ಜಿಯೋ IPOಗೆ ಆರಂಭದಲ್ಲೇ 2.5 ಲಕ್ಷ ಕೋಟಿ ರೂ ಬೇಡಿಕೆ, ಅಕ್ಟೋಬರ್ 19ಕ್ಕೆ ಆಂಕರ್ ಬಿಡ್ಡಿಂಗ್

Published : Oct 18, 2026, 05:27 PM IST
Jio IPO Attracts Early Demand

ಸಾರಾಂಶ

ಚಿಲ್ಲರೆ ಹೂಡಿಕೆದಾರರು ಜಿಯೋ ಐಪಿಒಗೆ ಬ್ರೋಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. IPO ಲಾಂಚ್‌ಗೂ ಮುನ್ನವೇ ಅಕ್ಟೋಬರ್ 19ರಂದು ಆ್ಯಂಕರ್ ಬಿಡ್ಡಿಂಗ್ ನಡೆಯಲಿದೆ.

ಮುಂಬೈ (ಅ.18) ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಮಹತ್ವದ ಘಟ್ಟ ತಲುಪಿದ್ದು, ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಪ್ರಮುಖ ಬಿಸಿನೆಸ್ ಮಾಧ್ಯಮ ಸಂಸ್ಥೆಗಳ ವರದಿಗಳಪ್ರಕಾರ, ಜಿಯೋ ಐಪಿಒಗೆ ಈಗಾಗಲೇ ಜಾಗತಿಕ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಸುಮಾರು 2.5 ಲಕ್ಷ ಕೋಟಿ ರೂ.ಗಳ ಆರಂಭಿಕ ಬೇಡಿಕೆ ಸೃಷ್ಟಿಯಾಗಿದೆ. ಇದು 30,200 ಕೋಟಿ ರೂಪಾಯಿಗಳ ಐಪಿಒ ಗಾತ್ರಕ್ಕಿಂತ ಎಂಟರಷ್ಟು ಹೆಚ್ಚಾಗಿರುವುದು ವಿಶೇಷ. ಹಾಗೆಯೇ ಚಿಲ್ಲರೆ ಹೂಡಿಕೆದಾರರು ಹಲವರು ಬ್ರೋಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಐಪಿಒಗಾಗಿ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದು.

ಆ್ಯಂಕರ್ ಬುಕ್ ಆರಂಭಕ್ಕೂ ಮುನ್ನವೇ ಹೂಡಿಕೆ

2.5 ಲಕ್ಷ ಕೋಟಿ ರೂಪಾಯಿಗಳ ಮೊತ್ತವು ಔಪಚಾರಿಕ ಐಪಿಒ ಚಂದಾದಾರಿಕೆಯಂತಿರದೆ, ಸಾಂಸ್ಥಿಕ ಹೂಡಿಕೆದಾರರ ಗಣನೀಯ ಆಸಕ್ತಿಯನ್ನು ಬಿಂಬಿಸಿದೆ. ಆಂಕರ್ ಬುಕ್ ತೆರೆಯುವ ಮೊದಲು ಬಲವಾದ ಸಾಂಸ್ಥಿಕ ಬೇಡಿಕೆಯನ್ನ ಸೂಚಿಸಿದೆ. ವೆಲ್ತ್‌ ಫಂಡ್‌ಗಳು, ಜಾಗತಿಕ ಮಟ್ಟದ ದೀರ್ಘಕಾಲೀನ ಹೂಡಿಕೆದಾರರು, ದೇಶೀಯ ದಿಗ್ಗಜ ಮ್ಯೂಚುವಲ್‌ ಫಂಡ್‌ಗಳು ಮತ್ತು ವಿಮೆ ಕಂಪನಿಗಳು ಆಂಕರ್‌ ಬುಕ್‌ ಆರಂಭಕ್ಕೆ ಮುನ್ನವೇ ಹೂಡಿಕೆಯ ಊತ್ಸಾಹವನ್ನು ತೋರಿಸಿವೆ.

ಪ್ರಮುಖ ಜಾಗತಿಕ ಹೂಡಿಕೆದಾರರ ಪೈಕಿ, ಜಿಐಸಿ , ನಾರ್ಜಸ್ ಬ್ಯಾಂಕ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್, ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ, ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ, ಬ್ಲ್ಯಾಕ್‌ರಾಕ್, ಫಿಡೆಲಿಟಿ ಮತ್ತು ಕ್ಯಾಪಿಟಲ್ ಗ್ರೂಪ್ ಸೇರಿವೆ. ದೇಶೀಯವಾಗಿ, ಎಲ್‌ಐಸಿ , ಎಸ್‌ಬಿಐ ಮ್ಯೂಚುವಲ್ ಫಂಡ್ ಮತ್ತು ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ಜಿಯೋ ಐಪಿಒದಲ್ಲಿ ಹೂಡಿಕೆಗೆ ಆಸಕ್ತಿ ಹೊಂದಿರುವ ಪ್ರಮುಖ ಸಂಸ್ಥೆಗಳಾಗಿವೆ.

ಆರ್ಡರ್ ಮುಂಗಡ ಸಲ್ಲಿಸಲು ಅವಕಾಶ

ಮತ್ತೊಂದೆಡೆ, ಚಿಲ್ಲರೆ ಹೂಡಿಕೆದಾರರು ಈಗಾಗಲೇ ಹಲವು ಬ್ರೋಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಐಪಿಒಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಮುಂಚಿತವಾಗಿ ಅರ್ಜಿ ಸಲ್ಲಿಸುವುದರಿಂದ ಹೂಡಿಕೆದಾರರು ತಮ್ಮ ಆರ್ಡರ್ ಮುಂಗಡವಾಗಿ ಸಲ್ಲಿಸಲು ಅವಕಾಶ ನೀಡುತ್ತದೆ, ಆದರೆ ಇದು ಅಕ್ಟೋಬರ್ 21 ರಂದು ಐಪಿಒ ತೆರೆದ ನಂತರವೇ ಔಪಚಾರಿಕ ಬಿಡ್ಡಿಂಗ್ ಪ್ರಕ್ರಿಯೆಯ ಭಾಗವಾಗುತ್ತದೆ.

ರಿಲಯನ್ಸ್‌ ಜಿಯೋ ಐಪಿಒದಲ್ಲಿ ಪ್ರತಿ ಷೇರಿಗೆ 1,065 ರಿಂದ 1,119 ರೂ.ಗಳ ದರ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಕನಿಷ್ಠ ಬಿಡ್ ಲಾಟ್ 12 ಷೇರುಗಳನ್ನು ಹೊಂದಿದೆ. ದರ ಶ್ರೇಣಿಯ ಮೇಲ್ಮಟ್ಟದಲ್ಲಿ, ಒಂದು ಲಾಟ್‌ಗೆ 13,428 ರೂ.ಗಳ ಹೂಡಿಕೆ ಅಗತ್ಯವಿರುತ್ತದೆ. ಈ ಇಶ್ಯೂ ಅಕ್ಟೋಬರ್ 21 ರಂದು ತೆರೆಯಲಿದ್ದು, ಅಕ್ಟೋಬರ್ 23 ರಂದು ಮುಕ್ತಾಯಗೊಳ್ಳಲಿದೆ.

ಅದಕ್ಕೂ ಮೊದಲು, ಆಂಕರ್ ಹೂಡಿಕೆದಾರರ ಬುಕ್‌ ಪ್ರಕ್ರಿಯೆ ಅಕ್ಟೋಬರ್ 19 ರಂದು ತೆರೆಯಲಿದೆ. ಸಾರ್ವಜನಿಕ ಇಶ್ಯೂಗೆ ಮುಂಚಿತವಾಗಿ ಬಲವಾದ ಆರಂಭಿಕ ಸಾಂಸ್ಥಿಕ ಆಸಕ್ತಿಯು ಎಷ್ಟು ಮಟ್ಟಿಗೆ ನಿಜವಾದ ಭಾಗವಹಿಸುವಿಕೆಯಾಗಿ ಪರಿವರ್ತನೆಗೊಳ್ಳುತ್ತದೆ ಎಂಬುದರ ಮೊದಲ ಔಪಚಾರಿಕ ಸೂಚನೆಯನ್ನು ಆಂಕರ್ ಹಂಚಿಕೆಯು ನೀಡುತ್ತದೆ. ಒಟ್ಟಿನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಭಾರಿ ಸಂಚಲನ ಸೃಷ್ಟಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Top 10 Billionaire Countries: ಅತಿ ಹೆಚ್ಚು ಬಿಲಿಯನೇರ್‌ಗಳಿರುವ ಟಾಪ್ 10 ದೇಶಗಳು, ಭಾರತದ ಸ್ಥಾನವೆಷ್ಟು?
ಅಂಬಾನಿvsಮಸ್ಕ್: ಸ್ಟಾರ್‌ಲಿಂಕ್‌ಗೆ ನಿಯಮವೇ ಮುಖ್ಯವೆಂದ ರಿಲಯನ್ಸ್, ಭಾರತದಲ್ಲಿ ಇಂಟರ್ನೆಟ್ ಸೇವೆಗೆ ಸಿದ್ಧವೆಂದ ಮಸ್ಕ್