೆ ನೆಮ್ಮದಿ ಕೊಟ್ಟಿದೆ.
ಹೊಸ ವರ್ಷದ ಗಿಫ್ಟ್ ಕೊಡಲು ನಾವು ತೀರ್ಮಾನ ಮಾಡಿರುವುದಾಗಿ ತಿಳಿಸಿರುವ ಸಚಿವ ಆರ್. ಅಶೋಕ್ ಗೈಡೆನ್ಸ್ ವ್ಯಾಲ್ಯೂ ಹತ್ತು ಪರ್ಸೆಂಟ್ ಕಡಿತಗೊಳಿಸಿರುವುದಾಗಿ ಹೇಳಿದ್ದಾರೆ. ಕೇವಲ ಮೂರು ತಿಂಗಳು ಮಾತ್ರ ಈ ಅವಕಾಶ ಇರಲಿದ್ದು, ಈಗಾಗಲೇ ಜಿಪಿಎ , ಅಗ್ರಿಮೆಂಟ್ ಮಾಡಿಕೊಂಡಿರುವವರಿಗೆ ಅನುಕೂಲ ಆಗಲಿದೆ. ಇಂದಿನಿಂದ ಜಾರಿ ಯಾಗಿ 31.3.22 ರ ವರೆಗೆ ಈ ಅವಕಾಶ ಜಾರಿ ಇರುತ್ತದೆ ಎಂದಿದ್ದಾರೆ.
ಡಿಕೆಶಿಗೆ ಆರ್ ಅಶೋಕ್ ತಿರುಗೇಟು
ಇದೇ ವೇಳೆ ಕಾಂಗ್ರೆಸ್ ಆಡಳಿತ ಹಾಗೂ ಡಿಕೆಶಿ ವಿರುದ್ಧ ಕಿಡಿ ಕಾರಿರುವ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರ ಆರು ವರ್ಷ ಆಡಳಿತ ಮಾಡಿದೆ. ಆಗ ಮೇಕೆದಾಟಿಗೆ ಎಷ್ಟು ಹಣ ಮೀಸಲಿಟ್ಟಿದ್ದರು. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ, ಈಗ ಮಾಡಲು ಕೆಲಸ ಇಲ್ಲ. ಹಾಗಾಗಿ ಗಿಮಿಕ್ ಮಾಡಲು ಹೊರಟಿದ್ದಾರೆ. ಇದು ಜನರಿಗೆ ಅನುಕೂಲ ಆಗುವುದಲ್ಲ. ಅವರ ಪಕ್ಷಕ್ಕೆ ಅನುಕೂಲ ಆಗಲು ಮಾಡಿದ್ದಾರೆ ಅಷ್ಟೇ. ಇಷ್ಟು ದಿನ ಏನು ಕಡಲೆಕಾಯಿ ತಿಂತಾ ಇದ್ರಾ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.