ತಮ್ಮದೇ ಡೀಪ್‌ಫೇಕ್‌ ವಿಡಿಯೋ ಶೇರ್‌ ಮಾಡಿದ ನಿತಿನ್‌ ಕಾಮತ್‌, 'ಇದು ನಾನಲ್ಲ' ಎಂದ ಜೀರೋಧಾ ಸಂಸ್ಥಾಪಕ!

By Santosh Naik  |  First Published Dec 13, 2023, 9:47 PM IST

ಸ್ವತಃ ನಿತಿನ್‌ ಕಾಮತ್‌ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಇದರಲ್ಲಿರುವ ವ್ಯಕ್ತಿ ನಾನಲ್ಲ, ನನ್ನ ಡೀಪ್‌ಫೇಕ್‌ ವಿಡಿಯೋ ಇದಾಗಿದೆ ಎಂದು ಹೇಳಿದ್ದಾರೆ.
 


ನವದೆಹಲಿ (ಡಿ.13): ನಟಿ ರಶ್ಮಿಕಾ ಮಂದಣ್ಣ, ಕಾಜೋಲ್‌ ಬಳಿಕ ಬೆಂಗಳೂರಿನ ಪ್ರಮುಖ ಸ್ಟಾರ್ಟ್‌ಅಪ್‌ ಕಂಪನಿ ಜೀರೋಧಾದ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ನಿತಿನ್‌ ಕಾಮತ್‌ ಕೂಡ ಡೀಪ್‌ಫೇಕ್‌ ಆತಂಕದ ಬಗ್ಗೆ ಮಾತನಾಡಿದೆ. ಕೃತಕ ಬುದ್ಧಿಮತ್ತೆಯೊಂದಿಗೆ ಅಪಾಯ ತಂದಿರುವ ಡೀಪ್‌ಫೇಕ್‌ ತಂತ್ರಜ್ಞಾನ ಫೈನಾನ್ಶಿಯನ್‌ ಸರ್ವೀಸಸ್‌ ಕ್ಷೇತ್ರಕ್ಕೂ ಕಾಲಿಟ್ಟಿದೆ ಎಂದು ಅವರು ಹೇಳಿದ್ದು ಈ ಕುರಿತಾದ ವಿಡಿಯೋವನ್ನು ಎಕ್ಸ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ, ಅವರು ಪೋಸ್ಟ್‌ ಮಾಡಿರುವ ವಿಡಿಯೋದ ಅಂತ್ಯದಲ್ಲಿ ಪ್ರಮುಖ ಟ್ವಿಸ್ಟ್‌ ಇದೆ. ಕ್ಲಿಪ್‌ನ ಕೊನೆಯಲ್ಲಿಸ್ವತಃ ನಿತಿನ್‌ ಕಾಮತ್‌, ಇಲ್ಲಿಯವರೆಗೂ ಈ ವಿಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ಎಐ ಅವತಾರದ ಡೀಪ್‌ಫೇಕ್‌ ಇದಾಗಿದೆ ಎಂದು ಹೇಳಿದ್ದಾರೆ. ಅಂದಾಜು ಒಂದು ನಿಮಿಷದ ವಿಡಿಯೋ ಕ್ಲಿಪ್‌ ಇದಾಗಿದ್ದು, ಹೆಚ್ಚುತ್ತಿರುವ ಡಿಜಿಟಲೀಕರಣದ ನಡುವೆ ಗ್ರಾಹಕರ ಗುರುತನ್ನು ಪರಿಶೀಲಿಸುವಲ್ಲಿನ ತೊಂದರೆಯನ್ನು ನಿತಿನ್‌ ಕಾಮತ್‌ ಇಲ್ಲಿ ಮಾತನಾಡಿದ್ದಾರೆ. ಡೀಪ್‌ಫೇಕ್‌ಗಳ ಬೆಳೆಯುತ್ತಿರುವ ಅತ್ಯಾಧುನಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಖಾತೆ ತೆರೆಯುವ ಸಮಯದಲ್ಲಿ ನೈಜ ವ್ಯಕ್ತಿಗಳು ಮತ್ತು ಎಐ ರಚಿತವಾದ ಪ್ರತಿಕೃತಿಗಳನ್ನು ಪ್ರತ್ಯೇಕಿಸುವಲ್ಲಿ ಸವಾಲುಗಳನ್ನು ಎದುರಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಇದೇ ವಿಚಾರದ ಬಗ್ಗೆ ಮಾತನಾಡುತ್ತಾ ಹೋಗುವ ನಿತಿನ್ ಕಾಮತ್‌, ವಿಡಿಯೋದ ಕೊನೆಯ ಹಂತದಲ್ಲಿ ಬಂದಾಗ ಕೊನೆಯ ಲೈನ್‌ನಲ್ಲಿ, 'ಹಾಗೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿ ನಾನಲ್ಲ. ಇದು ನನ್ನ ಡೀಪ್‌ಫೇಕ್‌ ಎಐ ಅವತಾರ' ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಅದು ಸ್ವತಃ ನಿತಿನ್‌ ಕಾಮತ್‌ ಮಾತನಾಡಿದ್ದ ರೀತಿಯಲ್ಲೇ ಕಂಡಿದ್ದು ಕೊನೆಯಲ್ಲಿ ಅವರು ಹೇಳಿದಾಗಲಷ್ಟೇ ಅದು ಡೀಪ್‌ಫೇಕ್‌ ವಿಡಿಯೋ ಎನ್ನುವುದು ಅಂದಾಜಾಗುತ್ತದೆ. ಅಲ್ಲಿಯವರೆಗೂ ಅಲ್ಲಿರುವ ವ್ಯಕ್ತಿ ಫೇಕ್‌ ಎನ್ನುವ ಸಣ್ಣ ಅನುಮಾನ ಕೂಡ ಬರೋದಿಲ್ಲ.

The rise of AI technology and deepfakes pose a large risk to the financial services industry.

The tipping point for Indian financial services businesses was when onboarding became completely digital, thanks to Aadhaar, etc. For businesses onboarding a new customer, an important… pic.twitter.com/DI9Z1Q3jxY

— Nithin Kamath (@Nithin0dha)

Latest Videos

undefined


“ಆದರೆ ಡೀಪ್‌ಫೇಕ್‌ಗಳು ಸುಧಾರಿಸಿದಂತೆ, ಇನ್ನೊಂದು ಬದಿಯಲ್ಲಿರುವ ವ್ಯಕ್ತಿಯು ನೈಜ ಅಥವಾ ಎಐ ವ್ಯಕ್ತಿಯೇ ಎನ್ನುವುದನ್ನು ಮೌಲ್ಯೀಕರಿಸಲು ಕಾಲಾನಂತರದಲ್ಲಿ ಕಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆನ್‌ಬೋರ್ಡಿಂಗ್ ಸಮಯದಲ್ಲಿ ಹೆಚ್ಚು ಕಟ್ಟುನಿಟ್ಟಾದ ನಿಯಂತ್ರಕ ಅವಶ್ಯಕತೆಗಳನ್ನು ಹೊಂದಿರುವ ಬ್ಯಾಂಕ್‌ಗಳಿಗೆ ಈ ಸಮಸ್ಯೆ ದೊಡ್ಡದಾಗಿರುತ್ತದೆ, ”ಎಂದು ಕಾಮತ್ ಕ್ಲಿಪ್‌ನಲ್ಲಿ ಹೇಳಿದ್ದಾರೆ.  ಕಾಮತ್ ಅವರು ಈ ಸಮಸ್ಯೆಯ ಸುತ್ತಲಿನ ಭವಿಷ್ಯದ ನಿಯಂತ್ರಕ ಬೆಳವಣಿಗೆಗಳ ಬಗ್ಗೆ ಊಹಿಸಿದರು, ಉದ್ಯಮವು ಎದುರಿಸುತ್ತಿರುವ ಸಂಭಾವ್ಯ ಸಂದಿಗ್ಧತೆಯನ್ನು ಒತ್ತಿಹೇಳಿದರು. ಖಾತೆಗಳನ್ನು ತೆರೆಯುವ ಸಾಂಪ್ರದಾಯಿಕ, ಭೌತಿಕ ವಿಧಾನಗಳಿಗೆ ಹಿಂತಿರುಗುವುದು, ಇಡೀ ವಲಯದ ಬೆಳವಣಿಗೆಯನ್ನು ನಿಲ್ಲಿಸಬಹುದು ಎಂದು ಅವರು ಗಮನಿಸಿದರು.

"ಇದರ ಸುತ್ತಲಿನ ನಿಯಮಗಳು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಖಾತೆಗಳನ್ನು ತೆರೆಯುವ ಭೌತಿಕ ವಿಧಾನಕ್ಕೆ ಹಿಂತಿರುಗುವುದು ಇಡೀ ವಲಯದ ಬೆಳವಣಿಗೆಯನ್ನು ಹಠಾತ್ ನಿಲುಗಡೆಗೆ ತರುತ್ತದೆ ಎಂದು ಅವರು ಹೇಳಿದ್ದಾರೆ. 

ಡೀಫ್ ಪೇಕ್‌ ಟು ಸುಹಾಗ್ ರಾತ್ ಪಾನ್‌ವರೆಗೆ: ವರ್ಷಾಂತ್ಯದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಸುದ್ದಿಗಳ ಹಿನ್ನೋಟ

ಇಷ್ಟೆಲ್ಲಾ ಹೇಳುವ  ನಿತಿನ್‌ ಕಾಮತ್‌ ಕೊನೆಯ ಲೈನ್‌ ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗಿದೆ. 'ನೀವು ಹೇಳಿರುವ ಕೊನೇ ಲೈನ್‌ ಕಿಲ್ಲಿಂಗ್‌ ನೋಟ್‌ನಂತ್ತಿತ್ತು' ಎಂದು ಕಾಮೆಂಟ್‌ ಮಾಡಲಾಗಿದೆ. ನನಗೆ ಇದು ನೀವಲ್ಲ ಎನ್ನುವುದು ಗೊತ್ತಾಯಿತು. ಲಿಪ್‌ ಸಿಂಗ್,‌ ಎಕ್ಸ್‌ಪ್ರೆಶನ್‌ಗಳು, ಕಣ್ಣು ಕೊನೆಗೆ ನಗು ಇದ್ಯಾವುದು ಈ ವಿಡಿಯೋದಲ್ಲಿ ಇದ್ದಿರಲಿಲ್ಲ. (ನಿಮ್ಮ ಹಾಗೂ ನಿಮ್ಮ ಪತ್ನಿಯ ಸಂದರ್ಶನವನ್ನು ಹಿಂದಿನ ರಾತ್ರಿ ನೋಡಿದ್ದೆ) ಎಂದು ಒನ್ನೊಬ್ಬರು ಬರೆದಿದ್ದಾರೆ.

'ಅನಿಮಲ್'ನಲ್ಲಿ ರಶ್ಮಿಕಾ ನೋಡಿ ಡೀಪ್​ಫೇಕ್​ನವ್ರು ಬೆಚ್ಚಿ ಬಿದ್ರಂತೆ! ಕ್ಷಮಿಸಿ ಎಂದ ಅಮಿತಾಭ್- ಕಾಲೆಳೆದ ಫ್ಯಾನ್ಸ್​!

"ಇದು ತುಂಬಾ ಡೀಪ್‌ಫೇಕ್ ಎಂದು ತೋರುತ್ತದೆ, ಇಲ್ಲದಿದ್ದರೆ ನೀವು ಸ್ಮೈಲಿ ವ್ಯಕ್ತಿ ಮತ್ತು ವೀಡಿಯೊದಾದ್ಯಂತ ಅದು ಇರಲಿಲ್ಲ" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಕಾಮತ್ ಹಲವಾರು ಬಾರಿ ಡೀಪ್‌ಫೇಕ್‌ಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಮತ್ತು ಅವುಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಪರಿಣಾಮಗಳು ಗಂಭೀರವಾಗಬಹುದು.

click me!