Isha Ambani: ಸಿಂಪಲ್‌ ಅಸೈನ್‌ಮೆಂಟ್‌ ಅಪ್‌ಲೋಡ್‌ ಮಾಡಲು ಕಷ್ಟಪಟ್ಟಾಗ ಹುಟ್ಟಿಕೊಂಡ ಯೋಚನೆ Jio, ಇಶಾ ಅಂಬಾನಿ ನೆನಪು!

Published : Oct 16, 2026, 04:12 PM IST
Isha Ambani

ಸಾರಾಂಶ

2009-10ರಲ್ಲಿ ಇಶಾ ಅಂಬಾನಿಗೆ ಇಂಟರ್ನೆಟ್ ಸಮಸ್ಯೆಯಿಂದ ಅಸೈನ್‌ಮೆಂಟ್ ಅಪ್‌ಲೋಡ್ ಮಾಡಲು ಕಷ್ಟವಾಗಿದ್ದೇ ರಿಲಯನ್ಸ್ ಜಿಯೋ ಹುಟ್ಟಿಗೆ ಕಾರಣವಾಯಿತಾ? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಏನೋ ಒಂದು ಹೊಸ ಸಾಧನ ಹುಟ್ಟಿಕೊಳ್ಳಬೇಕು ಎಂದರೆ, ಎರಡು ರೀತಿಯ ಸವಾಲುಗಳಿಂದ ನಿರ್ಮಾಣವಾಗುತ್ತವೆ. ಕೆಲವೊಂದು ಮಾಡಲೇ ಬೇಕೆಂದು ದೃಢ ನಿಶ್ಚಯದ ಹೆಜ್ಜೆ ಇಟ್ಟು ತೆಗೆದುಕೊಂಡ ನಿರ್ಧಾರ. ಮತ್ತೊಂದು ಎದುರಾದ ಅಡೆತಡೆಗಳಿಗೆ ನಾವೇ ಸೃಷ್ಟಿಸಿಕೊಳ್ಳುವ ದಾರಿ. ಹೀಗೆ ಅಸೈನಮೆಂಟ್‌ವೊಂದನ್ನು ಅಪ್ಲೋಡ್‌ ಮಾಡುವಾಗ ಸೃಷ್ಟಿಯಾಗಿದ್ದೆ ಜಿಯೋ ಎನ್ನುವ ನೆನಪನ್ನು ಉದ್ಯಮಿ ಇಶಾ ಅಂಬಾನಿ ಮೆಲುಕು ಹಾಕಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಸಮಸ್ಯೆಯೊಂದಿಗೆ ಸೃಷ್ಟಿಯಾದ ಜಿಯೋ!

ಶೀಘ್ರದಲ್ಲೇ ಐತಿಹಾಸಿಕ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ)ಗೆ ಹೋಗಲಿರುವ ರಿಲಯನ್ಸ್ ಜಿಯೋ, ಸುಮಾರು ಎರಡು ದಶಕಗಳ ಹಿಂದೆ ಬಹಳ ಸಣ್ಣ ಸಮಸ್ಯೆಯೊಂದಿಗೆ ಪ್ರಾರಂಭವಾಗಿತ್ತು. ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಪತ್ರಿಕಾಗೋಷ್ಠಿಯಲ್ಲಿ ಇಶಾ ಅಂಬಾನಿ, 2009-2010ರಲ್ಲಿ, ಅವರು ಮತ್ತು ಆಕಾಶ್ ಕಾಲೇಜು ವಿರಾಮದ ನಂತರ ಅಮೆರಿಕದಿಂದ (ಯುಎಸ್) ಹಿಂತಿರುಗಿದಾಗ ಇಂಟರ್ನೆಟ್ ಮೂಲಕ ಸರಳವಾದ ಅಸೈನ್‌ಮೆಂಟ್ ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಆಗ ಇಂಟರ್ನೆಟ್‌ನ ವ್ಯವಸ್ಥೆ ಸುಗಮವಾಗಿರಲಿಲ್ಲ. ಈ ನಿಟ್ಟಿನಲ್ಲಿ ಇಂಥ ಸಮಸ್ಯೆಯೇ ಮುಂದೆ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋಗೆ ಕಲ್ಪನೆಗೆ ನಾಂದಿ ಹಾಡಿತು ಎಂದು ಹೇಳಿಕೊಂಡಿದ್ದಾರೆ.

ಇಶಾ ಇಟ್ಟ ಪ್ರಶ್ನೆ ಏನು?

ಆಗ ಪಶ್ಚಿಮ ದೇಶಗಳಲ್ಲಿ ಸಿಕ್ಕ ಇಂಟರ್‍‌ನೆಟ್‌ ಸವಲತ್ತು ನಮ್ಮಲ್ಲಿ ಏಕೆ ಇಲ್ಲ? ಎಂಬ ಪ್ರಶ್ನೆ ಇಶಾ ಅವರ ಮನಸ್ಸಿನಲ್ಲಿ ಬಂದಿತು. ಇದಕ್ಕೆ ಉತ್ತರವೆಂದರೆ ಡಿಜಿಟಲ್ ತಂತ್ರಜ್ಞಾನ ವೇದಿಕೆ ಕಂಪನಿ ನಿರ್ಮಾಣಮಾಡುವುದು ಎಂದು ಆಕಾಶ್ ದೃಢ ಹೆಜ್ಜೆಯಟ್ಟರು. ಅದೇ ನಿಟ್ಟಿನಲ್ಲಿ 2016ರಲ್ಲಿ, ಜಿಯೋ ಪ್ರಾರಂಭವಾಯಿತು, ಮತ್ತು ಇಂದು 2026 ರಲ್ಲಿ ಇದ್ದೇವೆ, ಜಿಯೋ ಇಂದು 500 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರಿಗೆ ಮೊಬೈಲ್ ಸೇವೆ ಮತ್ತು ಲಕ್ಷಾಂತರ ವೈರ್‌ಲೈನ್ ಬ್ರಾಡ್‌ಬ್ಯಾಂಡ್ ಪ್ರವೇಶವನ್ನು ಸಹ ಒದಗಿಸುತ್ತಿದೆ. ಗ್ರಾಹಕರಿಗೆ ಮಾತ್ರವಲ್ಲ, ಜಿಯೋ ತನ್ನ ಬ್ಯಸಿನೆಸ್‌ ಟು ಬ್ಯುಸಿನೆಸ್‌ ಸೇವೆ ಮೂಲಕ ಸಣ್ಣ ವ್ಯವಹಾರ ಮತ್ತು ಉದ್ಯಮಗಳು ಡಿಜಿಟಲ್ಅನ್ನು ಅಡಾಪ್ಟ್‌ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. ಅಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್ ಈ ಜಿಯೋ ಐಪಿಒ ಅನ್ನು ಹೊಸ ಷೇರುಗಳ ವಿತರಣೆ ಮೂಲಕ ನಡೆಸಲು ನಿರ್ಧರಿಸಿದೆ ಎಂದಿದ್ದಾರೆ.

ರಿಲಯನ್ಸ್ ಜಿಯೋ IPO ಘೋಷಣೆ ಯಾವಾಗ!

ರಿಲಯನ್ಸ್ ಜಿಯೋ ತನ್ನ ಐಪಿಒವನ್ನು ಅ.21ರಂದು ತೆರೆಯಲಿದೆ ಮತ್ತು ಐಪಿಒ ಅ.23, 2026 ರಂದು ಮುಕ್ತಾಯಗೊಳ್ಳಲಿದೆ. ಷೇರುಗಳು ಅ.28 ರಂದು ತೆರೆಗೆ ಬರುವ ನಿರೀಕ್ಷೆಯಿದ್ದು, ಆ ದಿನದಿಂದಲೇ ವಹಿವಾಟು ಪ್ರಾರಂಭವಾಗುತ್ತದೆ ಎಂದಿದ್ದಾರೆ. ಜಿಯೋ ಪ್ಲಾಟ್‌ಫಾರ್ಮ್ಸ್ ಬೆಲೆ ಪಟ್ಟಿಯನ್ನು ರೂ 1065 ರಿಂದ ರೂ 1119 ಕ್ಕೆ ನಿಗದಿಪಡಿಸಿದೆ. ಚಿಲ್ಲರೆ ಹೂಡಿಕೆದಾರರು ಕನಿಷ್ಠ 12 ಷೇರುಗಳಿಗೆ ಮತ್ತು ನಂತರ 12 ರ ಗುಣಕಗಳಲ್ಲಿ ಬಿಡ್ ಮಾಡಬೇಕು. ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರು ಮತ್ತು ಅರ್ಹ ಜಿಯೋ ಪ್ಲಾಟ್‌ಫಾರ್ಮ್ಸ್ ಉದ್ಯೋಗಿಗಳಿಗೆ ಸಹ ಬುಕಿಂಗ್‌ಗಳಿವೆ. ನವೀಕರಣಗಳಿಗಾಗಿ ಟ್ಯೂನ್ ಆಗಿರಲು ಟೆಲಿಕಾಂಟಾಕ್ ಅನ್ನು ಓದುವುದನ್ನು ಮುಂದುವರಿಸಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಟೆಲಿಕಾಂ ವಲಯದಲ್ಲಿ Vodafone Idea ಹೊಸ ಕ್ರಾಂತಿ: ದೇಶದಲ್ಲೇ ಪ್ರಥಮ ಪ್ರೀಪೇಡ್ ಫ್ಯಾಮಿಲಿ ಪ್ಲಾನ್ ರಿಲೀಸ್‌
DMart ಬಿಲ್ ನೋಡಿ ಖುಷಿ ಪಡ್ಬೇಡಿ! ಬೆಂಗಳೂರಿನ ಈ ಮಾರ್ಕೆಟ್‌ಗಳಲ್ಲಿ ಹೆಚ್ಚು ಉಳಿತಾಯ!