
ನವದೆಹಲಿ[ಜೂ.26]: 2019ರ ಮೇ ಅಂತ್ಯದ ವೇಳೆಗೆ 21.71 ಲಕ್ಷ ಕೋಟಿ ರು. ಕರೆನ್ಸಿ ನೋಟುಗಳು ಚಲಾವಣೆಯಲ್ಲಿವೆ. ಇದು ಅಪನಗದೀಕರಣದ ಪೂರ್ವದಲ್ಲಿ ಚಲಾವಣೆಯಲ್ಲಿ ಇದ್ದ ಕರೆನ್ಸಿ ನೋಟುಗಳ ಮೊತ್ತಕ್ಕಿಂತಲೂ ಶೇ.22ರಷ್ಟುಅಧಿಕ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಮಂಗಳವಾರ ಲಿಖಿತ ಹೇಳಿಕೆ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2016 ನ.8ರಂದು ಅಪನದೀಕರಣ ಘೋಷಣೆಗೂ ಮುನ್ನ ಅಂದರೆ, 2016ರ ನವೆಂಬರ್ 4ರಂದು 17.74 ಲಕ್ಷ ಕೋಟಿ ರು. ಕರೆನ್ಸಿ ನೋಟುಗಳು ಚಲಾವಣೆಯಲ್ಲಿ ಇದ್ದವು. ಈ ಪ್ರಮಾಣ 21,71,385 ಕೋಟಿಗಳಿಗೆ ಏರಿಕೆಯಾಗಿದೆ. 2014ರ ಅಕ್ಟೋಬರ್ ಬಳಿಕ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ.14.51ರ ಸರಾಸರಿಯಲ್ಲಿ ಏರಿಕೆಯಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ವಾಸ್ತವವಾಗಿ 21,71,385 ಕೊಟಿ ರು. ಚಲಾವಣೆಯಲ್ಲಿ ಇದ್ದರೂ, ಡಿಜಿಟಲೀಕರಣ ಮತ್ತು ನಗದಿನ ಬಳಕೆಗೆ ಕಡಿವಾಣ ಹಾಕಿದ್ದರಿಂದ 3.40 ಲಕ್ಷ ಕೋಟಿ ರು.ನಷ್ಟುಹಣದ ಚಲಾವಣೆಯನ್ನು ತಗ್ಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.