*ಹೊಸ ವರ್ಷಕ್ಕೆ ಎಟಿಂಎಂ ವಿತ್ ಡ್ರಾ ಶುಲ್ಕ ಸೇರಿದಂತೆ ಕೆಲವು ನಿಯಮಗಳಲ್ಲಿ ಬದಲಾವಣೆ
*ಆನ್ ಲೈನ್ ಫುಡ್ ಆರ್ಡರ್ ಸೇರಿದಂತೆ ಓಲಾ, ಉಬ್ ರೈಡ್ ದುಬಾರಿಯಾಗಲಿವೆ
*ಬ್ಯಾಂಕ್ ಲಾಕರ್ ಗೆ ಹೆಚ್ಚಿದ ಸುರಕ್ಷತೆ
Business Desk: 2022ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದೊಂದಿಗೆ ಆದಾಯದ (Income) ಮೇಲೆ ಪರಿಣಾಮ ಬೀರಬಲ್ಲ ಕೆಲವು ಹೊಸ ಬದಲಾವಣೆಗಳ (Changes)ಬಗ್ಗೆ ಇಂದೇ ತಿಳಿದುಕೊಳ್ಳೋದು ಒಳ್ಳೆಯದು. ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಬಲ್ಲ ಕೆಲವು ಬದಲಾವಣೆಗಳು ಈ ತಿಂಗಳಿಂದ ಆಗಲಿವೆ. ಹೀಗಾಗಿ ಕೆಲವೊಂದು ಕೆಲಸಗಳನ್ನು ಮಾಡೋ ಬದಲು ಜನವರಿ 1, 2022ರಿಂದಲೇ ಬದಲಾದ ನಿಯಮಗಳ ಮಾಹಿತಿ ತಿಳಿದುಕೊಳ್ಳಿ.
ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಳ
ಇಂದಿನಿಂದ (ಜ.1) ಬ್ಯಾಂಕ್ (Bank) ಗ್ರಾಹಕರು (Customers) ಎಟಿಎಂ (ATM) ಮಾಸಿಕ ಉಚಿತ ವಹಿವಾಟುಗಳ (Transactions) ಮಿತಿ ಮೀರಿದ್ರೆ ಈ ಹಿಂದಿಗಿಂತ ಹೆಚ್ಚು ಶುಲ್ಕ (fee) ಪಾವತಿಸಬೇಕಿದೆ. ಮಾಸಿಕ ನಿಗದಿತ ಉಚಿತ ಮಿತಿಯನ್ನು ಮೀರಿದ ಹಣಕಾಸು ಹಾಗೂ ಹಣಕಾಸೇತರ ಎಟಿಎಂ(ATM) ವಹಿವಾಟುಗಳ ಮೇಲಿನ ಶುಲ್ಕ ಹೆಚ್ಚಳಕ್ಕೆ ಬ್ಯಾಂಕುಗಳಿಗೆ(Banks) ಭಾರತೀಯ ರಿಸರ್ವ್ ಬ್ಯಾಂಕ್ (RBI) 2021ರ ಜೂನ್ 10ರಂದೇ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿತ್ತು. ನಿಗದಿತ ಮಿತಿಗಳನ್ನು ಮೀರಿದ ಪ್ರತಿ ಹೆಚ್ಚುವರಿ ಟ್ರಾನ್ಸಾಕ್ಷನ್ ಮೇಲೆ ಹಿಂದೆ 20 ರೂಪಾಯಿ ಶುಲ್ಕ ವಿಧಿಸಲಾಗುತ್ತಿದ್ದು, ಇಂದಿನಿಂದ 21ರೂ. ವಿಧಿಸಲಾಗುತ್ತದೆ. ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ 5 ವಹಿವಾಟುಗಳನ್ನು ಉಚಿತವಾಗಿ ನಡೆಸಬಹುದಾಗಿದೆ. ಇನ್ನು ಖಾತೆ ಹೊಂದಿರೋ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ವಹಿವಾಟು ನಡೆಸಬಹುದಾಗಿದೆ.
Round Up 2021: ಬದಲಾದ ಬ್ಯುಸಿನೆಸ್ ಟ್ರೆಂಡ್, ವರ್ಕ್ ಫ್ರಂ ಹೋಂಗೆ ಹೊಂದಿಕೊಂಡ ಉದ್ಯೋಗಿಗಳು
ಬ್ಯಾಂಕ್ ಲಾಕರ್ ಹೊಸ ನಿಯಮ
ಬ್ಯಾಂಕ್ (Bank) ಲಾಕರ್(Locker) ನಿರ್ವಹಣೆಗೆ ಸಂಬಂಧಿಸಿ ಆರ್ ಬಿಐ(RBI) ನೀಡಿರೋ ಪರಿಷ್ಕೃತ ನಿರ್ದೇಶನಗಳು ಇಂದಿನಿಂದ (ಜ.1) ಜಾರಿಗೆ ಬಂದಿವೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರ್ ಬಿಐ ಬ್ಯಾಂಕ್ ಲಾಕರ್ ನಿಯಮಗಳನ್ನು ಪರಿಷ್ಕರಿಸಿ 2021ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಿತ್ತು .ಹೊಸ ನಿಯಮಗಳ ಅನ್ವಯ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ ಅಥವಾ ವಂಚನೆಯಿಂದ ಗ್ರಾಹಕ ಲಾಕರ್ ನಲ್ಲಿನ ತನ್ನ ಬೆಲೆಬಾಳೋ ವಸ್ತುವನ್ನು ಕಳೆದುಕೊಂಡ್ರೆ ಬ್ಯಾಂಕ್ ಆತನಿಗೆ ಪರಿಹಾರ ನೀಡಬೇಕು. ಈ ಪರಿಹಾರದ ಮೊತ್ತ ಗ್ರಾಹಕ ಲಾಕರ್ ನಿರ್ವಹಣೆಗಾಗಿ ಬ್ಯಾಂಕಿಗೆ ಪಾವತಿಸೋ ವಾರ್ಷಿಕ ಬಾಡಿಗೆಯ ನೂರು ಪಟ್ಟು. ಇನ್ನು ಬ್ಯಾಂಕ್(Bank) ತನ್ನ ಸ್ಟ್ರಾಂಗ್ ರೂಮ್ನಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಅಲ್ಲದೆ, ಲಾಕರ್ ಸುತ್ತಮುತ್ತ ನಡೆಯೋ ಚಟುವಟಿಕೆಗಳ ಸಿಸಿಟಿವಿ ಫೋಟೇಜ್ ಅನ್ನು 180 ದಿನಗಳ ಕಾಲ ಸಂರಕ್ಷಿಸಿಡಬೇಕು ಎಂದು ಸೂಚಿಸಿದೆ. ಅಲ್ಲದೆ, ಬ್ಯಾಂಕುಗಳು ತಮ್ಮ ಶಾಖೆಗಳಲ್ಲಿ ಎಷ್ಟು ಲಾಕರ್ ಗಳು ಖಾಲಿಯಿದೆ ಹಾಗೂ ಅದಕ್ಕಾಗಿ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಕಾಲಕಾಲಕ್ಕೆ ಪ್ರಕಟಿಸುವಂತೆ ಆರ್ ಬಿಐ ಸೂಚಿಸಿದೆ.
ದುಬಾರಿಯಾಗಲಿದೆ ಆನ್ ಲೈನ್ ಫುಡ್ ಆರ್ಡರ್
ಹೊಸ ವರ್ಷದ ಮೊದಲ ದಿನದಿಂದಲೇ ಸ್ವಿಗ್ಗಿ(Swiggy), ಜೊಮ್ಯಾಟೋ (Zomato) ಸೇರಿದಂತೆ ಫುಡ್ ಡೆಲಿವರಿ ಆ್ಯಪ್ ಗಳು ಗ್ರಾಹಕರಿಂದ ಶೇ.5ರಷ್ಟು ಜಿಎಸ್ ಟಿ ಸಂಗ್ರಹಿಸಲಿವೆ. ಇಲ್ಲಿಯ ತನಕ ಫುಡ್ ಡೆಲಿವರಿ ಆ್ಯಪ್ ಗಳ ಮೂಲಕ ಪೂರೈಕೆಯಾಗುತ್ತಿದ್ದ ಆಹಾರಗಳಿಗೆ ರೆಸ್ಟೋರೆಂಟ್ ಗಳೇ ಜಿಎಸ್ ಟಿ ವಿಧಿಸುತ್ತಿದ್ದವು. ಆದ್ರೆ ಇನ್ನು ಮುಂದೆ ರೆಸ್ಟೋರೆಂಟ್ ಪರವಾಗಿ ಫುಡ್ ಡೆಲಿವರಿ ಆ್ಯಪ್ ಗಳೇ ಜಿಎಸ್ ಟಿ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಲಿವೆ. ಸೆಪ್ಟೆಂಬರ್ 17ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಫುಡ್ ಡೆಲಿವರಿ ಆ್ಯಪ್ ಗಳು ವಿಧಿಸೋ ಹೆಚ್ಚುವರಿ ಶುಲ್ಕಗಳಾದ ಡೆಲಿವರಿ ಜಾರ್ಜ್, ಪ್ಯಾಕಿಂಗ್ ಶುಲ್ಕ, ಡೆಲಿವರಿ ಬಾಯ್ಸ್ ಟಿಪ್ಸ್ ಇತ್ಯಾದಿ ಕೂಡ ಜಿಎಸ್ ಟಿ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗಾಗಿ ಶೇ.5ಕ್ಕಿಂತಲೂ ಹೆಚ್ಚಿನ ಪ್ರಮಾಣದ ಜಿಎಸ್ ಟಿ ವಿಧಿಸೋ ಸಾಧ್ಯತೆಯಿದೆ.
Tax Returns: ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ ಇಲ್ಲ: ಕೇಂದ್ರ
ಓಲಾ ಉಬರ್ ರೈಡ್ ಕಾಸ್ಟ್ಲಿ
ಇಂದಿನಿಂದ ಓಲಾ(Ola) ಅಥವಾ ಉಬರ್(Uber) ಮೂಲಕ ಆಟೋ (Auto)ಅಥವಾ ಕ್ಯಾಬ್(Cab) ಬುಕಿಂಗ್ ದುಬಾರಿಯಾಗಲಿದೆ ಓಲಾ ಹಾಗೂ ಉಬರ್ ಸೇವೆಗಳ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗಿದೆ.
ಅಂಚೆ ಬ್ಯಾಂಕ್
ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (IPPB) ಇಂದಿನಿಂದ ನಗದು ವಿತ್ ಡ್ರಾ (Withdraw) ಹಾಗೂ ಠೇವಣಿ(Deposits) ಮೇಲಿನ ಶುಲ್ಕಗಳನ್ನುಪರಿಷ್ಕರಿಸಿದೆ. ಉಳಿತಾಯ ಖಾತೆಯಿಂದ ನಿಗದಿತ ಮಿತಿಗಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡೋ ಶುಲ್ಕದಲ್ಲಿ ಹೆಚ್ಚಳ ಮಾಡಿದೆ.