Bengaluru: ರಾಜಧಾನಿಗೆ ಬಂದ ಜಮ್ಕೋ: ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳಿಗೆ ಸುವರ್ಣವಕಾಶ

Published : Feb 17, 2026, 09:33 AM ISTUpdated : Feb 17, 2026, 09:34 AM IST
Japanese aircraft interiors manufacturer

ಸಾರಾಂಶ

ವಿಮಾನ ಕ್ಯಾಬಿನ್‌ ಒಳಾಂಗಣ ಬಿಡಿಭಾಗ ತಯಾರಿಕಾ ಸಂಸ್ಥೆಯಾದ ಜಮ್ಕೋ, ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್‌ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.  ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳು ಮತ್ತು ಉತ್ತಮ ವೈಮಾಂತರಿಕ್ಷ ವಾತಾವರಣದಿಂದಾಗಿ ಈ ಹೂಡಿಕೆಗೆ ಸಂಸ್ಥೆ ಆಸಕ್ತಿ ತೋರಿದೆ. 

-ಬೆಂಗಳೂರಲ್ಲಿ ಪ್ರಾಡಕ್ಟ್‌ ಎಂಜಿನಿಯರಿಂಗ್‌ಕೇಂದ್ರ ಸ್ಥಾಪನೆಗೆ ಜಮ್ಕೋ ಸಂಸ್ಥೆ ಆಸಕ್ತಿ

-ವಿಮಾನ ಕ್ಯಾಬಿನ್‌ ಬಿಡಿಭಾಗ ತಯಾರಿಕಾ ಸಂಸ್ಥೆ ಜಮ್ಕೋ

ಬೆಂಗಳೂರು: ವಿಮಾನ ಕ್ಯಾಬಿನ್‌ ಒಳಾಂಗಣ ಬಿಡಿಭಾಗ ತಯಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಜಮ್ಕೋ ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್‌ ಕೇಂದ್ರ ಸ್ಥಾಪಿಸಲು ಮುಂದಾಗಿದೆ.

ಬೆಂಗಳೂರಿಗೆ ಜಾಗತಿಕ ಹೂಡಿಕೆ

ಈ ಕುರಿತು ಮಾಹಿತಿ ನೀಡಿರುವ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ, ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇರುವ ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳು ಮತ್ತು ವೈಮಾಂತರಿಕ್ಷ ವಲಯಕ್ಕಿರುವ ಉತ್ತಮ ವಾತಾವರಣದಿಂದಾಗಿ ಬೆಂಗಳೂರಿಗೆ ಜಾಗತಿಕ ಹೂಡಿಕೆ ಹೆಚ್ಚಾಗಿ ಬರುತ್ತಿದೆ. ಅದರ ಭಾಗವಾಗಿ ಜಮ್ಕೋ ಸಂಸ್ಥೆ ತನ್ನ ಹೂಡಿಕೆ ಕುರಿತು ಪ್ರಕಟಿಸಿದೆ. 

ಇದನ್ನೂ ಓದಿ: ಅಯ್ಯೋ, ಇದಕ್ಕೆಲ್ಲ ಇಷ್ಟು ಹಣ ಖರ್ಚು ಮಾಡ್ತಿದ್ದೀರಾ? ಇಂದೇ ಅಲರ್ಟ್ ಆಗಿ ಜೇಬು ತುಂಬಾ ಹಣ ಮಾಡ್ಕೊಳ್ಳಿ

ಈ ಹೂಡಿಕೆಯಿಂದ ರಾಜ್ಯದಲ್ಲಿ ವೈಮಾಂತರಿಕ್ಷ ಉತ್ಪನ್ನ ತಯಾರಿಸುವ ಸಾಮರ್ಥ್ಯ ವೃದ್ಧಿಯಾಗಲಿದೆ. ಅಲ್ಲದೆ ಜಮ್ಕೋ ನೆರವಿನಿಂದ ವಿಮಾನಗಳಲ್ಲಿ ಹೊಸ ತಲೆಮಾರಿನ ಕ್ಯಾಬಿನ್‌ ರೂಪಿಸಲು ಸಹಕಾರಿ ಎಂದು ತಿಳಿಸಿದ್ದಾರೆ.

ಜಮ್ಕೋ ಸಿಒಒ ಸಂಜೀವ್‌ ಸೆನ್‌ ಮತ್ತು ನಿರ್ದೇಶಕ ಮಮಡಳಿ ಅಧ್ಯಕ್ಷೆ ಕೇಟ್‌ ಷೆಫರ್‌ ನೇತೃತ್ವದ ತಂಡ ಸೋಮವಾರ ಗುಂಜನ್‌ ಕೃಷ್ಣ ಅವರನ್ನು ಭೇಟಿಯಾಗಿ ಹೂಡಿಕೆ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ: ಅಮೆರಿಕದ ದೈತ್ಯ ಆ್ಯಂಥ್ರೋಪಿಕ್‌ಗೆ ಬೆಳಗಾವಿ ಸಂಸ್ಥೆಯ ಸವಾಲು; ಸಮನ್ಸ್‌ ನೀಡಿದ ನ್ಯಾಯಾಲಾಯ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅಮೆರಿಕದ ದೈತ್ಯ ಆ್ಯಂಥ್ರೋಪಿಕ್‌ಗೆ ಬೆಳಗಾವಿ ಸಂಸ್ಥೆಯ ಸವಾಲು; ಸಮನ್ಸ್‌ ನೀಡಿದ ನ್ಯಾಯಾಲಾಯ
ಅಯ್ಯೋ, ಇದಕ್ಕೆಲ್ಲ ಇಷ್ಟು ಹಣ ಖರ್ಚು ಮಾಡ್ತಿದ್ದೀರಾ? ಇಂದೇ ಅಲರ್ಟ್ ಆಗಿ ಜೇಬು ತುಂಬಾ ಹಣ ಮಾಡ್ಕೊಳ್ಳಿ