
Business Desk:ವೃದ್ಧಾಪ್ಯದಲ್ಲಿ (Old age) ಯಾವುದೇ ಆರ್ಥಿಕ ಚಿಂತೆಯಿಲ್ಲದೆ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ಹೂಡಿಕೆ (Invest) ಮಾಡಬಯಸೋರಿಗೆ ಪ್ರಧಾನಮಂತ್ರಿ ವಯೋ ವಂದನಾ ಯೋಜನೆ (PMVVY)ಉತ್ತಮ ಆಯ್ಕೆ. ಈ ಯೋಜನೆಯಲ್ಲಿ ಹೂಡಿಕೆ (Invest) ಮಾಡಿದ್ರೆ 10 ವರ್ಷಗಳ ಕಾಲ ಮಾಸಿಕ ನಿಗದಿತ ಪಿಂಚಣಿ (Pension) ವಾರ್ಷಿಕ ಶೇ.7.40 ದರದಲ್ಲಿ ಲಭಿಸುತ್ತದೆ. ಅಂದ್ರೆ ನಿಮ್ಮ ಹೂಡಿಕೆಯನ್ನು(Investment) ಆಧರಿಸಿ ಮಾಸಿಕ 10,000ರೂ.ನಿಂದ 9,250 ರೂ. ಪಿಂಚಣಿ (Pension)ಪಡೆಯಬಹುದು.
ಪಿಂಚಣಿ ಪಡೆಯಲು ಎಷ್ಟು ವಯಸ್ಸಾಗಿರಬೇಕು?
ಪ್ರಧಾನಮಂತ್ರಿ ವಯೋ ವಂದನಾ (PMVVY) ಯೋಜನೆಯಲ್ಲಿ ಮಾಡಿದ ಹೂಡಿಕೆಯಿಂದ ಮಾಸಿಕ ಪಿಂಚಣಿ ವಿತ್ ಡ್ರಾ ಮಾಡಲು ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ಈ ಯೋಜನೆಯಲ್ಲಿ 10 ವರ್ಷಗಳ ಅವಧಿಗೆ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಇನ್ನು ಪಿಂಚಣಿ ಹಣವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಪಡೆಯಬಹುದು. ಎಲ್ ಐಸಿ ಈ ಯೋಜನೆಯನ್ನು ನಿರ್ವಹಿಸುತ್ತದೆ. ಈ ಯೋಜನೆಯನ್ನು ಆಪ್ಲೈನ್ ಹಾಗೂ ಆನ್ ಲೈನ್ ಮುಖಾಂತರ ಖರೀದಿ ಮಾಡಬಹುದು.
4 ತಿಂಗಳ ಬಳಿಕ ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ: ವಾಹನ ಸವಾರರ ಜೇಬಿಗೆ ಬೆಂಕಿ!
ಎಷ್ಟು ದರ?
'2021-22ನೇ ಆರ್ಥಿಕ ಸಾಲಿಗೆ ಈ ಯೋಜನೆ ಮಾಸಿಕ ನಿಗದಿತ ಪಿಂಚಣಿಯನ್ನು ವಾರ್ಷಿಕ ಶೇ.7.40 ದರದಲ್ಲಿ ಒದಗಿಸುತ್ತದೆ. 2022ರ ಮಾರ್ಚ್ 31ರ ತನಕ ಖರೀದಿಸಿದ ಎಲ್ಲ ಪಾಲಿಸಿಗಳಿಗೆ 10 ವರ್ಷಗಳ ಪೂರ್ಣಾವಧಿ ಮುಕ್ತಾಯಗೊಂಡ ಬಳಿಕ ಈ ದರದಲ್ಲಿ ಪಿಂಚಣಿ ನೀಡಲಾಗುವುದು' ಎಂಬ ಮಾಹಿತಿ ಎಲ್ ಐಸಿ ವೆಬ್ ಸೈಟ್ ನಲ್ಲಿ ಲಭ್ಯವಿದೆ.ಭರವಸೆ ನೀಡಿರೋ ಪಿಂಚಣಿ ದರವನ್ನು ಪ್ರತಿವರ್ಷದ ಪ್ರಾರಂಭದಲ್ಲಿ ಹಣಕಾಸು ಸಚಿವಾಲಯ ಪರಿಶೀಲಿಸಿ, ನಿರ್ಧರಿಸುತ್ತದೆ. ಆ ಆರ್ಥಿಕ ಸಾಲಿಗೆ ನಿಗದಿಪಡಿಸಿದ ದರ ಪಾಲಿಸಿಯ 10 ವರ್ಷಗಳ ಅವಧಿಗೆ ಅನ್ವಯವಾಗೋ ಜೊತೆ ಅಷ್ಟೇ ಇರುತ್ತದೆ.
ಈ ಯೋಜನೆ ಏಕೆ ಉತ್ತಮ?
ಪ್ರಸ್ತುತ ಬಹುತೇಕ ಬ್ಯಾಂಕುಗಳು 10 ವರ್ಷಗಳ ಅವಧಿಯ ಸ್ಥಿರ ಠೇವಣಿಗೆ (FD) ಸುಮಾರು ಶೇ.6.5 ಬಡ್ಡಿದರ ಒದಗಿಸುತ್ತಿವೆ. ಅದೇ ಪ್ರಧಾನಮಂತ್ರಿ ವಯೋ ವಂದನಾ ಯೋಜನೆಯಲ್ಲಿನ ನಿಮ್ಮ ಪಿಂಚಣಿ ಪಡೆಯೋ ಆಯ್ಕೆ ಅಂದ್ರೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧರಿಸಿ ಬಡ್ಡಿದರ ವಾರ್ಷಿಕ ಶೇ.7.4 ಹಾಗೂ ಶೇ.7.6ರ ನಡುವೆ ಇರುತ್ತದೆ. ಹೀಗಾಗಿ ನೀವು ಬ್ಯಾಂಕ್ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡೋ ಬದಲು PMVVYಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಬಡ್ಡಿದರ ಲಭಿಸುತ್ತದೆ. ಈ ಯೋಜನೆಯು 2023ರ ಮಾರ್ಚ್ 31ರ ತನಕ ಮಾತ್ರ ಲಭ್ಯವಿದೆ.
ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್ ದಿವಾಳಿ ಘೋಷಣೆ: 25,000 ಮನೆ ಖರೀದಿದಾರರಿಗೆ ಸಂಕಷ್ಟ
ಪಾಲಿಸಿದಾರ ಮೃತಪಟ್ಟರೆ?
ಈ ಪಾಲಿಸಿಯ 10 ವರ್ಷಗಳ ಅವಧಿಯಲ್ಲಿ ಪಿಂಚಣಿದಾರ ಮೃತಪಟ್ಟರೆ ಪಾಲಿಸಿಯ ಖರೀದಿ ಬೆಲೆಯನ್ನು ಸಂಬಂಧಪಟ್ಟವರಿಗೆ ಮರುಪಾವತಿಸಲಾಗುತ್ತದೆ. ಇನ್ನು ಪಾಲಿಸಿಯ 10 ವರ್ಷಗಳ ಅವಧಿಯನ್ನು ಪೂರ್ಣಗೊಳಿಸೋ ತನಕ ಪಿಂಚಣಿದಾರ ಜೀವಂತವಿದ್ದರೆ ಕೊನೆಯ ಪಿಂಚಣಿ ಕಂತುಗಳ ಜೊತೆಗೆ ಖರೀದಿ ಬೆಲೆಯನ್ನು ಕೂಡ ಪಾವತಿಸಲಾಗುತ್ತದೆ.
ಯಾವಾಗ ಅವಧಿಗೂ ಮುನ್ನ ನಿರ್ಗಮಿಸಬಹುದು?
ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ಯೋಜನೆಯಿಂದ ಅವಧಿಗೂ ಮುನ್ನ ನಿರ್ಗಮಿಸಲು ಅವಕಾಶವಿದೆ. ಉದಾಹರಣೆಗೆ ಪಿಂಚಣಿದಾರನಿಗೆ ತನ್ನ ಅಥವಾ ತನ್ನ ಸಂಗತಿಯ ಯಾವುದೇ ಗಂಭೀರ ಕಾಯಿಲೆಯ ಚಿಕಿತ್ಸೆಗೆ ಹಣದ ಅವಶ್ಯಕತೆಯಿದ್ರೆ ಅಂಥ ಸಂದರ್ಭದಲ್ಲಿ ಆತ ಈ ಯೋಜನೆಯಿಂದ ಅವಧಿಗೂ ಮುನ್ನ ನಿರ್ಗಮಿಸಬಹುದು. ಇಂಥ ಸಂದರ್ಭಗಳಲ್ಲಿ ಖರೀದಿ ಬೆಲೆಯ ಶೇ.98ರಷ್ಟನ್ನು ಸರೆಂಡರ್ ಮೌಲ್ಯ ವಾಗಿ ಪಾವತಿಸಲಾಗುತ್ತದೆ. ಪಾಲಿಸಿಯ ಮೂರು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ಸಾಲ ಸೌಲಭ್ಯ ಲಭ್ಯವಿದೆ. ಗರಿಷ್ಠ ಸಾಲ ಸೌಲಭ್ಯ ಖರೀದಿ ಬೆಲೆಯ ಶೇ.75ರಷ್ಟಾಗಿರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.