Karnataka Budget 2023-24: ಮತದಾರರನ್ನು ಸೆಳೆಯುವಲ್ಲಿಯೂ ವಿಫಲವಾದ ಬೊಮ್ಮಾಯಿ ಬಜೆಟ್‌: ಕುಮಾರಸ್ವಾಮಿ ಟೀಕೆ

By Sathish Kumar KH  |  First Published Feb 17, 2023, 3:19 PM IST

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಮತಗಳನ್ನು ಸೆಳೆಯುವಲ್ಲಿ, ಜನರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.


ರಾಮನಗರ (ಫೆ.17): ರಾಜ್ಯ ಸರ್ಕಾರ ಇಂದು ಮಂಡಿಸಿರುವ ಬಜೆಟ್‌ಗೆ ಯಾವುದೇ ಮನ್ನಣೆ ಸಿಗುವುದಿಲ್ಲ. ಮುಂದಿನ ಮೇ ತಿಂಗಳು ಚುನಾವಣೆ ಇರುವುದರಿಂದ ಮಾರ್ಚ್- ಏಪ್ರಿಲ್‌ ನಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೆ ಬಜೆಟ್ ಮಂಡಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಮತಗಳನ್ನು ಸೆಳೆಯುವಲ್ಲಿ, ಜನರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯ ಬಜೆಟ್‌ ಬಗ್ಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತಿನ ಚುನಾವಣೆ ಪೂರ್ವದಲ್ಲಿ ಮಂಡನೆಯಾಗಿರುವ ಬಜೆಟ್ ಆಗಿದೆ. ಈ ಬಜೆಟ್ ಗೆ ಯಾವುದೇ ರೀತಿಯ ಮನ್ನಣೆ ಕೊಡೊದಿಲ್ಲ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಇದೆ. ಮಾರ್ಚ್- ಏಪ್ರಿಲ್‌ ನಲ್ಲಿ ಸಂಬಳ ಕೋಡೊದಕ್ಕೆ ಬಜೆಟ್ ಮಂಡಿಸಲಾಗಿದೆ. ಮುಂದೆ ಬರುವ ಸರ್ಕಾರ ಬಜೆಟ್ ಮಂಡನೆ ಮಾಡ್ತಾರೆ.

Tap to resize

Latest Videos

undefined

Karnataka Budget 2023-24: ರಾಜ್ಯದ ಸಾಲದ ಮೊತ್ತ 5,64,896 ಕೋಟಿ ರೂ.ಗೆ ಏರಿಕೆ: ಅಧಮ ಸರ್ಕಾರವೆಂದ ಸಿದ್ದರಾಮಯ್ಯ ಟೀಕೆ

ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ:  ನನಗೆ ಮಾಹಿತಿ ಇರುವ ಪ್ರಕಾರ  ಈಗಾಗಲೇ ನಾನು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ವಾತಾವರಣ ನೋಡಿದ್ರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ. ನಾನು ಸ್ವಲ್ಪ ಇನ್ ಟೆನ್ಸನ್ ಇಟ್ಟುಕೊಂಡಿದ್ದೆನು. ವೋಟ್ ಹಾಕಿಸಿಕೊಳ್ಳುವ ಸಲುವಾಗಿ ಆದ್ರೂ ಜನರನ್ನು‌ ಮೆಚ್ಚಿಸಲು ಬಜೆಟ್ ಮಂಡಿಸ್ತಾರೆ ಅಂದುಕೊಂಡಿದ್ದೆ. ಆದರೆ, ಬಿಜೆಪಿಯ ಮಂತ್ರಿ, ಶಾಸಕರುಗಳಿಂದಲೇ ಈ ಬಜೆಟ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವತ್ತಿನ ಬಜೆಟ್ ಗೆ ಅಷ್ಟು ಮಹತ್ವ ನಾನು ನೀಡೊದಿಲ್ಲ. ಬಿಜೆಪಿ ಮುಂದೆ ಸ್ವತಂತ್ರವಾಗಿ ಸರ್ಕಾರ ಬರೋದಕ್ಕೆ ಸಾಧ್ಯವೇ ಇಲ್ಲ ಎಂದರು.

ರಾಮನಗರದಲ್ಲಿ ರಾಮಮಂದಿರ ನಾನೇ ನಿರ್ಮಿಸಬೇಕು: ರಾಮನಗರದಲ್ಲಿ ಬೃಹತ್ ರಾಮಂದಿರ ನಿರ್ಮಾಣ ಘೋಷಣೆ ಮಾಡಿದ್ದಾರೆ. ಅವರು ಬಜೆಟ್ ನಲ್ಲಿ ಘೋಷಣೆ ಮಾಡಿದರೆ ಮುಂದೆ ರಾಮಮಂದಿರ ನಾನೇ ನಿರ್ಮಾಣ ಮಾಡಬೇಕು. ಅವರು ಮೂರು ವರ್ಷದ ಹಿಂದೆಯೇ ಘೋಷಣೆ ಮಾಡಿ ರಾಮಮಂದಿರ ಕಟ್ಟಿದ್ದರೆ ಮೆಚ್ಚುತ್ತಿದ್ದೆ. ಇದೀಗ ಚುನಾವಣೆ ಎರಡು ತಿಂಗಳು ಇರಬೇಕಾದರೆ ಘೋಷಣೆ ಮಾಡಿದ್ದಾರೆ. ಇದು ಬಜೆಟ್ ಬುಕ್ ನಲ್ಲೇ ಇರುತ್ತದೆ.

ದೇವೆಗೌಡರ ಕುಟುಂಬದ ಮೇಲೆ ಅಭಿಮಾನ: ನನಗೆ ಗೊತ್ತಿದೆ ಮುಂದಿನ ಚುನಾವಣೆಯಲ್ಲಿ ಯಾವ ಸರ್ಕಾರ ಬರುತ್ತೆ ಅನ್ನೋದು ನನಗೆ ಗೊತ್ತಿದೆ. ಅವರು ಘೋಷಣೆ ಮಾಡಿದ್ರೂ‌ ನಾನೇ ರಾಮಮಂದಿರ ನಿರ್ಮಾಣ ಮಾಡಬೇಕು. ರಾಮನಗರದಲ್ಲಿ ಬಂದು ರಾಮಮಂದಿರ ನಿರ್ಮಾಣ ಮಾಡಿದ್ರೆ ಬಿಜೆಪಿ ಅಧಿಕಾರಕ್ಕೆ ಬರೋಕಾಗುತ್ತಾ. ರಾಮನಗರ, ಮಂಡ್ಯದಲ್ಲಿ ಬಂದು ಡೈನಾಮೆಟ್ ಇಟ್ಟು ಚಿದ್ರ ಮಾಡ್ತೀನಿ ಅಂದ್ರೆ ಅದು ಆಗುತ್ತಾ..? ಇದು ಯಾವುದೂ ವಾಸ್ತವಾಂಶಕ್ಕೆ ಬರೋದಿಲ್ಲ. ಈ ಭಾಗದ ಜಿಲ್ಲೆಯ ಜನರಿಗೆ ದೇವೆಗೌಡರ ಕುಟುಂಬದ ಮೇಲೆ ವಿಶೇಷವಾದ ಅಭಿಮಾನ ಇದೆ ಎಂದು ತಿಳಿಸಿದರು.

 

Karnataka budget 2023-24: ನೀರಾವರಿಗೆ 11,236 ಕೋಟಿ ಕೊಡುಗೆ: 38 ಯೋಜನೆಗಳಿಗೆ ಅನುಮೋದನೆ

ಸಾಲ ಮನ್ನಾ ಮಾಡಿದ್ದರಿಂದ ಡಿಸಿಸಿ ಬ್ಯಾಂಕ್‌ ಉಳಿದುಕೊಂಡಿವೆ: ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತೇವೆಂದು ಹೇಳಿದ್ದಾರೆ. ಒಂದು ವರ್ಷದಲ್ಲಿ ರೈತರು ಸಾಲ ಮರುಪಾವತಿ ಮಾಡಲಿಲ್ಲ ಅಂದರೆ ಅದಕ್ಕೆ ಬಡ್ಡಿ ಕಟ್ಟಬೇಕಲ್ಲ. ರೈತರು ಸಾಲಗಾರರು ಆಗದ ರೀತಿಯಲ್ಲಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ಕೆಲಸ ಮಾಡಬೇಕು. ಬರಿ ಸಾಲ ಕೊಡ್ತಿವಿ ಎಂದರೆ ಆಗುತ್ತದೆಯೇ.? ಸಾಲ ಕೋಡೊದು ಸರ್ಕಾರ ಅಲ್ಲ. ಡಿಸಿಸಿ ಬ್ಯಾಂಕ್ ಸಾಲ ಕೋಡೊದು. ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ಕೊಡೊದಿಲ್ಲ. ಕುಮಾರಸ್ವಾಮಿ‌ ಇಲ್ಲ ಅಂದಿದ್ದರೆ ಹಲವು ಕಡೆ ಡಿಸಿಸಿ ಬ್ಯಾಂಕ್ ಗಳು ಮುಚ್ಚಿಹೋಗುತ್ತಿದ್ದವು. ನಾನು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ನಾನು ಡಿಸಿಸಿ ಬ್ಯಾಂಕ್ ಗೆ ಶಕ್ತಿ‌ ನೀಡಿದ್ದೇನೆ. ಅದರಿಂದಾನೇ ಈಗ ಬಿಜೆಪಿ ಅವರೂ ಸಾಲ ನೀಡ್ತಿನಿ ಅಂತ ಹೇಳುತ್ತಿದೆ ಎಂದರು.

click me!