Work From Home: ಮನೆಯಲ್ಲೇ ಮೂವತ್ತೈದು ನಿಮಿಷ ಕೆಲಸ ಮಾಡಿ ನಲವತ್ತು ಸಾವಿರ ಗಳಿಸಿ!

By Suvarna News  |  First Published Feb 8, 2024, 5:19 PM IST

ವರ್ಕ್ ಫ್ರಂ ಹೋಮ್ ಕೆಲಸ ಹುಡುಕುವವರ ಸಂಖ್ಯೆ ಈಗ ಹೆಚ್ಚಿದೆ. ಒಂದೇ ಕಡೆ ಕುಳಿತು ಎರಡು, ಮೂರು ಕೆಲಸ ಮಾಡುವವರಿದ್ದಾರೆ. ನೀವೂ ಇದ್ರಲ್ಲಿ ಆಸಕ್ತಿ ಹೊಂದಿದ್ದರೆ, ನಿಮಗೆ ಖುಷಿ ಸುದ್ದಿಯೊಂದು ಇಲ್ಲಿದೆ. 


ಈ ಸ್ಪರ್ಧಾತ್ಮಕ ಯುಗದಲ್ಲಿ ನೌಕರಿ ಸಿಗೋದು ಸುಲಭದ ಮಾತಲ್ಲ. ನಮ್ಮ ಓದಿಗೆ ತಕ್ಕಂತೆ ಕೆಲಸ ಸಿಗೋದಿಲ್ಲ. ಸಿಕ್ಕ ಕೆಲಸಕ್ಕೆ ಸರಿಯಾಗಿ ಸಂಬಳ ಸಿಗದೆ ಇರಬಹುದು. ಅನೇಕ ಐಟಿ ಕಂಪನಿಗಳು ಉದ್ಯೋಗಿಗಳನ್ನು ಹೊರ ಹಾಕ್ತಿವೆ. ಇದ್ರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಕೆಲಸಕ್ಕೆ ತಕ್ಕ ಸಂಬಳ ಸಿಗುವ ಉದ್ಯೋಗ ಹುಡುಕೋದೇ ಒಂದು ದೊಡ್ಡ ಉದ್ಯೋಗವಾಗಿದೆ. ನಿಮ್ಮ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಕೌಶಲ್ಯವಿದ್ರೆ ನೀವು ವೃತ್ತಿಯಲ್ಲಿ ಏಳ್ಗೆ ಕಾಣಬಹುದು. ಹೆಚ್ಚಿನ ಸಂಬಳವಿರುವ ಹುದ್ದೆಗೆ ಏರಬಹುದು. ಆದ್ರೆ ಎಲ್ಲ ಕೆಲಸದಲ್ಲೂ ಕೌಶಲ್ಯದ ಅವಶ್ಯಕತೆ ಇರೋದಿಲ್ಲ. ಕೆಲವೊಂದು ಕೆಲಸದ ನೇಮಕಾತಿ ವೇಳೆ ನಿಮ್ಮ ವಿದ್ಯಾರ್ಹತೆಯನ್ನು ನೋಡೋದೇ ಇಲ್ಲ. ನಿಮ್ಮ ಕೌಶಲ್ಯವೂ ಅವರಿಗೆ ಅಗತ್ಯವಿರುವುದಿಲ್ಲ. ನೀವು ಹೇಗೆ ಕೆಲಸ ಮಾಡ್ತೀರಿ ಎನ್ನುವ ಆಧಾರದ ಮೇಲೆ ನಿಮಗೆ ಸಂಬಳ ಸಿಗುತ್ತದೆ. ಈಗ ಇಂಥಹದ್ದೇ ಒಂದು ಕೆಲಸಕ್ಕೆ ಅರ್ಜಿ ಕರೆಯಲಾಗಿದೆ. ನಿಮಗೆ ಇಲ್ಲಿ ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ. ದಿನದಲ್ಲಿ ಮೂವತ್ತೈದು ನಿಮಿಷ ಕೆಲಸ ಮಾಡಿದ್ರೆ ಸಾಕು, ಸಾವಿರಾರು ರೂಪಾಯಿಯನ್ನು ನೀವು ಸಂಪಾದನೆ ಮಾಡಬಹುದು.

ಮನೆಯಿಂದಲೇ ಮಾಡುವ ಕೆಲಸ (Work) ಆಗಿರಲಿ ಇಲ್ಲ ಕಚೇರಿ (Office) ಗೆ ಹೋಗಿ ಮಾಡುವ ಕೆಲಸ ಆಗಿರಲಿ, ಇಡೀ ದಿನ ದುಡಿಯಬೇಕಾಗುತ್ತದೆ. ಒಂದಿಷ್ಟು ಟೆನ್ಷನ್ ನಿಮ್ಮ ಜೊತೆಗಿರುತ್ತದೆ. ಆದ್ರೆ ಈ ಕೆಲಸದಲ್ಲಿ ಅದ್ಯಾವುದೂ ಇಲ್ಲ. ಮನೆಯಲ್ಲೇ ಇದ್ದು, ಆರಾಮವಾಗಿ ನೀವು ಕೆಲಸ ಮಾಡಬಹುದು. ಅದೂ ಕೇವಲ ಮೂವತ್ತೈದು ನಿಮಿಷದಲ್ಲಿ ನಿಮ್ಮ ಕೆಲಸ ಮುಗಿಯುತ್ತೆ. 

Tap to resize

Latest Videos

ಅಬ್ಬಬ್ಬಾ..ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್‌ ಲಾಭ-ನಷ್ಟ ಲೆಕ್ಕಾಚಾರ ಹಾಕೋಕೆ ಇಷ್ಟೊಂದು ಮಂದಿನಾ?

ಬಾತ್‌ರೂಮ್ (Bathroom) ಕ್ವಾಲಿಟಿ ಅಶ್ಯೂರೆನ್ಸ್ ಟೆಸ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೀವು ವಾರದಲ್ಲಿ ಒಂದರಿಂದ ನಾಲ್ಕು ಗಂಟೆ ಕೆಲಸ ಮಾಡಿದ್ರೆ ಸಂಬಳ ಸಿಗುತ್ತದೆ. ಇಲ್ಲಿ ನೀವು ಸ್ವತಂತ್ರರು. ನಿಮ್ಮ ಜೊತೆ ಯಾವುದೇ ಒಪ್ಪಂದವಾಗ್ಲಿ, ಬಾಂಡ್ ಆಗಲಿ ಇರೋದಿಲ್ಲ. ಹಾಗಂತ ಸಂಬಳ ಕಡಿಮೆ ಏನೂ ಇಲ್ಲ. 

ಸಾಲಗಾರರಿಗೆ ಈ ಬಾರಿಯೂ ಇಎಂಐ ಹೆಚ್ಚಳದ ಚಿಂತೆ ಇಲ್ಲ; ರೆಪೋ ದರ ಬದಲಾಯಿಸದ ಆರ್ ಬಿಐ

Bathroom Deal ಹೆಸರಿನ ಕಂಪನಿ ನಿಮಗೆ ಕೆಲಸ ನೀಡ್ತಿದೆ. ಅದು ತನ್ನ ವೆಬ್ ಸೈಟ್ ನಲ್ಲಿ ಅರ್ಜಿ ಪತ್ರ ಸಲ್ಲಿಸುವಂತೆ ಹೇಳಿದೆ. ನೀವು ವೆಬ್ಸೈಟ್ ಓಪನ್ ಮಾಡಿದ ನಂತ್ರ ಅಲ್ಲಿ ಕೆಲ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಉತ್ತರ ನೀಡಿದ ನಂತ್ರ ಕೆಲಸಕ್ಕೆ ಅಪ್ಲಿಕೇಷನ್ ಹಾಕಬಹುದು. ಹದಿನೆಂಟು ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇದು ಮನೆಯಿಂದಲೇ ಮಾಡುವ ಕೆಲಸ. ನಿಮ್ಮ ಕೆಲಸ ಬಾತ್ ರೂಮಿನಲ್ಲಿರುತ್ತದೆ ಎಂಬುದನ್ನು ನೀವು ನೆನಪಿಡಿ.

ನಿಮ್ಮ ಕೆಲಸ ಏನು? : ನೀವು ಬಾತ್‌ಟಬ್‌ನಲ್ಲಿ ಕಂಪನಿಯ ಬಜೆಟ್ ಸ್ನೇಹಿ ಉತ್ಪನ್ನಗಳನ್ನು ಬಳಸಬೇಕು. ನಂತ್ರ ಅದರ ಬಗ್ಗೆ ಫೀಡ್ ಬ್ಯಾಕ್ ನೀಡಬೇಕಾಗುತ್ತದೆ. ಗ್ರಾಹಕರಿಗೆ ಹೆಚ್ಚು ಭರವಸೆಯ ಉತ್ಪನ್ನಗಳನ್ನು ನೀಡಲು ಇದರಿಂದ ಸಹಾಯವಾಗುತ್ತದೆ ಎನ್ನುವ ಕಾರಣಕ್ಕೆ ಕಂಪನಿ ಈ ಉದ್ಯೋಗ ಸೃಷ್ಟಿ ಮಾಡಿದೆ.

ಮೊದಲೇ ಹೇಳಿದಂತೆ ನೀವು ಮನೆಯಲ್ಲಿಯೇ ಇದರ ಪರೀಕ್ಷೆ ಮಾಡಬೇಕು. ಉತ್ಪನ್ನಗಳ ಬಗ್ಗೆ ಸರಿಯಾದ ಮಾಹಿತಿ ನೀಡಲು ನೀವು ಸುಮಾರು ಮೂವತ್ತೈದು ನಿಮಿಷ ಸ್ನಾನ ಮಾಡಬೇಕಾಗುತ್ತದೆ. ನಿಮ್ಮ ಕೆಲಸಕ್ಕೆ ಕಂಪನಿ ತಿಂಗಳಿಗೆ 40 ಸಾವಿರ ರೂಪಾಯಿ ಸಂಬಳ ನೀಡುತ್ತದೆ. ನೀವು ಬಾತ್ ಟಬ್ ನಲ್ಲಿ ಕುಳಿತು ನಿಮ್ಮ ಕೆಲಸವನ್ನು ಮಾಡಬಹುದು. ಪ್ರತಿ ಆರು ತಿಂಗಳಿಗೊಮ್ಮೆ ಬರುವ ಕಂಪನಿ ಸಿಬ್ಬಂದಿ, ನಿಮ್ಮ ಮನೆಯಲ್ಲಿರುವ ಉತ್ಪನ್ನಗಳನ್ನು ಬದಲಾಯಿಸುತ್ತಾರೆ ಎಂದು ಕಂಪನಿ ಮಾಹಿತಿ ನೀಡಿದೆ. ಸ್ನಾನ ಮಾಡೋದು ಇಷ್ಟ ಎನ್ನುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ. 

click me!