100 ಸಾರ್ಥಕ ವರ್ಷ: ಮಂಗಳೂರಲ್ಲಿ ಕರ್ಣಾಟಕ ಬ್ಯಾಂಕ್‌ ಶತಮಾನ ಸಂಭ್ರಮ

By Kannadaprabha News  |  First Published Feb 19, 2023, 4:30 AM IST

ಹಲವು ವರ್ಷಗಳಿಂದ ನಿರಂತರವಾಗಿ ತಂತ್ರಜ್ಞಾನವು ನಮ್ಮ ಜೀವನವನ್ನು ರೂಪಿಸಿಕೊಂಡು ಬಂದಿದೆ. ಇಂದು ತಂತ್ರಜ್ಞಾನವಿಲ್ಲದೆ ಕೆಲವೇ ನಿಮಿಷಗಳನ್ನೂ ಕಳೆಯುವುದು ಕಷ್ಟಎಂಬಷ್ಟರ ಮಟ್ಟಿಗೆ ನಮ್ಮ ಜೀವನವನ್ನು ಪ್ರಭಾವಿತಗೊಳಿಸಿದೆ. ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಐದು ಪಟ್ಟು ಹೆಚ್ಚಳವಾಗಿದ್ದರೆ, ಹಾಲಿನ ಉತ್ಪಾದನೆಯಲ್ಲಿ ಬೃಹತ್‌ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. 


ಮಂಗಳೂರು(ಫೆ.19): ಕೃಷಿಯಿಂದ ಹಿಡಿದು ಆರೋಗ್ಯದವರೆಗೆ ತಂತ್ರಜ್ಞಾನದ ಕ್ರಾಂತಿಕಾರಕ ಬದಲಾವಣೆಯಿಂದ ನಮ್ಮ ಜೀವನ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಇಂಥ ಸಮಯದಲ್ಲಿ ಭಾರತದ ಪ್ರಾಚೀನ ಜ್ಞಾನ ಪರಂಪರೆಯನ್ನು ಮರೆಯದಿರೋಣ ಎಂದು ಬೆಂಗಳೂರು ಐಐಐಟಿಯ ಮಾಜಿ ನಿರ್ದೇಶಕ ಪ್ರೊ.ಎಸ್‌. ಸಡಗೋಪನ್‌ ಕರೆ ನೀಡಿದ್ದಾರೆ. ನಗರದ ಪಂಪ್‌ವೆಲ್‌ನಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶನಿವಾರ ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವ ವಾರ್ಷಿಕ ಸಂಸ್ಥಾಪಕರ ದಿನಾಚರಣೆಯಲ್ಲಿ ‘ತಂತ್ರಜ್ಞಾನ ಮತ್ತು ಜೀವನ’ ವಿಚಾರದ ಕುರಿತು ಪ್ರಧಾನ ಉಪನ್ಯಾಸ ನೀಡಿದರು.

ಹಲವು ವರ್ಷಗಳಿಂದ ನಿರಂತರವಾಗಿ ತಂತ್ರಜ್ಞಾನವು ನಮ್ಮ ಜೀವನವನ್ನು ರೂಪಿಸಿಕೊಂಡು ಬಂದಿದೆ. ಇಂದು ತಂತ್ರಜ್ಞಾನವಿಲ್ಲದೆ ಕೆಲವೇ ನಿಮಿಷಗಳನ್ನೂ ಕಳೆಯುವುದು ಕಷ್ಟಎಂಬಷ್ಟರ ಮಟ್ಟಿಗೆ ನಮ್ಮ ಜೀವನವನ್ನು ಪ್ರಭಾವಿತಗೊಳಿಸಿದೆ. ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಐದು ಪಟ್ಟು ಹೆಚ್ಚಳವಾಗಿದ್ದರೆ, ಹಾಲಿನ ಉತ್ಪಾದನೆಯಲ್ಲಿ ಬೃಹತ್‌ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಅದೇ ರೀತಿ ಟೆಕ್ಸ್‌ಟೈಲ್ಸ್‌, ಶಿಕ್ಷಣ, ಆರೋಗ್ಯ, ಕಂಪ್ಯೂಟಿಂಗ್‌, ಮೆಟೀರಿಯಲ್‌ ಸೈನ್ಸ್‌, ಸಾರಿಗೆ, ಮ್ಯೂಸಿಕ್‌ ಕ್ಷೇತ್ರದಲ್ಲೂ ಅಗಾಧ ಪ್ರಮಾಣದ ಬದಲಾವಣೆಯಾಗಿದೆ. ಇಂಥ ಸಂದರ್ಭದಲ್ಲಿ 150 ವರ್ಷಗಳ ಹಿಂದೆ ಕಟ್ಟಿದ್ದ-ಈಗಲೂ ಕಾರ್ಯ ನಿರ್ವಹಿಸುತ್ತಿರುವ ಕಲ್ಲಾನೈ ಅಣೆಕಟ್ಟಿನ ಹಿಂದಿನ ತಂತ್ರಜ್ಞಾನ, ಭಾರತ ನೀಡಿದ ಸೊನ್ನೆಯ ಕೊಡುಗೆ, ಚರಕ-ಶುಶ್ರುತ ಸಂಹಿತೆಗಳು, ಶಾಸ್ತ್ರೀಯ ಸಂಗೀತ ಥೆರಪಿ, ನಳಂದಾ ವಿಶ್ವವಿದ್ಯಾನಿಲಯ ಇತ್ಯಾದಿಗಳ ಹಿರಿಮೆ ಮರೆಯಬಾರದು ಎಂದು ಕಿವಿಮಾತು ಹೇಳಿದರು.

Tap to resize

Latest Videos

ಮಂಗಳೂರು: ಕರ್ಣಾಟಕ ಬ್ಯಾಂಕ್‌ ತೃತೀಯ ತ್ರೈಮಾಸಿಕದ ನಿವ್ವಳ ಲಾಭ

ಜ್ವರ ಬಂತೆಂದರೆ ಡೋಲೋ ಮಾತ್ರೆ ಬಂತು, ಮಹಡಿ ಏರಲು ಎಲಿವೇಟರ್‌ಗಳು ಬಂದವು, ಮಾನವ ಹಸ್ತಕ್ಷೇಪವಿಲ್ಲದೆ ರೊಬೋಟ್‌ನಿಂದ ಶಸ್ತ್ರಚಿಕಿತ್ಸೆ ನಡೆಸುವ ಕಾಲ ಬಂದಿದೆ. ಕಂಪ್ಯೂಟರ್‌ ಕ್ಷೇತ್ರ 10 ಸಾವಿರ ಮಿಲಿಯನ್‌ ಪಟ್ಟು ವೇಗವಾಗಿದೆ. ಚಾಲಕರಹಿತ ಕಾರುಗಳು ಬಂದಿವೆ. 6ಜಿ ಕೂಡ ಬರಲಿದೆ.. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಇನ್ನಷ್ಟುಮುಂದುವರಿದು ಬದುಕು ಮತ್ತಷ್ಟುಸುಗಮವಾಗಲಿದೆ. ತಂತ್ರಜ್ಞಾನದ ಸದುಪಯೋಗಗಳನ್ನು ಅನುಭವಿಸುವುದರೊಂದಿಗೆ ನಮ್ಮ ಮಕ್ಕಳಿಗೂ ಸಮಯ ಮೀಸಲಿಡೋಣ ಎಂದು ಪ್ರೊ.ಸಡಗೋಪನ್‌ ಹೇಳಿದರು.

ಕರ್ಣಾಟಕ ಬ್ಯಾಂಕ್‌ 100 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆದಿದ್ದು, ಇನ್ನೂ ಕನಿಷ್ಠ 10 ಯಶಸ್ವಿ ಶತಮಾನಗಳು ಬ್ಯಾಂಕಿನ ಸೇವೆಗೆ ಒದಗಿಬರಲಿ ಎಂದು ಅವರು ಶುಭಹಾರೈಸಿದರು.
ಗ್ರಾಹಕ ಕೇಂದ್ರಿತ ಬ್ಯಾಂಕ್‌: ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ಮಾತನಾಡಿ, ಕರ್ಣಾಟಕ ಬ್ಯಾಂಕ್‌ ಕಳೆದ 100 ವರ್ಷಗಳಲ್ಲಿ ಒಂದೇ ಒಂದು ವರ್ಷವೂ ನಷ್ಟಕ್ಕೆ ಒಳಗಾಗದೆ ದೇಶಾದ್ಯಂತ ಶಾಖೆಗಳನ್ನು ವಿಸ್ತರಿಸುತ್ತ ಮುನ್ನಡೆಯುತ್ತಿದೆ. 96 ವರ್ಷಗಳುದ್ದಕ್ಕೂ ಡಿವಿಡೆಂಟ್‌ ಘೋಷಣೆ ಮಾಡಿದ್ದೇವೆ. ಗ್ರಾಹಕ ಕೇಂದ್ರಿತವಾಗಿರುವ ಬ್ಯಾಂಕ್‌ ನಿರಂತರವಾಗಿ ಸಮಾಜಿಕ ಸೇವಾ ಕಾರ್ಯಗಳಲ್ಲೂ ಭಾಗಿಯಾಗುತ್ತ ಜನರ ವಿಶ್ವಾಸವನ್ನು ಗಳಿಸಿದೆ ಎಂದು ಹೇಳಿದರು.

ಕಸಾಪಗೆ ಕರ್ಣಾಟಕ ಬ್ಯಾಂಕ್‌ 20 ಲಕ್ಷ ರು. ದೇಣಿಗೆ ಹಸ್ತಾಂತರ

ನೂತನ ತಂತ್ರಜ್ಞಾನ ಅಳವಡಿಕೆಯಲ್ಲಿ ಕರ್ಣಾಟಕ ಬ್ಯಾಂಕ್‌ ಸದಾ ಮುಂಚೂಣಿಯಲ್ಲಿದೆ. ಪ್ರಥಮವಾಗಿ ಕೋರ್‌ ಬ್ಯಾಂಕಿಂಗ್‌ ತಂತ್ರಜ್ಞಾನ ಅಳವಡಿಸಿದ ಕೆಲವೇ ಕೆಲ ಬ್ಯಾಂಕ್‌ಗಳಲ್ಲಿ ಕರ್ಣಾಟಕ ಬ್ಯಾಂಕ್‌ ಕೂಡ ಒಂದು. ಇದೊಂದು ದಿಟ್ಟಹೆಜ್ಜೆಯಾಗಿತ್ತು ಎಂದು ಸ್ಮರಿಸಿದ ಮಹಾಬಲೇಶ್ವರ ಎಂ.ಎಸ್‌., ಪ್ರಸ್ತುತ ನ್ಯೂ ಜನರೇಶನ್‌ ಬ್ಯಾಂಕ್‌ ಆಗಿ ರೂಪುಗೊಂಡಿದೆ. ಎಂದೂ ತನ್ನ ಮೌಲ್ಯಗಳು ಮತ್ತು ಗುರುತನ್ನು ಕಳೆದುಕೊಂಡಿಲ್ಲ ಎಂದರು.
ಕೊರೋನಾ ಮತ್ತು ನೋಟು ಅಮಾನ್ಯೀಕರಣದ ಕಷ್ಟಕರ ಸಮಯವನ್ನು ಕರ್ಣಾಟಕ ಬ್ಯಾಂಕ್‌ ದಿಟ್ಟವಾಗಿ ಎದುರಿಸಿದೆ. ದಕ್ಷಿಣ ಕನ್ನಡದ 22 ಬ್ಯಾಂಕ್‌ ಗಳ ಪೈಕಿ ಕರ್ಣಾಟಕ ಬ್ಯಾಂಕ್‌ ಒಂದೇ 100 ವರ್ಷಗಳನ್ನು ಪೂರೈಸಿರುವುದು ಐತಿಹಾಸಿಕ ಸಂಗತಿ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಪ್ರದೀಪ್‌ ಕುಮಾರ್‌ ಇದ್ದರು. ಇದೇ ಸಂದರ್ಭದಲ್ಲಿ ಪ್ರೊ.ಎಸ್‌.ಸದಗೋಪನ್‌ ಅವರನ್ನು ಬ್ಯಾಂಕ್‌ನ ಪರವಾಗಿ ಸನ್ಮಾನಿಸಲಾಯಿತು. ಬಳಿಕ ವಿವಿಧ ತಂಡಗಳಿಂದ ಸಂಗೀತ ಕಛೇರಿ ಹಮ್ಮಿಕೊಳ್ಳಲಾಗಿತ್ತು.

click me!