ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಬಜೆಟ್‌ನಲ್ಲಿ ಹೇಳಿಲ್ಲ. ಆದರೆ, ಈಗಾಗಲೇ 7ನೇ ವೇತನ ಆಯೋಗವನ್ನು ಅನುಷ್ಠಾನ ಮಾಡಲಾಗಿದ್ದು, ಇದೇ ವರ್ಷದಿಂದ ಅನುಷ್ಠಾನಕ್ಕೆ ಬರುತ್ತದೆ.
ಬೆಂಗಳೂರು (ಫೆ.17): ರಾಜ್ಯದ ಬಜೆಟ್ ಮಂಡನೆಯ ವೇಳೆ ಎಲ್ಲವನ್ನೂ ಹೇಳಲು ಆಗುವುದಿಲ್ಲ. ಹೀಗಾಗಿ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಬಜೆಟ್‌ನಲ್ಲಿ ಹೇಳಿಲ್ಲ. ಆದರೆ, ಈಗಾಗಲೇ 7ನೇ ವೇತನ ಆಯೋಗವನ್ನು ಅನುಷ್ಠಾನ ಮಾಡಲಾಗಿದ್ದು, ಇದೇ ವರ್ಷದಿಂದ ಅನುಷ್ಠಾನಕ್ಕೆ ಬರುತ್ತದೆ. ಕಳೆದ ವರ್ಷಕ್ಕಿಂತ 43,462 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಬಜೆಟ್ ಮಂಡನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಬಜೆಟ್ ನಲ್ಲಿ ಹೇಳಲು ಆಗಲ್ಲ. ಈಗಾಘಲೇ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಯಾಗಿದ್ದು, ಇದೇ ವರ್ಷ ಅನುಷ್ಠಾನಕ್ಕೆ ಬರಲಿದೆ. ಈಗ 2023-24 ರ ಬಜೆಟ್ ಮಂಡನೆ ಮಾಡಿದ್ದೇನೆ. ಕೋವಿಡ್ ಕಾಲದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಆರ್ಥಿಕ ತಜ್ಞರು ಕರ್ನಾಟಕ ಬಜೆಟ್ ಸಮಾನ್ಯ ವರ್ಷಗಳಂತೆ ಹಳಿಗೆ ಬರಲು 5-6 ವರ್ಷಗಳು ಬೇಕು ಎಂದು ಆರ್ಥಿಕ ತಜ್ಞರು ಹೇಳಿದ್ದರು. ಆದರೆ, ಕೇವಲ ಎರಡೇ ವರ್ಷ ದಲ್ಲಿ ಸುಧಾರಣೆ ಆಗಿದೆ. ನಮ್ಮ ಆರ್ಥಿಕ ಕ್ಷಮತೆಯ ಮೇಲೆ ವಿಶ್ವಾಸ ಬಂದಿದೆ ಎಂದು ಹೇಳಿದರು.
undefined
ಬಜೆಟ್ ಗಾತ್ರ ಶೇ.14 ಪರ್ಸೆಂಟ್ ಹೆಚ್ಚಳ: ಹಿಂದಿನ ಬಜೆಟ್ ಗಳನ್ನು ನೋಡಿದಾಗ, 6-7 ಪರ್ಸೆಂಟ್ ಮಾತ್ರ ಹೆಚ್ಚಾಗಿರುತ್ತದೆ. ಆದರೆ, ಈ ಸಲ ಶೆ.14 ಜಾಸ್ತಿ ಆಗಿದೆ. ಕಳೆದ ವರ್ಷ 2022-23ಕ್ಕೆ 2,65,720 ಕೋಟಿ ಬಜೆಟ್ ಗಾತ್ರ ಇತ್ತು. ಈ ವರ್ಷ ಸುಮಾರು 43,462 ಕೋಟಿ ರೂ. ಕಳೆದ ಬಾರಿಗಿಂತ ಹೆಚ್ಚಾಗಿದೆ. ಚುನಾವಣಾ ವರ್ಷ ಅಂತಾ ಬೇಜವಾಬ್ದಾರಿ ಯಿಂದ ಏನೂ ಘೋಷಣೆ ಮಾಡಿಲ್ಲ. ಪುಕ್ಕಟೆ ಕೊಡ್ತೀನಿ, ಮಹಿಳೆಯರಿಗೆ ಫ್ರೀ ಕೊಡ್ತೀನಿ ಅಂತಾ ಏನೋ ಘೋಷಣೆ ಮಾಡಬಹುದಿತ್ತು. ಮಾಡೋಕೆ ಸಾಧ್ಯ ಇಲ್ಲದೇ ಇರೋದನ್ನು ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ ಎಂದು ಕಾಂಗ್ರೆಸ್ ಘೋಷಣೆಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ರೈಲ್ವೆ ಯೋಜನೆ, ವಿಮಾನ ನಿಲ್ದಾಣ ಯೋಜನೆಗೆ ಚಾಲನೆ: ರೈಲ್ವೇಗಳ ಯೋಜನೆ ಪೂರ್ಣವಾಗಲು 7,650 ಅನುದಾನ ನೀಡಲಾಗಿದೆ. ನ್ಯಾಷನಲ್ ಹೈವೇ 6 ಸಾವಿರ ಕಿಮೀ ಆಗಿದೆ. ಇನ್ನೂ 6 ಸಾವಿರ ಕಿ.ಮೀ ಆಗಬೇಕಿದೆ. ಸಾಗರಮಾಲಾ ಯೋಜನೆ ಅಡಿಯಲ್ಲಿ ಪೋರ್ಟ್ ಅಭಿವೃದ್ಧಿ ಮಾಡಲಾಗುತ್ತಿದೆ. ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಮಾಡಲು ಮುಂದಾಗಿದ್ದೇವೆ. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣ ಈ ವರ್ಷ ಆಗಲಿದೆ. ಹಾಸನದಲ್ಲಿ ಹಣ ನೀಡಲಾಗಿದೆ. ದಾವಣಗೆರೆ, ಕೊಪ್ಪಳದಲ್ಲಿ DPIR ರೆಡಿಯಾಗಿದೆ. ಆದರೆ ಅನುಷ್ಠಾನ ಆಗಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್‌ನವರಿಗೆ ಇದೆಲ್ಲಾ ಏನು ಎಂದು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದರು.
Karnataka Budget 2023-24: ಮತದಾರರನ್ನು ಸೆಳೆಯುವಲ್ಲಿಯೂ ವಿಫಲವಾದ ಬೊಮ್ಮಾಯಿ ಬಜೆಟ್: ಕುಮಾರಸ್ವಾಮಿ ಟೀಕೆ
ಮಹಿಳೆಯರಿಗೆ ಉಚಿತ ಬಸ್‌ಪಾಸ್: ರಾಜ್ಯದಲ್ಲಿ ಎಲ್ಲ ವರ್ಗದ ದುಡಿಯುವ ಮಹಿಳೆಯರಿಗೆ ಸಂಪೂರ್ಣ ಉಚಿತ ಬಸ್ ಪಾಸ್ ನೀಡಲು ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ರೈತರಿಗೆ ಆಸ್ಪತ್ರೆಗಳು ಹತ್ತಿರ ಇರುವುದಿಲ್ಲ. ಲೈಫ್ ಇನ್ಸೂರೆನ್ಸ್ (ಜೀವನಜ್ಯೋತಿ) ಜಾರಿಗೆ ತಂದಿದ್ದೇವೆ. ಅವರಿಗೆ ಟ್ರೀಟ್ ಮೆಂಟ್ ಕೂಡಾ ಇದರಿಂದ ಸಿಗಲಿದೆ. ನೀರಾವರಿ ಕ್ಷೇತ್ರಕ್ಕೆ ಇಪ್ಪತ್ತೈದು ಸಾವಿರ ಕೋಟಿ ಕೊಟ್ಟಿದ್ದೇವೆ. ಸರ್ಕಾರಿ ಕಾಲೇಜುಗಳಲ್ಲಿ ಪದವಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.