ರಾಜ್ಯಗಳಿಗೆ ಪೂರ್ಣ ಜಿಎಸ್ಟಿ ಪರಿಹಾರ ಪಾವತಿ..!

Published : Feb 19, 2023, 03:30 AM IST
ರಾಜ್ಯಗಳಿಗೆ ಪೂರ್ಣ ಜಿಎಸ್ಟಿ ಪರಿಹಾರ ಪಾವತಿ..!

ಸಾರಾಂಶ

ಕೊನೆಯ ಕಂತಲ್ಲಿ ಕೇಂದ್ರದಿಂದ 16982 ಕೋಟಿ ರು. ಬಿಡುಗಡೆ, ತನ್ನ ಸ್ವಂತ ಹಣ ನೀಡಿದ ಕೇಂದ್ರ ಸರ್ಕಾರ, 2022ರ ಜೂನ್‌ವರೆಗಿನ ಪೂರ್ಣ ಹಣ ಪಾವತಿ, ಇನ್ನು ರಾಜ್ಯಗಳಿಗೆ ಪರಿಹಾರ ನೀಡಿಕೆ ಇಲ್ಲ. 

ನವದೆಹಲಿ(ಫೆ.19): ರಾಜ್ಯಗಳಿಗೆ ತಾನು ಬಾಕಿ ಉಳಿಸಿಕೊಂಡಿದ್ದ ಜಿಎಸ್ಟಿ ಪರಿಹಾರದ ಬಾಕಿ ಮೊತ್ತದ ಕೊನೆಯ ಕಂತಾದ 16,982 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಶನಿವಾರ ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಿದೆ. ಇದರೊಂದಿಗೆ 2017ರಲ್ಲಿ ಜಿಎಸ್‌ಟಿ ಜಾರಿ ಬಳಿಕ ರಾಜ್ಯಗಳು ಅನುಭವಿಸುವ ನಷ್ಟವನ್ನು 5 ವರ್ಷಗಳ ಕಾಲ ತುಂಬಿಕೊಡುವುದಾಗಿ ಕೇಂದ್ರ ಸರ್ಕಾರ ಮಾಡಿದ್ದ ವಾಗ್ದಾನದ ಅವಧಿ ಪೂರ್ಣಗೊಂಡಿದೆ. ಶನಿವಾರ ಇಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 49ನೇ ಸಭೆ ಬಳಿಕ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘2022ರ ಜೂನ್‌ ತಿಂಗಳವರೆಗೂ ರಾಜ್ಯಗಳಿಗೂ ನೀಡಬೇಕಾಗಿದ್ದ ಪರಿಹಾರದ ಮೊತ್ತದ ಕೊನೆಯ ಕಂತು 16,982 ಕೋಟಿ ರು.ಗಳನ್ನು ಶುಕ್ರವಾರ ಒಂದೇ ಇಡುಗಂಟಿನಲ್ಲಿ ಪಾವತಿಸಲಾಗುತ್ತಿದೆ’ ಎಂದರು.

‘ಪರಿಹಾರ ನೀಡಲೆಂದು ಪ್ರತ್ಯೇಕವಾಗಿ ತೆಗೆದಿರಿಸಲಾಗುವ ನಿಧಿ ಕೇಂದ್ರದ ಬಳಿ ಇಲ್ಲ. ಹೀಗಾಗಿ ಸದ್ಯಕ್ಕೆ ಕೇಂದ್ರದ ಸಂಪನ್ಮೂಲದಿಂದಲೇ ಕೈಯಾರೆ ಈ ಹಣವನ್ನು ರಾಜ್ಯಗಳಿಗೆ ಪಾವತಿ ಮಾಡಲಾಗುತ್ತಿದೆ. ಈ ಹಣವನ್ನು ಮುಂದಿನ ದಿನಗಳಲ್ಲಿ ಸೆಸ್‌ ಮೂಲಕ ಸಂಗ್ರಹಿಸುವ ನಿಧಿಯ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

Business Idea : ಹೆಂಗಳೆಯರನ್ನು ಸೆಳೆಯುವ ಈ ಬ್ಯುಸಿನೆಸ್ ನೀಡುತ್ತೆ ಲಾಭ

ಪರಿಹಾರ ಏಕೆ?:

2017ರಲ್ಲಿ ದೇಶವ್ಯಾಪಿ ಜಿಎಸ್ಟಿಜಾರಿಯಾದ ಬಳಿಕ ರಾಜ್ಯಗಳು ಸೆಸ್‌ ಹೇರುವ ಅವಕಾಶ ಕಳೆದುಕೊಂಡವು. ಹೀಗಾಗಿ ರಾಜ್ಯಗಳು ಅನುಭವಿಸುವ ನಷ್ಟವನ್ನು ಮುಂದಿನ 5 ವರ್ಷಗಳ ಕಾಲ ತುಂಬಿಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅದರನ್ವಯ 2022ರ ಜೂನ್‌ವರೆಗೆ ಸರ್ಕಾರ ರಾಜ್ಯಗಳಿಗೆ ಪರಿಹಾರ ತುಂಬಿಕೊಡಬೇಕಿತ್ತು.

ಇದಕ್ಕಾಗಿ ಹಲವು ಸೇವೆ ಮತ್ತು ವಸ್ತುಗಳ ಮೇಲೆ ಹೆಚ್ಚಿನ ಸೆಸ್‌ ಹೇರಿತ್ತು. ಇದರ ಮೂಲಕ ಸಂಗ್ರಹಗೊಂಡ ಹಣವನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಾಲಕಾಲಕ್ಕೆ ಪಾವತಿಸುತ್ತಾ ಬಂದಿತ್ತು. ಈ ನೆರವನ್ನು ಇನ್ನಷ್ಟುಸಮಯ ಮುಂದುವರೆಸುವಂತೆ ಹಲವು ರಾಜ್ಯಗಳು ಕೇಂದ್ರಕ್ಕೆ ಮನವಿ ಮಾಡುತ್ತಾ ಬಂದಿದೆಯಾದರೂ ಅದಕ್ಕೆ ಕೇಂದ್ರ ಸರ್ಕಾರ ಓಗೊಟ್ಟಿಲ್ಲ. ಆದರೆ ರಾಜ್ಯಗಳಿಗೆ ಪರಿಹಾರ ನೀಡಲು ತಾನು ಪಡೆದಿರುವ ಸಾಲ ಮರುಪಾವತಿಗಾಗಿ ಕೇಂದ್ರ ಸರ್ಕಾರವು 2026ರವರೆಗೂ ಈ ಸೆಸ್‌ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದೆ. ಇದರಲ್ಲಿ ರಾಜ್ಯಗಳಿಗೆ ಯಾವುದೇ ಪಾಲು ಸಿಗದು.

ದ್ರವರೂಪದ ಬೆಲ್ಲ, ಪೆನ್ಸಿಲ್‌ ಜಿಎಸ್‌ಟಿ ಇಳಿಕೆ

ನವದೆಹಲಿ: ಶನಿವಾರ ನಡೆದ ಜಿಎಸ್ಟಿಮಂಡಳಿ ಸಭೆಯಲ್ಲಿ ಹಲವು ವಸ್ತುಗಳ ಮೇಲಿನ ತೆರಿಗೆ ದರ ಇಳಿಸಲು ನಿರ್ಧರಿಸಲಾಗಿದೆ. ಅದರನ್ವಯ ದ್ರವ ರೂಪದ ಬೆಲ್ಲದ ಮೇಲೆ ವಿಧಿಸಲಾಗುತ್ತಿದ್ದ ಜಿಎಸ್ಟಿಯನ್ನು ಶೇ.18ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಚಿಲ್ಲರೆಯಾಗಿ ಮಾರಾಟ ಮಾಡುವ ಇಂಥ ಬೆಲ್ಲಕ್ಕೆ ಇನ್ನು ಯಾವುದೇ ಜಿಎಸ್ಟಿಇರುವುದಿಲ್ಲ. ಆದರೆ ಇದನ್ನು ಪ್ಯಾಕ್‌ ಮಾಡಿ ಮಾರಾಟ ಮಾಡಿದರೆ ಅದಕ್ಕೆ ಶೇ.5ರಷ್ಟುಜಿಎಸ್‌ಟಿ ವಿಧಿಸಲಾಗುವುದು. ಇನ್ನು ಪೆನ್ಸಿಲ್‌ ಶಾರ್ಪನರ್‌ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.12ಕ್ಕೆ, ಟ್ಯಾಗ್‌- ಟ್ರ್ಯಾಕಿಂಗ್‌ ಉಪಕರಣ ಅಥವಾ ಡಾಟಾ ಲಾಗರ್‌ಗಳ ಮೇಲಿನ ಜಿಎಸ್ಟಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟಂತೆ ಶೇ.18ರಿಂದ ಶೂನ್ಯಕ್ಕೆ ಇಳಿಸಲಾಗಿದೆ.

ಸತತ 3ನೇ ತಿಂಗಳು ಕರ್ನಾಟಕದಲ್ಲಿ 10,000 ಕೋಟಿ ಜಿಎಸ್ಟಿ ಸಂಗ್ರಹ

ಕೋಲ್‌ ವಾಷರಿಗಳಿಗೆ ಪೂರೈಸಿದ ಮತ್ತು ಅವರಿಂದ ಪೂರೈಕೆ ಮಾಡಿದ ಕೋಲ್‌ ರಿಜೆಕ್ಟ್ (ಕಲ್ಲಿದ್ದಲು ತೊಳೆದ ಬಳಿಕ ಸಿಗುವ ಉಪ ಉತ್ಪನ್ನ)ಗೆ ಜಿಎಸ್ಟಿಯಿಂದ ವಿನಾಯ್ತಿ ಲಾಭವನ್ನು ವಿಸ್ತರಿಸಲಾಗಿದೆ. ಜೊತೆಗೆ ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳ ನೀಡುವ ತೀರ್ಪಿಗೂ ಇನ್ನು ಮುಂದೆ ರಿವರ್ಸ್‌ ಚಾಜ್‌ರ್‍ ಮೆಕ್ಯಾನಿಸಂ (ತೀರ್ಪು ಪಡೆದ ವ್ಯಕ್ತಿಗೆ ಜಿಎಸ್ಟಿ) ವ್ಯವಸ್ಥೆ ಮೂಲಕ ಜಿಎಸ್ಟಿಜಾರಿಗೆ ನಿರ್ಧರಿಸಲಾಗಿದೆ.

ಜೊತೆಗೆ ಜಿಎಸ್ಟಿನಿಯಮಗಳ ಕುರಿತಾಗಿ ಉದ್ಯಮಿಗಳು, ವ್ಯಕ್ತಿಗಳು ಮತ್ತು ಸರ್ಕಾರದ ನಡುವೆ ಏಳಬಹುದಾದ ಯಾವುದೇ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಜಿಎಸ್ಟಿಮೇಲ್ಮನವಿ ನ್ಯಾಯಾಧಿಕರಣ ಸ್ಥಾಪನೆ ಕುರಿತ ಕೆಲವೊಂದು ಬದಲಾವಣೆಗೂ ಸಭೆ ಸಮ್ಮತಿ ನೀಡಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದರು.

ಸರಳೀಕರಣ:

ಇನ್ನು ನಿಗದಿತ ಅವಧಿ ಮೀರಿದ ಬಳಿಕ ಸಲ್ಲಿಸಲಾಗುವ ವಾರ್ಷಿಕ ಜಿಎಸ್ಟಿ ರಿಟನ್ಸ್‌ರ್‍ ಮೇಲಿನ ವಿಳಂಬ ಶುಲ್ಕವನ್ನು ಇನ್ನಷ್ಟು ತರ್ಕಬದ್ಧಗೊಳಿಸಿ ಸರಳಗೊಳಿಸಲು ಸಭೆ ನಿರ್ಧರಿಸಿದೆ ಎಂದು ತಿಳಿಸಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!