
ನವದೆಹಲಿ (ಅ.09) ಭಾರತದಲ್ಲಿ ಯುಪಿಐ ಪಾವತಿ ಅತೀ ಹೆಚ್ಚು ಬಳಕೆಯಾಗುತ್ತಿದೆ. ಬಹುತೇಕ ಪಾವತಿಗಳು ಯುಪಿಐ ಮೂಲಕವೇ ಆಗುತ್ತಿದೆ. ಇದೀಗ 2025ರ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಡಿಪಾರ್ಟ್‌ಮೆಂಟ್ ಆಫ್ ಫಿನಾನ್ಶಿಯಲ್ ಸರ್ವೀಸ್(ಡಿಎಫ್ಎಸ್) ಜಂಟಿಯಾಗಿ ಯುಪಿಐ ಪಾವತಿಯಲ್ಲಿ ಹಲವು ಬದಲಾವಣೆ ತಂದಿದೆ. ಬಳಕೆದಾರರ ಪಾವತಿ, ಸುರಕ್ಷತೆ ಹಾಗೂ ದೇಶಾದ್ಯಂತ ಯಾವುದೇ ಅಡ ತಡೆ ಇಲ್ಲದೆ ಪಾವತಿ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಯುಪಿಐ ಪಾವತಿ ಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಪೈಕಿ ಸ್ಮಾರ್ಟ್ ಗ್ಲಾಸಸ್ ಪಾವತಿ, ಮೈಕ್ರೋ ಎಟಿಎಂ ಮೂಲಕ ಹಣ ವಿಥ್‌ಡ್ರಾ ಸೇರಿದಂತೆ ಹಲವು ಬದಲಾವಣೆ ಮಾಡಲಾಗಿದೆ.
ಎಟಿಎಂನಿಂದ ಹಣ ವಿಥ್‌ಡ್ರಾ ಮಾಡಲು ಡೆಬಿಟ್ ಕಾರ್ಡ್ ಹಿಡಿದು ಹೋಗಬೇಕಿಲ್ಲ. ಯುಪಿಐ ಪಾವತಿ ವ್ಯವಸ್ಥೆ ಮೂಲಕ ನಗದು ಹಣ ಪಡೆಯಲು ಸಾಧ್ಯವಿದೆ. ಯುಪಿಐ ಕ್ಯಾಶ್ ಕೇಂದ್ರಗಳ ಮೈಕ್ರೋ ಎಟಿಎಂ ಮೂಲಕ ಯುಪಿಐ ಬಳಸಿ ಹಣ ವಿಥ್‌ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೈಕ್ರೋ ಎಟಿಎಂನಲ್ಲಿ ಸ್ಕ್ಯಾನ್ ಮಾಡಿ ನಗದು ಹಣ ಪಡೆಯಲು ಸಾಧ್ಯವಿದೆ. ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಆರ್‌ಬಿಐ ಹೊಸ ನೀತಿಯಿಂದ ಯುಪಿಐ ಪಾವತಿ ಮತ್ತಷ್ಟು ಸುಲಭಗೊಂಡಿರರುವುದು ಮಾತ್ರವಲ್ಲ, ಹೆಚ್ಚು ಸುರಕ್ಷತೆಯಿಂದ ಕೂಡಿದೆ. ಕಡಿಮೆ ಮೊತ್ತದ ಪಾವತಿಗಾಗಿ ಯುಪಿಐ ಲೈಟ್ ವ್ಯವಸ್ಥೆ ಜಾರಿಯಲ್ಲಿದೆ. ಇದೀಗ ಸ್ಮಾರ್ಟ್ ಗ್ಲಾಸಸ್ ಮೂಲಕ ಯುಪಿಐ ಲೈಟ್ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಅಂದರೆ ಬಳಕೆದಾರ ವಾಯ್ಸ್ ಕಮಾಂಡ್ ಮೂಲಕ ಪಾವತಿ ಮಾಡಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯಾವುದೇ ಪಿನ್ ಅಥವಾ ಫೋನ್ ಬಳಕೆ ಮಾಡದೇ ಪಾವತಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಯುಪಿಐ ಪಾವತಿಗೆ ಸದ್ಯ ಪಿನ್ ಅಗತ್ಯವಿದೆ. ಆದರೆ ಹೊಸ ವ್ಯವಸ್ಥೆ ಮೂಲಕ ಯಾವುದೇ ಪಿನ್ ಹಾಕದೇ ಬಯೋಮೆಟ್ರಿಕ್ ಅಥೆಂಟಿಕೇಶನ್ ಮೂಲಕ ಪಾವತಿ ಸಾಧ್ಯವಿದೆ. ಮೊಬೈಲ್ ಲಾಕ್ ಓಪನ್ ಮಾಡಲು ಇರುವ ಫಿಂಗರ್ ಫ್ರಿಂಟ್ ಅಥವಾ ಫೇಸ್ ಲಾಕ್ ವ್ಯವಸ್ಥೆ ಮೂಲಕವೇ ಇದೀಗ ಯುಪಿಐ ಪಾವತಿ ಅಥವಾ ವ್ಯವಹಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಆಧಾರ್ ಆಧಾರಿತ ಫೇಸ್ ಅಥೆಂಟಿಕೇಸನ್ ಸೆಕ್ಯೂರಿಟಿ ಪಿನ್ ಜಾರಿಗೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಪಾವತಿ ವೇಳೆ ಫೇಸ್ ಲಾಕ್ ಮೂಲಕ ಮಾಡಬಹುದು. ಅದಕ್ಕೂ ಮೊದಲು ಆಧಾರ್ ಲಿಂಕ್ಡ್ ಫೇಸ್ ಅಥೆಂಟಿಕೇಶನ್ ನೋಂದಣಿ ಮಾಡಿಕೊಂಡು ಈ ವ್ಯವಸ್ಥೆ ಬಳಲು ಸಾಧ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.