ಅನ್‌ಲಿಮಿಟೆಡ್ ಡೇಟಾ, ಉಚಿತ ಕಾಲ್, ಒಟಿಟಿ ಸೇರಿ ಭರ್ಜರಿ ಕೊಡುಗೆ, ಜಿಯೋ ದೀಪಾವಳಿ ಆಫರ್!

By Chethan Kumar  |  First Published Oct 11, 2024, 1:59 PM IST

100 Mbps ಸ್ಪೀಡ್ ಇಂಟರ್ನೆಟ್, ಉಚಿತ ಕಾಲ್, ಉಚಿತ ಡಿಸ್ನಿ ಹಾಟ್‌ಸ್ಟಾರ್, ಸೋನಿ ಲೈವ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಹಲವು ಕೊಡುಗೆ. ಜಿಯೋ ತನ್ನ ಗ್ರಾಹಕರಿಗೆ ದೀಪಾವಳಿ ಉಡುಗೊರೆ ಘೋಷಿಸಿದೆ .


ನವದೆಹಲಿ(ಅ.11) ದೀಪಾವಳಿ ಹಬ್ಬಕ್ಕೆ ಜಿಯೋ ಇದೀಗ ಭರ್ಜರಿ ಕೊಡುಗೆ ಘೋಷಿಸಿದೆ. ವಿಶೇಷವಾಗಿ ಜಿಯೋ ಫೈಬರ್ ಗ್ರಾಹಕರಿಗೆ ಹಲವು ಉಚಿತ ಉಡುಗೊರೆ ನೀಡಲಾಗಿದೆ. 100ಎಂಬಿಪಿಎಸ್ ಸ್ಪೀಡ್ ಇಂಟರ್ನೆಟ್, ಅನ್‌ಲಿಮಿಟೆಡ್ ಡೇಟಾ, ಉಚಿತ ವಾಯ್ಸ್ ಕಾಲ್, 800ಕ್ಕೂ ಹೆಚ್ಚು ಚಾನೆಲ್ ಆ್ಯಕ್ಸೆಸ್ ಸೇರಿದಂತೆ ಹಲವು ಕೊಡುಗೆಗಳನ್ನು ಜಿಯೋ ಘೋಷಿಸಿದೆ. 3 ತಿಂಗಳ ಪ್ಲಾನ್, 6 ತಿಂಗಳ ಪ್ಲಾನ್ ಸೇರಿದಂತೆ ಗ್ರಾಹಕರ ಅವಶ್ಯಕತೆ ಹಾಗೂ ಬೇಡಿಕೆಗೆ ತಕ್ಕಂತೆ ಆಫರ್ ಮೂಲಕ ಪ್ಲಾನ್ ಘೋಷಿಸಲಾಗಿದೆ.

ಜಿಯೋ ಘೋಷಿರುವ ದೀಪಾವಳಿ ಆಫರ್, ಹೊಸದಾಗಿ ಫೈಬರ್ ಖರೀದಿಸುವ ಗ್ರಾಹಕರಿಗೆ ಅನ್ವಯವಾಗಲಿದೆ. ಇದರ ಜೊತೆಗೆ ಸೆಪ್ಟೆಂಬರ್‌ನಲ್ಲಿ ಜಿಯೋ ಫೈಬರ್ ಗ್ರಾಹಕರಾಗಿರುವ ಬಳಕೆದಾರರಿಗೂ ಈ ಆಫರ್ ಅನ್ವಯವಾಗಲಿದೆ. 30 ಎಂಬಿಪಿಎಸ್ ನಿಂದ 100 ಎಂಬಿಪಿಎಸ್ ಸ್ಪೀಡ್ ವರೆಗೂ ಆಫರ್ ನೀಡಲಾಗಿದೆ.

Tap to resize

Latest Videos

undefined

ಆಯುಧ ಪೂಜೆಗೆ ಜಿಯೋ ಧಮಾಕ, ಪ್ರತಿ ದಿನ 2.5 ಜಿಬಿ, ಅನ್‌ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!

30 Mbps ಪ್ಲಾನ್
ಇದು 3 ತಿಂಗಳ ವ್ಯಾಲಿಟಿಡಿ ಪ್ಲಾನ್. ಈ ಪ್ಲಾನ್ ಆಯ್ಕೆ ಮಾಡಿಕೊಂಡ ಬಳಕೆದಾರರಿಗೆ ಅನ್‌ಲಿಮಿಟೆಡ್ ಡೇಟಾ, ಉಚಿತ ವಾಯ್ಸ್ ಕಾಲ್, 800ಕ್ಕೂ ಹೆಚ್ಚು ಟಿವಿ ಚಾನೆಸ್ ಆ್ಯಕ್ಸೆಸ್ ಸಿಗಲಿದೆ. ಈ ರೀಚಾರ್ಜ್ ಪ್ಲಾನ್ ಬೆಲೆ 2,222 ರೂಪಾಯಿ. ಡಿಸ್ನಿ ಹಾಟ್‌ಸ್ಟಾರ್, ಜಿಯೋ ಸಿನಿಮಾ, ಸೋನಿ ಸೈವ್ ಸೇರಿದಂತೆ ಒಟಿಟಿ ಪ್ಲಾಟ್‌ಫಾರ್ಮ್ ಉಚಿತವಾಗಿ ಸಿಗಲಿದೆ. ಇನ್ನು ಹೆಚ್ಚುವರಿ ಡೇಟಾ ಬೇಕಾದರೆ 101 ರೂಪಾಯಿ ರೀಚಾರ್ಜ್ ಮಾಡಿದರೆ 100ಜಿಬಿ ಡೇಟಾ 90 ದಿನ ವ್ಯಾಲಿಡಿಟಿಯಲ್ಲಿ ಸಿಗಲಿದೆ.ಇದರ

ಇದರ ಜೊತೆಗೆ 150 ಜಿಪಿ ಉಚಿತ ಹೆಚ್ಚುವರಿ ಡೇಟಾ ಹಾಗೂ ಇತರ ಸೌಲಭ್ಯದ ಪ್ಲಾನ್ ಬೆಲೆ 3,333 ರೂಪಾಯಿ. ಇದರ ವ್ಯಾಲಿಡಿಟಿ ಮೂರು ತಿಂಗಳು. 4,444 ರೂಪಾಯಿ ಪ್ಲಾನ್ ಆಯ್ಕೆ ಮಾಡಿಕೊಂಡರೆ 200 ಜಿಬಿ ಉಚಿತ ಹೆಚ್ಚವರಿ ಡೇಟಾ ಹಾಗೂ ಇತರ ಸೌಲಭ್ಯಗಳು ಸಿಗಲಿದೆ. 

ಜಿಯೋ ಫೈಬರ್ ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಹೊಸ ಕ್ರಾಂತಿ ಮಾಡಿದೆ. ಜಿಯೋ ಫೈಬರ್ ಮೂಲಕ ಅತೀ  ವೇಗದ ಇಂಟರ್ನೆಟ್ ಸಂಪರ್ಕ, ಡಿಸ್ಕೌಂಟ್ ಬೆಲೆ ಮೂಲಕ ಗ್ರಾಹಕರಿಗೆ ಕೈಗೆಟುಕವ ದರಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ. ಗ್ರಾಮೀಣ ಭಾಗದಲ್ಲೂ ಜಿಯೋ ಫೈಬರ್ ಸೇವೆ ಲಭ್ಯವಿದೆ. ಇದೀಗ ದೀಪಾವಳಿ ಆಫರ್ ಮೂಲಕ ಜಿಯೋ ತನ್ನ ಫೈಬರ್ ಗ್ರಾಹಕರ ಹೆಚ್ಚಿಸಲು ನಿರ್ಧರಿಸಿದೆ.

ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್!
 

click me!