Karnataka Budget 2022: ಕರ್ನಾಟಕದ ಅಭಿವೃದ್ಧಿಗಾಗಿ ಯಾವ ಇಲಾಖೆಗೆ ಎಷ್ಟು ಅನುದಾನ?

By Suvarna News  |  First Published Mar 4, 2022, 1:29 PM IST

* ಕರ್ನಾಟಕ ಬಜೆಟ್ 2022-23 
* ಕರ್ನಾಟಕದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್
* ಯಾವ ಇಲಾಖೆಗೆ ಎಷ್ಟು ಅನುದಾನ?


ಬೆಂಗಳೂರು, (ಮಾ.04): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲ ಬಾರಿಗೆ ಇಂದು (ಮಾರ್ಚ್ 4) ವಿಧಾನಸೌಧದಲ್ಲಿ ಕರ್ನಾಟಕ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. 

2,53,165 ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿರುವ ಸಿಎಂ ಬೊಮ್ಮಾಯಿ ಅವರು ವಿವಿಧ ಇಲಾಖೆಗಳ ಅಭಿವೃದ್ಧಿ ಅನುದಾನ ಹಂಚಿಕೆ ಮಾಡಿದ್ದಾರೆ.

Tap to resize

Latest Videos

undefined

Karnataka Budget 2022 Live: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌, ಕ್ಷಣ ಕ್ಷಣದ ಅಪ್ಡೇಟ್ಸ್

ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ , ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ, ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ – ಪಾಲುದಾರಿಕೆಯೊಂದಿಗೆ ಅಭಿವೃದ್ಧಿ ಹಾಗೂ ನವಭಾರತಕ್ಕಾಗಿ ನವ ಕರ್ನಾಟಕ  ಹೊಸ ಚಿಂತನೆ, ಹೊಸ ಚೈತನ್ಯದ ಜತ ಹೊಸ ಮುನ್ನೋಟ ಎಂಬ ನೆಲೆಯಲ್ಲಿ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಇದೆ.ಇನ್ನು ಯಾವ ಇಲಾಖೆಗೆ ಎಷ್ಟು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ..

ಯಾವ ಇಲಾಖೆಗೆ ಎಷ್ಟು ಅನುದಾನ?

* ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 8,457 ಕೋಟಿ ರೂ. ಅನುದಾನ
* ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 13,982 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆಗೆ 17,325 ಕೋಟಿ ರೂ.
* ಇಂಧನ ಇಲಾಖೆಗೆ 12,655 ಕೋಟಿ ರೂಪಾಯಿ ಅನುದಾನ 
* * ಕಂದಾಯ ಇಲಾಖೆಗೆ 16,388 ಕೋಟಿ ರೂಪಾಯಿ ಅನುದಾನ
* ಆಹಾರ ಇಲಾಖೆಗೆ 2,288 ಕೋಟಿ ರೂಪಾಯಿ ಅನುದಾನ, 
* ವಸತಿ ಇಲಾಖೆಗೆ 3,594 ಕೋಟಿ ರೂಪಾಯಿ ಅನುದಾನ
 * ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,713 ಕೋಟಿ ಅನುದಾನ, 
 * ಸಮಾಜ ಕಲ್ಯಾಣ ಇಲಾಖೆಗೆ 9,389 ಕೋಟಿ ಅನುದಾನ
* ಲೋಕೋಪಯೋಗಿ ಇಲಾಖೆಗೆ 10,447 ಕೋಟಿ ರೂ.
* ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 11,222 ಕೋಟಿ ರೂ.
* ಜಲ ಸಂಪನ್ಮೂಲ ಇಲಾಖೆಗೆ 20,601 ಕೋಟಿ ಅನುದಾನ
* ಶಿಕ್ಷಣ ಇಲಾಖೆಗೆ 31,980 ಕೋಟಿ ರೂಪಾಯಿ ಅನುದಾನ.
*  ನಗರಾಭಿವೃದ್ಧಿ ಇಲಾಖೆಗೆ 16,076 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.
 

click me!