
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಜುಲೈ14): ಕೋಲಾರದ ರೈತ ಕುಟುಂಬವೊಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ 38 ಲಕ್ಷ ರೂ.ಗೆ 2 ಸಾವಿರ ಬಾಕ್ಸ್ ಟೊಮೆಟೊ ಮಾರಾಟ ಮಾಡುವ ಮೂಲಕ ಕೋಲಾರದ ಮಾರುಕಟ್ಟೆಯಲ್ಲಿ ದಾಖಲೆ ಮಾಡಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲದ ಪ್ರಭಾಕರ್ ಗುಪ್ತಾ ಮತ್ತು ಅವರ ಸಹೋದರರು ತಮ್ಮ ಉತ್ಪನ್ನಗಳನ್ನು ತಲಾ 15 ಕೆಜಿಯ ಬಾಕ್ಸ್‌ಗೆ 1900 ರೂ.ನಂತೆ ಮಂಗಳವಾರದಂದು ಮಾರಾಟ ಮಾಡಿದ್ದು,15 ಕೆಜಿಯ ಟೊಮೆಟೊ ಬಾಕ್ಸ್ ಗರಿಷ್ಠ 2,200 ರೂ.ನಂತೆ ಮಾರಾಟವಾಗಿತ್ತು. ಆದರೆ ಬುಧವಾರ ಅದೇ ಬಾಕ್ಸ್‌ನ ಗರಿಷ್ಠ ಬೆಲೆ 1800 ರೂ. ಇತ್ತು.
ಬೇತಮಂಗಲದ 40 ಎಕರೆ ಜಮೀನಿನಲ್ಲಿ ಗುಪ್ತಾ ಮತ್ತು ಅವರ ಸಹೋದರರು ಕಳೆದ 40 ವರ್ಷದಿಂದ ತರಕಾರಿ ಕೃಷಿ ಮಾಡುತ್ತಿದ್ದಾರೆ. ರಸಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರಿಂದ ಕುಟುಂಬವು ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲಾಗುತ್ತಿದೆ ಎಂದು ಪ್ರಭಾಕರ್‌ರ ಸಹೋದರ ಸುರೇಶ್ ವಿವರಿಸಿದರು.
Ginger Price Hike: ಇತಿಹಾಸದಲ್ಲಿ ಇದೇ ಮೊದಲು, ಶುಂಠಿ ಬೆಲೆ 20 ಸಾವಿರಕ್ಕೆ ಏರಿಕೆ!
ಎರಡು ವರ್ಷದ ಹಿಂದೆ ಕೂಡ ಗುಪ್ತಾ ಕುಟುಂಬಕ್ಕೆ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿತ್ತು. ಆಗ 15 ಕೆಜಿ ಟೊಮೆಟೊ ಬಾಕ್ಸ್‌ಗೆ 800 ರೂ.ನಂತೆ ಕುಟುಂಬವು ಮಾರಾಟ ಮಾಡಿದೆ.
2.5 ಎಕರೆಯಲ್ಲಿ ಟೊಮೇಟೊ ಬೆಳೆದಿದ್ದೇನೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಸುಮಾರು 2.5 ಲಕ್ಷ ರೂ. ಖರ್ಚಾಗಿದೆ. ನಾನು 2.5 ಎಕರೆಯಲ್ಲಿ 300 ಬಾಕ್ಸ್ ಟೊಮೆಟೊ ಬೆಳೆಯುತ್ತಿದ್ದೆ. ಈಗ ಕೇವಲ 90 ಬಾಕ್ಸ್ ಟೊಮೆಟೊ ಸಿಕ್ಕಿದೆ ಎಂದು ರೈತ ಎಸ್.ಬಿ.ಕುಮಾರ್ ವಿವರಿಸಿದರು.
ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೇಟೊಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಮಂಗಳವಾರದಂದು 15 ಕೆಜಿ ಟೊಮೆಟೊ ಬಾಕ್ಸ್‌ಗೆ ಗರಿಷ್ಠ 2,200 ರೂ. ದೊರೆತಿತ್ತು. ಕೋಲಾರದಿಂದ ದಿನಕ್ಕೆ 8,000 ಮೆಟ್ರಿಕ್ ಟನ್ ಟೊಮೆಟೊ ಪೂರೈಕೆಯಾಗುತ್ತಿತ್ತು. ಈಗ ಕೇವಲ 1,000 ಮೆಟ್ರಿಕ್ ಟೊಮೆಟೊ ಪೂರೈಕೆ ಮಾಡಲಾಗುತ್ತಿದೆ.
ರೈತನಿಗೆ ಸವಾಲಾದ ಟೊಮೆಟೋ ಬೆಳೆ ರಕ್ಷಣೆ: ತೋಟದಲ್ಲಿ ದೊಣ್ಣೆ ಹಿಡಿದು ಕಾವಲು
ಬೇತಮಂಗಲದ ಪ್ರಭಾಕರ ಗುಪ್ತ ತಂದಿದ್ದು ಕೇವಲ 38 ಬಾಕ್ಸ್ ಅಷ್ಟೇ, ಕೋಲಾರದ ಎಪಿಎಂಸಿ ಮಂಡಿಯಲ್ಲಿ ಮಂಗಳವಾರ ಬೇತಮಂಗಲದ ಪ್ರಭಾಕರ ಗುಪ್ತ ಅವರ 1500 ಬಾಕ್ಸ್ ಟೊಮೇಟೋವು 1900 ರೂ. ಧಾರಣೆ ಕಂಡಿದೆ ಎಂದು ಕೆಆರ್‌ಎಸ್ ಮಂಡಿ ಮಾಲೀಕ ಛತ್ರಕೋಡಿಹಳ್ಳಿ ಆರ್.ಸುಧಾಕರ್ ತಿಳಿಸಿದರು.
ಕೊರೋನಾಗೆ ಮುನ್ನ 4-5 ವರ್ಷದ ಹಿಂದೆ ಟೊಮೇಟೋ ಬಾಕ್ಸ್ ಒಂದು 1600 ರೂ. ಗಳಿಗೆ ಬಿಕರಿ ಆಗಿದ್ದುದೇ ಅತ್ಯಂತ ಗರಿಷ್ಠವಾಗಿತ್ತು. ಮಂಗಳವಾರದ ದರವು ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ ಎಂದು ಅವರು ಹೇಳಿದರು.
ಕೋಲಾರದಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಟೊಮೆಟೊ ಬೆಳೆಯುವ ರೈತರು ಹಗಲಿರುಳು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.