
ಪ್ರತಿಯೊಬ್ಬರ ಮನೆಯಲ್ಲೂ ವಿದ್ಯುತ್ ಇದೆ. ಮನೆಯಲ್ಲಿ ಟಿವಿ, ಫ್ರಿಡ್ಜ್ ವಾಷಿಂಗ್ ಮಷಿನ್, ಕೂಲರ್ ಹೀಗೆ ವಿದ್ಯುತ್ ನಿಂದ ಓಡುವ ವಸ್ತುಗಳ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಇವುಗಳ ಬಳಕೆ ಹೆಚ್ಚಾದಂತೆ ವಿದ್ಯುತ್ ಬಿಲ್ ಕೂಡ ಹೆಚ್ಚು ಬರುತ್ತದೆ. ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಕೂಡ ವಿದ್ಯುತ್ ಅಗತ್ಯವಿದೆ. ವಿದ್ಯುತ್ ಬಿಲ್ ವಿಪರೀತ ಬರ್ತಿದೆ, ಅದನ್ನು ಕಡಿಮೆ ಮಾಡ್ಬೇಕು ಎನ್ನುವವರು ಸೋಲಾರ್ ಬಳಕೆ ಮಾಡಲು ಆಸಕ್ತಿ ತೋರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಸೋಲಾರ್ ಗೆ ಹೆಚ್ಚಿನ ಬೇಡಿಕೆಯಿದೆ. ಸರ್ಕಾರ ಕೂಡ ಅದ್ರ ಬಳಕೆಗೆ ಪ್ರೋತ್ಸಾಹ ನೀಡ್ತಿದೆ. ಈ ಸಮಯದಲ್ಲಿ ನೀವು ಸೋಲಾರ್ ಪ್ಯಾನಲ್ ವ್ಯಾಪಾರ ಶುರು ಮಾಡಿ ಆದಾಯ ಗಳಿಸಬಹುದು. ನಾವಿಂದು ಸೋಲಾರ್ ಪ್ಯಾನಲ್ ಬ್ಯುಸಿನೆಸ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಸೋಲಾರ್ (Solar) ಪ್ಯಾನಲ್ ಅಂದ್ರೇನು? : ಸೋಲಾರ್ ಪ್ಯಾನೆಲ್ (Panel ) ಎಂದರೆ ಸೌರಶಕ್ತಿಯಿಂದ ವಿದ್ಯುತ್ (Electricity) ಉತ್ಪಾದನೆಗೆ ಬಳಸುವ ಸಾಧನ. ನೀವು ಇದನ್ನು ಮನೆ ಮನೆಗೆ ಅಳವಡಿಸುವ ಮೂಲಕ ಅಥವಾ ಸಾಧನಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು.
ಸೋಲಾರ್ ಪ್ಯಾನಲ್ ಏನು ಮಾಡುತ್ತೆ? : ಸೋಲಾರ್ ಪ್ಯಾನಲ್ ಚೌಕಾಕಾರದಲ್ಲಿರುತ್ತದೆ. ಇದು ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಕೆಲಸವನ್ನು ಮಾಡಲಾಗುತ್ತದೆ. ವಿದ್ಯುತ್ತಿನಿಂದ ಓಡುವ ವಸ್ತುಗಳನ್ನು ನಾವು ಇದ್ರಲ್ಲೂ ಚಲಾಯಿಸಬಹುದು. ಸೌರ ಶಕ್ತಿಯು ವಿದ್ಯುತ್ ಉತ್ಪಾದಿಸುವ ಒಂದು ಮಾರ್ಗವಾಗಿದೆ.
Business Ideas : ಮನೆ ಸೌಂದರ್ಯ ಹೆಚ್ಚಿಸುವ ಬಿದಿರು ಆದಾಯದ ಮೂಲ
ಸೋಲಾರ್ ಪ್ಯಾನಲ್ ವ್ಯಾಪಾರ ? : ನೀವು ಸೋಲಾರ್ ಪ್ಯಾನಲ್ ವ್ಯವಹಾರವನ್ನು ನಗರ ಅಥವಾ ಹಳ್ಳಿ ಎರಡೂ ಕಡೆ ಶುರು ಮಾಡಬಹುದು. ಹಳ್ಳಿಗಳಲ್ಲಿ ವಿದ್ಯುತ್ ಬಳಕೆ ಈಗ ಹೆಚ್ಚಾಗಿದೆ. ಜೊತೆಗೆ ಅಲ್ಲಿ ವಿದ್ಯುತ್ ಕಡಿತವೂ ಹೆಚ್ಚಿದೆ. ಹಾಗಾಗಿ ನೀವು ಹಳ್ಳಿಯಲ್ಲಿ ಕೂಡ ಈ ಬ್ಯುಸಿನೆಸ್ ಶುರು ಮಾಡಿ ಆದಾಯ ಗಳಿಸಬಹುದು.
ಸೋಲಾರ್ ಪ್ಯಾನಲ್ ಬ್ಯುಸಿನೆಸ್ ನಲ್ಲಿ ಅನೇಕ ವಿಧಗಳಿವೆ. ನೀವು ಸೋಲಾರ್ ಸಿಸ್ಟಮ್ ಅಸೋಸಿಯೇಟ್, ಸೋಲಾರ್ ಪ್ಯಾನಲ್ ದುರಸ್ತಿ ಮತ್ತು ನಿರ್ವಹಣೆ, ಸೋಲಾರ್ ಪ್ಯಾನಲ್ ತಯಾರಿಕೆ, ಸೋಲಾರ್ ಪ್ಯಾನಲ್ ವಿತರಕ, ಸೋಲಾರ್ ಪ್ಯಾನಲ್ ಅಳವಡಿಕೆ, ಸೋಲಾರ್ ಅಡಿಟರ್ ಹೀಗೆ ನಿಮಗೆ ಇಷ್ಟದ ಕೆಲಸವನ್ನು ನೀವು ಮಾಡ್ಬಹುದು. ಇದ್ರಲ್ಲಿ ಯಾವುದೇ ಕೆಲಸ ಮಾಡುವುದಾದ್ರೂ ನೀವು ಕೆಲಸದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು.
ಸೋಲಾರ್ ಪ್ಯಾನಲ್ ವ್ಯವಹಾರಕ್ಕೆ ನೋಂದಣಿ : ಸೋಲಾರ್ ಪ್ಯಾನೆಲ್ ವ್ಯವಹಾರದಲ್ಲಿ ನೋಂದಣಿ ಮತ್ತು ಪರವಾನಗಿ ಅಗತ್ಯವಿರುತ್ತದೆ. ಹಾಗೆ TIN ಸಂಖ್ಯೆ, GST ನೋಂದಣಿ ಮಾಡಿಸಿಕೊಳ್ಳಬೇಕು.
ಸರ್ಕಾರಿ ಸೋಲಾರ್ ಪ್ಯಾನಲ್ ಅಳವಡಿಕೆ ಹೇಗೆ? : ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸರ್ಕಾರಿ ಸೋಲಾರ್ ಪ್ಯಾನಲ್ ಕೂಡ ಅಳವಡಿಸಲಾಗ್ತಿದೆ. ಅದನ್ನು ನೀವೂ ಪಡೆಯಬೇಕೆಂದ್ರೆ ಮೊದಲು ಅಧಿಕೃತ ವೆಬ್ಸೈಟ್ https://solarrooftop.gov.in/ ಗೆ ಅರ್ಜಿ ಸಲ್ಲಿಸಬೇಕು. ನಂತ್ರ ಅಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ, ಸಲ್ಲಿಸಬೇಕಾಗುತ್ತದೆ.
ಸೋಲಾರ್ ಪ್ಯಾನಲ್ ವ್ಯವಹಾರದಲ್ಲಿ ಹೂಡಿಕೆ : ನೀವು ಯಾವ ಕೆಲಸ ಆಯ್ಕೆ ಮಾಡಿಕೊಳ್ತಿರಿ ಎಂಬುದು ಮುಖ್ಯವಾಗುತ್ತದೆ. ಹಾಗೆಯೇ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಬಯಸಿದರೆ ಕನಿಷ್ಠ 1 ರಿಂದ 2 ಲಕ್ಷ ಖರ್ಚು ಮಾಡಬೇಕಾಗುತ್ತದೆ. ಸೋಲಾರ್ ಪ್ಯಾನಲ್ ವಿತರಕರಾಗಿ ಕೆಲಸ ಮಾಡಲು ಬಯಸಿದ್ರೆ ಹೆಚ್ಚಿನ ಹಣ ಹೂಡಿಕೆ ಮಾಡ್ಬೇಕು.
Personal Finance : ಇಂಟರ್ವ್ಯೂ ಸಂದರ್ಭದಲ್ಲಿ ಸಂಬಳದ ಸಮಾಲೋಚನೆ ಮಾಡಿದರೇನಾಗುತ್ತೆ?
ಸೋಲಾರ್ ಪ್ಯಾನಲ್ ವ್ಯವಹಾರದಿಂದ ಲಾಭ : ಸೋಲಾರ್ ಪ್ಯಾನಲ್ ವ್ಯವಹಾರದಲ್ಲಿ ಸಾಕಷ್ಟು ಲಾಭವಿದೆ. ನೀವು ಹೀಗೆ ಸೇವೆ ನೀಡ್ತಿರಿ ಎಂಬುದನ್ನು ಇದು ಆಧರಿಸಿದೆ. ಗುಣಮಟ್ಟದ ಸೋಲಾರ್ ಪ್ಯಾನಲ್ ನೀಡುವ ಮೂಲಕ ಗ್ರಾಹಕರ ಮನಗೆದ್ದರೆ ನೀವು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು. ನೀವು ಕೆಲ ಕಂಪನಿ ಫ್ರ್ಯಾಂಚೈಸಿ ತೆಗೆದುಕೊಂಡು ಈ ವ್ಯವಹಾರ ಶುರು ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.