ಕೋಲಾರದಲ್ಲಿ ಏರ್‌ಬಸ್‌-ಟಾಟಾ ಕಾಪ್ಟರ್ ಘಟಕ:ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಫ್ಯಾಕ್ಟರಿ

Santosh Naik   | Kannada Prabha
Published : May 27, 2025, 07:52 AM IST
airbus tata helicopter

ಸಾರಾಂಶ

ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಕರ್ನಾಟಕದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿವೆ. 

ನವದೆಹಲಿ (ಮೇ.27): ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್‌ ಹಾಗೂ ಟಾಟಾ ಸಮೂಹದ ಏರೋಸ್ಪೇಸ್‌ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (ಟಿಎಎಸ್‌ಎಲ್‌) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಕರ್ನಾಟಕದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿವೆ.

ಬೆಂಗಳೂರಿನಿಂದ ಕೇವಲ 2 ತಾಸು ದೂರದಲ್ಲಿರುವ, ಕೋಲಾರದ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ತಲೆಎತ್ತಲಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ಅತ್ಯಂತ ಪ್ರತಿಷ್ಠಿತವಾಗಿರುವ ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್‌ಗಳು ಕರ್ನಾಟಕಕ್ಕೆ ತುರುಸಿನ ಪೈಪೋಟಿ ನೀಡಿದ್ದವು. ಆದರೆ ಕರ್ನಾಟಕದಲ್ಲಿ ಈಗಾಗಲೇ ವೈಮಾಂತರಿಕ್ಷ ಉತ್ಪಾದನೆಗೆ ಸಂಬಂಧಿಸಿದ ಕಂಪನಿಗಳು ಇರುವ ಕಾರಣಕ್ಕೆ ಏರ್‌ಬಸ್‌-ಟಾಟಾ ಕಂಪನಿಗಳು ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿವೆ.

ವಿಶ್ವದಲ್ಲಿ ಏರ್‌ಬಸ್‌ ಕಂಪನಿಯು ಫ್ರಾನ್ಸ್‌, ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ ಮಾತ್ರ ಘಟಕ ಹೊಂದಿದ್ದು ಕೋಲಾರದ್ದು ನಾಲ್ಕನೇ ಘಟಕವಾಗಿದೆ. ಭಾರತೀಯ ವಾಯುಪಡೆಗಾಗಿ ಈ ಎರಡೂ ಕಂಪನಿಗಳು ಜತೆಗೂಡಿ ಎಚ್‌125 ಹೆಲಿಕಾಪ್ಟರ್‌ಗಳ ಅಂತಿಮ ಜೋಡಣಾ ವಿಭಾಗವನ್ನು ಕೋಲಾರದಲ್ಲಿ ತೆರೆಯಲಿವೆ ಎಂದು ವರದಿಗಳು ತಿಳಿಸಿವೆ. ವಾರ್ಷಿಕ 10 ಹೆಲಿಕಾಪ್ಟರ್‌ಗಳನ್ನು ಆರಂಭಿಕ ಹಂತದಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ 2 ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್‌ಗಳಿಗೆ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ಬೇಡಿಕೆ ಬರಬಹುದು ಎಂದು ಏರ್‌ಬಸ್‌ ಅಂದಾಜಿಸಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಯಸ್ಸಾಯ್ತು ಅಂತ ಮಂಡೆ ಬಿಸಿ ಬೇಡ… ಇವರೆಲ್ಲಾ ಜನಪ್ರಿಯತೆ ಪಡೆದದ್ದು 30+ ಆದ್ಮೇಲೇ
ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?