Karnataka Budget 2023: ಕ್ಯಾನ್ಸರ್‌ ಪತ್ತೆಗೆ 'ಜೀವಸುಧೆ' ಶಿಬಿರ, ಉತ್ತರ ಕನ್ನಡಕ್ಕೆ 'ಸೂಪರ್‌ ಸ್ಪೆಷಾಲಿಟಿ' ಮೊಣಕೈಗೆ ತುಪ್ಪ!

By Santosh Naik  |  First Published Feb 17, 2023, 3:00 PM IST

ಬಜೆಟ್‌ನಲ್ಲಿ ಆರೋಗ್ಯ  ಕ್ಷೇತ್ರಕ್ಕೆ ಬಂಪರ್‌ ಘೋಷಣೆ ಮಾಡಿದ್ದಾರೆ. ಚಾಮರಾಜನಗರಕ್ಕೆ ಹೊಸ ಆಸ್ಪತ್ರೆ ಘೋಷಣೆಯಾಗಿದ್ದಾರೆ, ರಾಯಚೂರಿನಲ್ಲಿ ಏಮ್ಸ್‌ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಉತ್ತರ ಕನ್ನಡದ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದರೂ ಅದಕ್ಕೆ ಎಷ್ಟು ಹಣ ಮೀಸಲಾಗಿದೆ ಎಂದು ತಿಳಿಸಿಲ್ಲ.
 


ಬೆಂಗಳೂರು (ಫೆ.17): ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಅಸ್ಪತ್ರೆಗಾಗಿ ಉತ್ತರ ಕನ್ನಡದ ಜನತೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಅದರಂತೆ ಸರ್ಕಾರ ಕೂಡ ಜಿಲ್ಲೆಯಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿತ್ತು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸಿನಲ್ಲಿದ್ದ ಉತ್ತರ ಕನ್ನಡದ ಜನತೆಗೆ ಬಜೆಟ್‌ನಲ್ಲಿ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಇದಕ್ಕೆ ಹಣ ಮೀಸಲಿಡದೇ ಇರುವುದು ಬಹುಶಃ ಇದು ಎಲೆಕ್ಷನ್‌ ಟೈಮ್‌ನ 'ಮೊಣಕೈ ತುಪ್ಪ' ಅನ್ನೋ ಅನುಮಾನ ಜನರಲ್ಲಿ ಕಾಡಿದೆ. ಅದರೊಂದಿಗೆ ತಾಲೂಕಾ ಆಸ್ಪತ್ರೆಗಳಿಲ್ಲದ ಪ್ರದೇಶಗಳಾದ ಖಾನಾಪುರ, ಆನೇಕಲ್‌, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನೇ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ತೃತೀಯ ಹಂತದ ಆರೈಕೆಯನ್ನು ಒದಗಿಸಲು 50 ಹಾಸಿಗೆಯ ಕ್ರಿಟಿಕಲ್‌ ಕೇರ್‌  ಬ್ಲಾಕ್‌ಗಳನ್ನು ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಮತ್ತು ದೊಡ್ಡಬಳ್ಳಾಪುರದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ತುಮಕೂರು ಹಾಗೂ ಬೆಂಗಳೂರಿನಲ್ಲಿ 100 ಹಾಸಿಗೆಗಳ ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗಳನ್ನು ಸ್ಥಾಪಿಸಲಾಗುತ್ತದೆ. ಹಾವೇರಿ ಹಾಗೂ ಸವಣೂರಿನಲ್ಲಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತದೆ.

Karnataka Budget 2023: ಬಜೆಟ್ ಮಂಡನೆ ಮುಗಿಸಿದ ಸಿಎಂ, ಸೋಮವಾರಕ್ಕೆ ಕಲಾಪ ಮುಂದೂಡಿಕೆ 

Tap to resize

Latest Videos

undefined

ಮನೆ ಮನೆಗೆ ಆರೋಗ್ಯ ಎನ್ನುವ ಯೋಜನೆಯ ಅಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುತ್ತದೆ. ಹ್ಯಾಂಡ್‌ ಹೆಲ್ಡ್‌ ಎಕ್ಸ್‌ರೇ ಯಂತ್ರಗಳ ಸಹಾಯದಿಂದ ಕ್ಷಯ ರೋಗಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಈ ಯಂತ್ರ ಖರೀದಿಗಾಗಿ 12.50 ಕೋಟಿ ರೂಪಾಯಿ ಪ್ರಸ್ತಾಪ ಮಾಡಲಾಗಿದೆ.

Karnataka Budget 2023 ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಆದ್ಯತೆ;ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ

ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸ್ಥಳೀಯವವಾಗಿಯೇ ಪ್ರಯೋಗಾಲಯ ಸೇವೆ ಒದಗಿಸಲು 129 ತಾಲೂಕು ಪ್ರಯೋಗಾಲಯ, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯ ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫರಲ್‌ ಪ್ರಯೋಗಾಲಯ ಸ್ಥಾಪನೆ. ಅದರೊಂದಿಗೆ ರಾಯಚೂರಿನಲ್ಲಿ ಏಮ್ಸ್‌ ಮಾದರಿಯ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತದೆ.

ಕ್ಯಾನ್ಸರ್‌ ಪತ್ತೆಗೆ ಜೀವಸುಧೆ: ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್‌ ಪತ್ತೆ ಹಚ್ಚಲು ಜೀವಸುಧೆ ಎನ್ನುವ ವ್ಯಾಪಕ ತಪಾಸಣಾ ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜನೆ ಮಾಡಲಾಗುತ್ತದೆ. ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಪಡಡೆಯಲು ತೃತೀಯ ಆರೈಕೆ ಆಸ್ಪತ್ರೆಗೆಳಿಗೆ ಕಳುಹಿಸಲಾಗುತ್ತದೆ. ಕ್ಯಾನ್ಸರ್‌ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗೆ 12 ಕೋಟಿ ರೂ ಅನುದಾನ.


ಆರೋಗ್ಯ ಕ್ಷೇತ್ರದ ಹೈಲೈಟ್ಸ್‌ಗಳು
- ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್‌ರಮ
- ರಕ್ತ ಹೀನತೆ ಹಾಗೂ ಅಪೌಷ್ಟಿಯಕತೆನ್ನು ನಿವಾರಿಸಲು ಉದ್ದೇಶಿ ಪರೀಕ್ಷೆ, ಚಿಕಿತ್ಸೆ, ಜನಜಾಗೃತಿ ಹಾಗೂ ತರಬೇತಿಗೆ 100 ಕೋಟಿ ರೂಪಾಯಿ
- ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು ರಾಜ್ಯದಲ್ಲಿ ಇನ್ನಷ್ಟು ಏರಿಕೆ
- ನಿಮಾನ್ಸ್‌ ನೆರವಿನೊಂದಿಗೆ ರಾಜ್ಯ ಮೆದುಳು ಆರೋಗ್ಯ ಯೋಜನೆಗೆ 25 ಕೋಟಿ ರೂಪಾಯಿ
- ಉಚಿತ ಡಯಾಲಿಸಿಸ್‌ ಸೇವೆಯನ್ನು 1 ಲಕ್ಷ ಡಯಾಲಿಸಿಸ್‌ ಸೈಕಲ್‌ಗಳಿಗೆ ವಿಸ್ತರಣೆ
-ಹೆರಿಗೆಯಾದ ತಾಯಂದಿರುವ ಮತ್ತು ನವಜಾತ ಶಿಶುಗಳಿಗೆ ಸುರಕ್ಷಿತವಾಗಿ ಮನೆಗೆ ತಲುಪಿಸುವ ಸಾರಿಗೆ ಸೌಲಭ್ಯವಾದ ನಗುಮಗು ಯೋಜನೆಗೆ 12.5 ಕೋಟಿ ವೆಚ್ಚದಲ್ಲಿ ಹೊಸ ವಾಹನ
- ಆರೋಗ್ಯ ಇಲಾಖೆಯ ಸೇವೆಗಳನ್ನು ಇನ್ನಷ್ಟು ಸುರಳ ಮತ್ತು ಪಾರದರ್ಶಕ
- ಕೊಡಗು ಮತ್ತು ಕಾರವಾರದಲ್ಲಿ ಪ್ರಗತಿಯಲ್ಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ನಿರ್ಮಾಣ ಈ ವರ್ಷ ಪೂಣ.
- ಬೆಂಗಳೂರಿನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ.
- ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಐವಿಎಫ್‌ ಕ್ಲಿನಿಕ್‌ಗಳನ್ನು 6 ಕೋಟಿ ವೆಚ್ಚದಲ್ಲಿ ಪ್ರಾರಂಭ.
- ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ವೆಚ್ಚದಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇದ್ರೀಕೃತ ರಕ್ತನಿಧಿ ನಿವರ್ಹಣಾ ವ್ಯವಸ್ಥೆ ಸ್ಥಾಪನೆ.
- ನಿಮಾನ್ಸ್‌ ಸಂಸ್ಥೆ ಆವರಣದಲ್ಲಿ 146 ಕೋಟಿ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸಲು ಕ್ರಮ.
 

click me!