Top 10 Billionaire Countries: ಅತಿ ಹೆಚ್ಚು ಬಿಲಿಯನೇರ್‌ಗಳಿರುವ ಟಾಪ್ 10 ದೇಶಗಳು, ಭಾರತದ ಸ್ಥಾನವೆಷ್ಟು?

Published : Oct 18, 2026, 05:20 PM IST
Billionaires

ಸಾರಾಂಶ

2026ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಈ ಜಾಗತಿಕ ಕುಬೇರರ ಪಟ್ಟಿಯಲ್ಲಿ ಭಾರತ ಭರ್ಜರಿ ಸಾಧನೆ ಮಾಡಿದ್ದು, ಅತಿ ಹೆಚ್ಚು ಶ್ರೀಮಂತರಿರುವ ವಿಶ್ವದ 3ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಜರ್ಮನಿ, ರಷ್ಯಾ ಸೇರಿದಂತೆ ಟಾಪ್ 10 ದೇಶಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

2026ರ ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದೆ. ಅತಿ ಹೆಚ್ಚು ಬಿಲಿಯನೇರ್‌ಗಳಿರುವ ದೇಶಗಳ ಪೈಕಿ ಅಮೆರಿಕ ಮತ್ತೆ ನಂಬರ್ ಒನ್ ಸ್ಥಾನದಲ್ಲಿದೆ. ಹಾಗಾದರೆ ಈ ಲಿಸ್ಟ್‌ನಲ್ಲಿ ಭಾರತದ ಸ್ಥಾನವೆಷ್ಟು? ಟಾಪ್ 10 ದೇಶಗಳು ಯಾವುವು ಅನ್ನೋದರ ಡೀಟೇಲ್ಸ್ ಇಲ್ಲಿದೆ.

ಪ್ರಪಂಚದ ಕುಬೇರರ ರೇಸ್‌ನಲ್ಲಿ ಭಾರತಕ್ಕೆ ಭರ್ಜರಿ ಸ್ಥಾನ

ಪ್ರಪಂಚದಾದ್ಯಂತ ಅತಿ ಹೆಚ್ಚು ಬಿಲಿಯನೇರ್‌ಗಳು ವಾಸಿಸುವ ದೇಶಗಳ ಹೊಸ ಪಟ್ಟಿ ರಿಲೀಸ್ ಆಗಿದೆ. ಈ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅಮೆರಿಕ ತನ್ನ ಪಾರುಪತ್ಯ ಮುಂದುವರಿಸಿದೆ. ಭಾರತ ಕೂಡ ಈ ಪಟ್ಟಿಯಲ್ಲಿ ಭರ್ಜರಿ ಸಾಧನೆ ಮಾಡಿದ್ದು, ಅತಿ ಹೆಚ್ಚು ಕುಬೇರರಿರುವ ವಿಶ್ವದ 3ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ.

1. ಅಮೆರಿಕ

ವಿವಿಧ ದೇಶಗಳ ಆರ್ಥಿಕ ಬೆಳವಣಿಗೆ, ಷೇರುಪೇಟೆಗಳ ಏರಿಕೆ ಹಾಗೂ ಹೊಸ ಬ್ಯುಸಿನೆಸ್ ಮಾಡೆಲ್‌ಗಳಿಂದಾಗಿ ಈ ವರ್ಷ ಬಿಲಿಯನೇರ್‌ಗಳ ಸಂಖ್ಯೆ ಭಾರೀ ಏರಿಕೆಯಾಗಿದೆ. ಜಗತ್ತಿನ ಟಾಪ್ 10 ಶ್ರೀಮಂತ ದೇಶಗಳು, ಅವುಗಳ ಒಟ್ಟು ಸಂಪತ್ತು ಹಾಗೂ ಆಯಾ ದೇಶಗಳ ಟಾಪ್ ಕುಬೇರರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಮೆರಿಕ 989 ಬಿಲಿಯನೇರ್‌ಗಳೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಎಲ್ಲಾ ಕುಬೇರರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 8.4 ಟ್ರಿಲಿಯನ್ ಡಾಲರ್. ದಕ್ಷಿಣ ಆಫ್ರಿಕಾದಿಂದ ಅಮೆರಿಕಕ್ಕೆ ವಲಸೆ ಬಂದು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿ ಬೆಳೆದ ಎಲಾನ್ ಮಸ್ಕ್, ಯುಎಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

2. ಚೀನಾ

ಈ ವರ್ಷ ಚೀನಾದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿದೆ. ಒಟ್ಟು 539 ಬಿಲಿಯನೇರ್‌ಗಳೊಂದಿಗೆ ಚೀನಾ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 2.2 ಟ್ರಿಲಿಯನ್ ಡಾಲರ್. ಕಳೆದ ವರ್ಷ 495 ಬಿಲಿಯನೇರ್‌ಗಳಿದ್ದರು. ಟಿಕ್‌ಟಾಕ್ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್ ಸಹ-ಸಂಸ್ಥಾಪಕ ಜಾಂಗ್ ಯಿಮಿಂಗ್ ಚೀನಾದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

3. ಭಾರತ

ಅತಿ ಹೆಚ್ಚು ಬಿಲಿಯನೇರ್‌ಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಪ್ರಸ್ತುತ 229 ಬಿಲಿಯನೇರ್‌ಗಳಿದ್ದು, ಇವರ ಒಟ್ಟು ಸಂಪತ್ತು 1 ಟ್ರಿಲಿಯನ್ ಡಾಲರ್ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿ ಪಟ್ಟಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.

4. ಜರ್ಮನಿ

ಜರ್ಮನಿಯಲ್ಲಿ ಬಿಲಿಯನೇರ್‌ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, 212ಕ್ಕೆ ತಲುಪಿದೆ. ಕಳೆದ ವರ್ಷ 171 ಬಿಲಿಯನೇರ್‌ಗಳಿದ್ದರು ಹಾಗೂ 793 ಬಿಲಿಯನ್ ಡಾಲರ್ ಸಂಪತ್ತಿತ್ತು. ಈ ಬಾರಿ ಇವರ ಒಟ್ಟು ಆಸ್ತಿ ಮೌಲ್ಯ 1 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 67.2 ಬಿಲಿಯನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ಡೈಟರ್ ಶ್ವಾರ್ಜ್ ಜರ್ಮನಿಯ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

5. ರಷ್ಯಾ

ಫೋರ್ಬ್ಸ್ ಪಟ್ಟಿಯ ಪ್ರಕಾರ, ರಷ್ಯಾ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಅಲ್ಲಿ ಒಟ್ಟು 147 ಬಿಲಿಯನೇರ್‌ಗಳಿದ್ದು, ಇವರ ಒಟ್ಟು ಸಂಪತ್ತು 649 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷ 140 ಬಿಲಿಯನೇರ್‌ಗಳಿದ್ದರು. 37 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಅಲೆಕ್ಸಿ ಮೊರ್ಡಶೋವ್ ಮತ್ತು ಅವರ ಕುಟುಂಬ ರಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ.

6 ರಿಂದ 10ನೇ ಸ್ಥಾನದಲ್ಲಿರುವ ದೇಶಗಳ ಪಟ್ಟಿ ಇಲ್ಲಿದೆ

• ಇಟಲಿ: 89 ಬಿಲಿಯನೇರ್‌ಗಳೊಂದಿಗೆ ಇಟಲಿ 6ನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 483 ಬಿಲಿಯನ್ ಡಾಲರ್. 89.3 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಜಿಯಾನ್‌ಕಾರ್ಲೊ ದೇವಸಿನಿ ಇಟಲಿಯ ಟಾಪ್ ಶ್ರೀಮಂತರಾಗಿದ್ದಾರೆ.

• ಕೆನಡಾ: 82 ಬಿಲಿಯನೇರ್‌ಗಳೊಂದಿಗೆ ಕೆನಡಾ 7ನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 457 ಬಿಲಿಯನ್ ಡಾಲರ್. ಕಳೆದ ವರ್ಷ ಇಲ್ಲಿ 76 ಬಿಲಿಯನೇರ್‌ಗಳಿದ್ದರು ಹಾಗೂ 349 ಬಿಲಿಯನ್ ಡಾಲರ್ ಸಂಪತ್ತಿತ್ತು. 110 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಚಾಂಗ್‌ಪೆಂಗ್ ಝಾವೋ ಕೆನಡಾದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

• ಹಾಂಗ್ ಕಾಂಗ್: 71 ಬಿಲಿಯನೇರ್‌ಗಳೊಂದಿಗೆ ಹಾಂಗ್ ಕಾಂಗ್ 8ನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 420 ಬಿಲಿಯನ್ ಡಾಲರ್.

• ಬ್ರೆಜಿಲ್: 70 ಬಿಲಿಯನೇರ್‌ಗಳೊಂದಿಗೆ ಬ್ರೆಜಿಲ್ 9ನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 265 ಬಿಲಿಯನ್ ಡಾಲರ್. 35.9 ಬಿಲಿಯನ್ ಡಾಲರ್‌ನೊಂದಿಗೆ ಎಡ್ವರ್ಡೊ ಸವೆರಿನ್ ಬ್ರೆಜಿಲ್‌ನ ಟಾಪ್ ಶ್ರೀಮಂತರಾಗಿದ್ದಾರೆ.

• ತೈವಾನ್: 66 ಬಿಲಿಯನೇರ್‌ಗಳೊಂದಿಗೆ ತೈವಾನ್ 10ನೇ ಸ್ಥಾನದಲ್ಲಿದೆ. ಇವರ ಒಟ್ಟು ಸಂಪತ್ತು 245 ಬಿಲಿಯನ್ ಡಾಲರ್ ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅಂಬಾನಿvsಮಸ್ಕ್: ಸ್ಟಾರ್‌ಲಿಂಕ್‌ಗೆ ನಿಯಮವೇ ಮುಖ್ಯವೆಂದ ರಿಲಯನ್ಸ್, ಭಾರತದಲ್ಲಿ ಇಂಟರ್ನೆಟ್ ಸೇವೆಗೆ ಸಿದ್ಧವೆಂದ ಮಸ್ಕ್
ವೈರ್ ಬೇಡ, ಕರೆಂಟ್ ಕೆಲಸವೂ ಬೇಡ: ಕೇವಲ ₹500ಕ್ಕೆ ಸಿಗುತ್ತೆ ವೈರ್‌ಲೆಸ್ ಡೋರ್‌ಬೆಲ್!