ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಗೂಗಲ್ ಇಂಡಿಯಾ ಮತ್ತು ಅದರ ಅಧಿಕಾರಿಗಳಿಗೆ ವಿಧಿಸಲಾದ ದಂಡದ ಶೇಕಡ 50 ರಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಗಳ ರೂಪದಲ್ಲಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಈ ಕುರಿತು ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.
ಬೆಂಗಳೂರು (ಏ.15): ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ವಿಧಿಸಲಾದ ದಂಡದ ಶೇಕಡ 50 ರಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಗಳ ರೂಪದಲ್ಲಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಗೂಗಲ್ ಇಂಡಿಯಾ ಮತ್ತು ಅದರ ಮೂವರು ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದಂಡದಲ್ಲಿ ಗೂಗಲ್ ಇಂಡಿಯಾಕ್ಕೆ 5.25 ಕೋಟಿ ರೂ. ಮತ್ತು ಮೂವರು ಅಧಿಕಾರಿಗಳಿಗೆ ಒಟ್ಟಾರೆಯಾಗಿ 45 ಲಕ್ಷ ರೂ. ಸೇರಿವೆ. ಜನವರಿ 11, 2019 ರಂದು, ದೆಹಲಿಯ ಫೆಮಾ ಪ್ರಕರಣಗಳ ಮೇಲ್ಮನವಿ ನ್ಯಾಯಮಂಡಳಿಯು ಗೂಗಲ್ ಇಂಡಿಯಾದ ಮೇಲ್ಮನವಿ ಯನ್ನು ಒಪ್ಪಿ ದಂಡಗಳಿಗೆ ತಡೆ ನೀಡಿತು. ದಂಡಕ್ಕೆ ತಡೆ ನೀಡಿದ್ದನ್ನು ಪ್ರಶ್ಮಿಸಿ ED ಎರಡನೇ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಿತು.
ಫೆಮಾ ಸೆಕ್ಷನ್ 6(3)(d) ಅಡಿಯಲ್ಲಿ ಗೂಗಲ್ ಇಂಡಿಯಾ ಉಲ್ಲಂಘನೆಗಳನ್ನು ED ನ್ಯಾಯಾಲಯದಲ್ಲಿ ದಾಖಲೆ ಸಮೇತ ಆರೋಪಿಸಿದೆ. GIPL (
ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ತನ್ನ ಸಹವರ್ತಿ ಅಂಗಸಂಸ್ಥೆಯಿಂದ ಪೂರೈಕೆದಾರರ ಕ್ರೆಡಿಟ್ ರೂಪದಲ್ಲಿ ವಾಣಿಜ್ಯ ಸಾಲವನ್ನು ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಅನುಮೋದನೆಯನ್ನು ಪಡೆದಿಲ್ಲ ಎಂದು ED ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದೆ. ಇದರಲ್ಲಿ 364 ಕೋಟಿ ರೂ. ವಹಿವಾಟುಗಳು, ನಿರ್ದಿಷ್ಟವಾಗಿ ಗೂಗಲ್ ಐರ್ಲೆಂಡ್‌ಗೆ ವಿತರಕ ಶುಲ್ಕಗಳು ಮತ್ತು ಗೂಗಲ್ ಯುಎಸ್‌ನಿಂದ ಉಪಕರಣಗಳ ಖರೀದಿಗಳು ಸೇರಿವೆ.
ಗೂಗಲ್ ಅರ್ಥ್ ಮ್ಯಾಪ್‌ನಲ್ಲಿ ಭೂಗತ ಟವರ್ ಪತ್ತೆ, ಏಲಿಯನ್ ಲಾಂಚ್ ಪ್ಯಾಡ್ ಶಂಕೆ
ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಅಂಗ ಸಂಸ್ಥೆಯಾದ ಗೂಗಲ್ ಐರ್ಲೆಂಡ್‌ಗೆ ಬಾಕಿ ಇರುವ 363 ಕೋಟಿ ರೂ.ಗಳು ಮೇ 2014 ರವರೆಗೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಪಾವತಿಸದೆ ಉಳಿದಿವೆ. ಜೊತೆಗೆ ಗೂಗಲ್ ಯುಎಸ್‌ನಿಂದ 1 ಕೋಟಿ ರೂ.ಗಳು ಹೆಚ್ಚು ವ್ಯವಹಾರ ನಡೆಸಿ ಜನವರಿ 2014ರಿಂದ ಏಳು ವರ್ಷಗಳಿಗೂ ಹೆಚ್ಚು ಕಾಲ ಬಾಕಿ ನೀಡದೆ ಉಳಿಸಿಕೊಂಡಿದೆ ಎಂದು ಇಡಿ ದಾಖಲೆ ಸಮೇತ ನ್ಯಾಯಾಲಯಕ್ಕೆ ಉತ್ತರ ನೀಡಿದೆ.
ಇದಕ್ಕೆ ಸಮಜಾಯಿಷಿ ನೀಡಿರುವ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಯಾವುದೇ ಸಾಲ ಒಪ್ಪಂದಗಳು, ಯಾವುದೇ ಮುಂದೂಡಲ್ಪಟ್ಟ ಪಾವತಿಗಳು ಮತ್ತು ಯಾವುದೇ ಬಡ್ಡಿಯನ್ನು ಒಳಗೊಂಡಿಲ್ಲದ. ಇವು ಆರ್‌ಬಿಐ ಅನುಮೋದನೆ ಅಗತ್ಯವಿರುವ ವಾಣಿಜ್ಯ ಸಾಲಗಳಾಗಿವೆ ಹೊರತು ಫೆಮಾ ಅಡಿಯಲ್ಲಿ ವಿದೇಶಿ ವಿನಿಮಯ ಸಾಲಗಳಲ್ಲ ಎಂದು ಗೂಗಲ್ ಇಂಡಿಯಾ ವಾದಿಸಿದೆ. ಜುಲೈ 1, 2014 ರ ಆರ್‌ಬಿಐ ಸುತ್ತೋಲೆಯ ಅನುಸರಣೆಯನ್ನು ಇದು ಉಲ್ಲೇಖಿಸಿದೆ.
ವರ್ಷಗಟ್ಟಲೆ ರಜೆ ಕೊಟ್ಟು ಉದ್ಯೋಗಿಗಳಿಗೆ ಲಕ್ಷ ಲಕ್ಷ ಸಂಬಳ ಕೊಡ್ತಿದೆ ಗೂಗಲ್: ಕಾರಣ ಮಾತ್ರ ವಿಚಿತ್ರ!
ಇದೀಗ ಕರ್ನಾಟಕ ಹೈಕೋರ್ಟ್ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ (5.25 ಕೋಟಿ ರೂ.) ಮತ್ತು ಅದರ ಅಧಿಕಾರಿಗಳಾದ ಹರಿ ರಾಜು ಮಹಾದೇವು, ಪ್ರಸ್ತುತ ವಿವೇಕ್ ಛಬ್ರಾ (ತಲಾ 5 ಲಕ್ಷ ರೂ.), ಲಾಯ್ಡ್ ಹಾರ್ಟ್ಲಿ ಮಾರ್ಟಿನ್ ಮತ್ತು ಕೆಂಟ್ ವಾಕರ್ (20 ಲಕ್ಷ ರೂ.) ಅವರಿಗೆ ದಂಡ ವಿಧಿಸಿ ದಂಡಕ್ಕೆ ತಡೆ ನೀಡಲು ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದೆ.
ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್ ಮತ್ತು ಎಸ್ ರಾಚಯ್ಯ ಅವರ ವಿಭಾಗೀಯ ಪೀಠವು ನ್ಯಾಯಮಂಡಳಿಯ ತಡೆಯಾಜ್ಞೆಯು ಕೇವಲ ಪ್ರಾಥಮಿಕ ದೃಷ್ಟಿಕೋನವಾಗಿದೆ ಎಂದು ಹೇಳಿತು ಮತ್ತು ಎರಡು ವಾರಗಳಲ್ಲಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 5 ಕೋಟಿ 25 ಲಕ್ಷ ರೂ. ದಂಡದ ಮೊತ್ತದಲ್ಲಿ ಶೇ. 50ರಷ್ಟು ಬ್ಯಾಂಕ್ ಗ್ಯಾರಂಟಿ ಒದಗಿಸಬೇಕಾಗಿದೆ ಎಂದು ಹೇಳಿತು.