
ಮಕ್ಕಳಿಂದ ಹಿಡಿದು ದೊಡ್ಡವರೆಗೂ ಬಳಸುವ ಕೆಲವು ಪೌಡರ್‌ಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಜಾನ್ಸನ್ & ಜಾನ್ಸನ್ ಪೌಡರ್. ಅದರಲ್ಲಿಯೂ ಮಕ್ಕಳಾಗಿಯೇ ವಿಶೇಷವಾಗಿ ಈ ಬ್ರಾಂಡ್‌ನ ಪೌಡರ್ ಸೇರಿದಂತೆ ಹಲವು ವಸ್ತುಗಳ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಕೆಲವು ವರ್ಷಗಳಿಂದ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ. ಇದರಿಂದ ಈ ಬ್ರಾಂಡ್‌ನ ಪೌಡರ್ ಅನ್ನು ಮಾರುಕಟ್ಟೆಯಿಂದ ವಾಪಸ್ ಕೂಡ ತೆಗೆದುಕೊಳ್ಳಲಾಗಿತ್ತು. ಆದರೆ, ಅದನ್ನು ಪ್ರತಿನಿತ್ಯ ಉಪಯೋಗಿಸಿ ಕ್ಯಾನ್ಸರ್‌ಗೆ ನಿಧಾನವಾಗಿ ಒಳಪಡುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಅಂಥದ್ದೇ ಒಂದು ಕೇಸ್ ಈಗ ಕೋರ್ಟ್ ಮೆಟ್ಟಿಲೇರಿತ್ತು.
ಅಮೆರಿಕದ ಕ್ಯಾಲಿಫೋರ್ನಿಯಾ ಮೂಲಕ ಈ ಕಂಪೆನಿ ವಿರುದ್ಧ ಹಲವು ಕೋರ್ಟ್‌ಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಾನ್ಸನ್ & ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಅನ್ನು ಜೀವಿತಾವಧಿಯವರೆಗೆ ಬಳಸಿದ್ದರಿಂದ ಕ್ಯಾನ್ಸರ್ ಉಂಟಾಗಿದ್ದರಿಂದ 2021ರಲ್ಲಿ ಮೃತಪಟ್ಟ ಮೇ ಮೂರ್ ಎನ್ನುವ ಮಹಿಳೆಯ ಕುಟುಂಬಸ್ಥರು ಈ ಕಂಪೆನಿ ವಿರುದ್ಧ ಕ್ಯಾಲಿಫೋರ್ನಿಯಾದ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಕೋರ್ಟ್, ಮೃತ ಮಹಿಳೆಯ ಕುಟುಂಬಕ್ಕೆ $16 ಮಿಲಿಯನ್ ಪರಿಹಾರ ಮತ್ತು $950 ಮಿಲಿಯನ್ ದಂಡನಾತ್ಮಕ ಪರಿಹಾರವನ್ನು ನೀಡುವಂತೆ ಸೂಚಿಸಿದೆ. ಇದನ್ನು ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ, ₹79,915,265,100.00 ( ಸುಮಾರು 80 ಬಿಲಿಯನ್ ರೂಪಾಯಿ)
ಜಾನ್ಸನ್ & ಜಾನ್ಸನ್‌ನ ಟಾಲ್ಕಮ್ ಬೇಬಿ ಪೌಡರ್ ಉತ್ಪನ್ನಗಳಲ್ಲಿ ಆಸ್ಬೆಸ್ಟೋಸ್ ಫೈಬರ್‌ಗಳು ಇರುವುದರಿಂದ ಅವರ ಅಪರೂಪದ ಕ್ಯಾನ್ಸರ್‌ಗೆ ಕಾರಣವಾಯಿತು ಎಂದು ಆರೋಪಿಸಿ ಕುಟುಂಬವು ಮಹಿಳೆ ಮೃತಪಟ್ಟ 2021ರ ವರ್ಷವೇ ಮೊಕದ್ದಮೆ ಹೂಡಿತ್ತು. ಅದನ್ನು ಗಂಭೀರವಾಗಿ ಕೋರ್ಟ್ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಭಾರಿ ದಂಡವನ್ನು ವಿಧಿಸಿದ್ದು, ಇದನ್ನು ಪರಿಹಾರದ ರೂಪದಲ್ಲಿ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ.
ಇದರ ವಿರುದ್ಧ ಕಂಪೆನಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ತೀರ್ಪನ್ನು "ಅತಿಶಯ ಮತ್ತು ಅಸಂವಿಧಾನಿಕ" ಎಂದು ಕಂಪೆನಿ ಕರೆದಿದೆ. ಇದು ಕ್ಯಾನ್ಸರ್ ಕಾರಕವಲ್ಲ. ಉತ್ಪನ್ನದಲ್ಲಿ ಯಾವುದೇ ಕಲ್ನಾರು ಇಲ್ಲ ಎಂದು ಕಂಪೆನಿ ಹೇಳಿದೆ. 100 ವರ್ಷಗಳಿಗೂ ಹೆಚ್ಚು ಕಾಲ ತನ್ನ ಬೇಬಿ ಪೌಡರ್ ಅನ್ನು ಸೂಕ್ತವಾಗಿ ಮಾರಾಟ ಮಾಡುತ್ತಿದೆ ಎಂದು ವಾದಿಸಿದೆ. ಅಷ್ಟಕ್ಕೂ ಇದರ ವಿರುದ್ಧ ಈ ಹಿಂದೆಯೂ ಕ್ಯಾನ್ಸರ್ ಆರೋಪಿಸಿ ಹಲವು ಕೇಸ್‌ಗಳು ದಾಖಲಾಗಿದ್ದು ಇವೆ. ಇದೇ ಪೌಡರ್ ಬಳಸಿದ್ದರಿಂದ ಕ್ಯಾನ್ಸರ್ ಬಂದಿರುವುದು ದೃಢಪಟ್ಟಿರುವುದಾಗಿಯೂ ವರದಿಯಾಗಿದೆ. 2016 ರಲ್ಲಿ, ಮಿಸೌರಿ ನ್ಯಾಯಾಲಯವು ಅಂಡಾಶಯದ ಕ್ಯಾನ್ಸರ್ ನಿಂದ ನಿಧನರಾದ ಜಾಕ್ವೆಲಿನ್ ಫಾಕ್ಸ್ ಅವರ ಕುಟುಂಬಕ್ಕೆ $72 ಮಿಲಿಯನ್ ಪಾವತಿಸಲು ಕಂಪೆನಿಗೆ ಆದೇಶಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.