ಅಮೇಜಾನ್ CEO ಸ್ಥಾನಕ್ಕೆ ಜೆಫ್ ವಿದಾಯ: 27 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬೆಜೋಸ್!

By Suvarna NewsFirst Published Feb 3, 2021, 4:18 PM IST
Highlights

ಅಮೇಜಾನ್ CEO ಸ್ಥಾನಕ್ಕೆ ಜೆಫ್ ವಿದಾಯ|  3ನೇ ತ್ರೈಮಾಸಿಕದಲ್ಲಿ ಅಧಿಕಾರ ಹಸ್ತಾಂತರ| ವೆಬ್ ಸರ್ವೀಸಸ್‌ನ ಆ್ಯಂಡಿ ಜೆಸ್ಸಿ ಹೊಸ CEO| 27 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಜೆಫ್

ವಾಷಿಂಗ್ಟನ್(ಫೆ.03): ಅಮೇಜಾನ್ ಎಂಬ ಇ-ಕಾಮರ್ಸ್ ಕಂಪನಿಯ ಗ್ರೋಥ್ ಅಮೇಜಿಂಗ್. ಕಳೆದ ಎರಡೂವರೆ ದಶಕಗಳ ಹಿಂದೆ ಸ್ಥಾಪನೆಯಾದ ಈ ಕಂಪನಿ ಇದೀಗ ಶ್ರೀ ಸಾಮಾನ್ಯನಿಗೂ ಚಿರಪರಿಚಿತ. ಮನೆಯಲ್ಲಿಯೇ ಕೂತ ಬೇಕಾದ್ದನ್ನು ತರಿಸಿಕೊಳ್ಳುವಂತೆ ಮಾಡಿದ ವ್ಯವಸ್ಥೆಗೆ hands ಆಫ್. ಕಳೆದ 27 ವರ್ಷಗಳಿಂದಲೂ ಈ ಸಂಸ್ಥೆಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದ ಜೆಫ್ ಬೆಜೋಜ್ ಇದೀಗ ಅಧಿಕಾರ ತ್ಯಜಿಸಲು ನಿರ್ಧರಿಸಿದ್ದಾರೆ. 

ಸೋಲೊಂದು ಇರದಿದ್ದರೆ ಗೆಲ್ಲುವುದು ಹೇಗೆ?ಎಲಾನ್‌ ಮಸ್ಕ್‌ ಹೇಳಿದ ಬದುಕಿನ ಪಾಠಗಳು

ಜುಲೈ 1ರಿಂದ ಆರಂಭವಾಗುವ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ತಮ್ಮ ಅಧಿಕಾರವನ್ನು ಅಮೇಜಾನ್ ವೆಬ್ ಸರ್ವೀಸಸ್‌ ಸಿಇಒ ಆ್ಯಂಡಿ ಜೆಸ್ಸಿ ಅವರಿಗೆ ಹಸ್ತಾಂತರಿಸಲಿದ್ದಾರೆ.  ಹಾಗಂಥ ಜೆಫ್ ಕಂಪನಿ ವ್ಯವಹಾರಗಳಿಂದ ಸಂಪೂರ್ಣವಾಗಿ ದೂರ ಸರಿಯೋಲ್ಲ. ಬದಲಾಗಿ ಕಾರ್ಯಕಾರಿ ಅಧ್ಯಕ್ಷರಾಗಲಿದ್ದಾರೆ. ವಿಶ್ವದ ಮೌಲ್ಯಯುತ ಕಂಪನಿಗಳಲ್ಲಿ ಒಂದಾದ ಅಮೇಜಾನ್ ಮಾರುಕಟ್ಟೆ ಮೌಲ್ಯ ಇದೀಗ 1.7 ಟ್ರಿಲಿಯನ್ ಡಾಲರ್ ಇದೆ. ಕಂಪನಿ ಇಷ್ಟು ದೊಡ್ಡದಾಗಿ ಬೆಳೆದ ಸಂದರ್ಭದಲ್ಲಿ ಬೆಜ್ ಈ ನಿರ್ಧಾರಕ್ಕೆ ಏಕೆ ಬಂದರೋ ಗೊತ್ತಿಲ್ಲ. 

ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಮಾಡಿದ ಕೆಲಸ ನೋಡಿ!

ಕಂಪನಿ ಬೆಳೆಯುತ್ತಿದ್ದಂತೆ ಓರಾಕಲ್‌ನ ಲ್ಯಾರಿ ಎಲಿಸರ್ ಮತ್ತು ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್ ಸಿಇಒ ಸ್ಥಾನವನ್ನು ತ್ಯಜಿಸಿ ಕಂಪನಿಯ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ, ಜೆಫ್ ಮಾತ್ರ ಸುದೀರ್ಘ ಕಾಲದವರೆಗೆ ಕಂಪನಿಯ ಚುಕ್ಕಾಣಿ ಹಿಡಿದು, ವಿಶ್ವದ ಮೊದಲ ಸಿರಿವಂತ ಸ್ಥಾನವನ್ನೂ ಗಳಿಸಿದ್ದರು. 1994ರಲ್ಲಿ ಆನ್‌ಲೈನ್ ಬುಕ್‌ಸ್ಟೋರ್ ಸ್ಥಾಪಿಸುವ ಮೂಲಕ ಅಮೆರಿಕದಲ್ಲಿ ಅಮೇಜಾನ್ ಸ್ಥಾಪಿಸಿದ ಬೆಜ್, ಇದೀಗ ವಿಶ್ವದ ಮೂಲೆ ಮೂಲೆಗೂ ಕಂಪನಿ ವ್ಯವಹಾರ ನಡೆಸುತ್ತಿದೆ. 

ಈ ಬಗ್ಗೆ ಜೆಫ್ ಹೇಳಿದ್ದೇನು? 

ಇಈ ಬಗ್ಗೆ ಮಾತನಾಡಿರುವ ಜೆಫ್ ಅಮೆಜಾನ್ ಇಂದು ಏನಾಗಿದೆಯೊ ಅದಕ್ಕೆ ಅದರ ಆವಿಷ್ಕಾರ ಕಾರಣ.ಇದೀಗ ನಾನು ಅಮೆಜಾನ್‌ನಲ್ಲಿ ಅದರ ಸೃಜನಶೀಲತೆಯ ಉತ್ತುಂಗವನ್ನು ನೋಡುತ್ತಿದ್ದೇನೆ, ಪರಿವರ್ತನೆಗೆ ಇದು ಸೂಕ್ತ ಸಮಯ ಎಂದಿದ್ದಾರೆ.

click me!