ಜೀವನ ಪರ್ಯಂತ ಬಡವನಂತೆ ಜೀವಿಸಿದವನ ಬಳಿ ಇತ್ತು 108 ಕೋಟಿ ಆಸ್ತಿ!

By Suvarna NewsFirst Published Dec 13, 2023, 2:56 PM IST
Highlights

ಶ್ರೀಮಂತರು ಶ್ರೀಮಂತಿಕೆ ತೋರಿಸಬೇಕೆಂದೇನಿಲ್ಲ. ಕೆಲ ಕೋಟ್ಯಾಧಿಪತಿಗಳು ಅತ್ಯಂತ ಸರಳ ಜೀವನ ನಡೆಸ್ತಾರೆ. ತಮ್ಮಲ್ಲಿರುವ ಹಣವನ್ನು ಕೊನೆಯವರಿಗೆ ಬಳಸದೆ ಅದನ್ನು ಒಳ್ಳೆಯ ಕೆಲಸಕ್ಕೆ ದಾನ ಮಾಡಿ ಹೋಗ್ತಾರೆ. ಅದ್ರಲ್ಲಿ ಈತ ಕೂಡ ಒಬ್ಬ. 
 

ಹಣ ಸಂಪಾದನೆ ಮಾಡ್ಬೇಕು, ಇಡೀ ಜೀವನ ಐಷಾರಾಮಿಯಾಗಿ ಬದುಕಬೇಕು ಎನ್ನುವುದೇ ಬಹುತೇಕರ ಕನಸು. ಇದೇ ಕಾರಣಕ್ಕೆ ಕಷ್ಟಪಟ್ಟು ಹಣ ಸಂಪಾದನೆ ಮಾಡಿ, ತಮ್ಮಿಷ್ಟದಂತೆ ಅದನ್ನು ಖರ್ಚು ಮಾಡ್ತಾರೆ. ದೊಡ್ಡ ಮನೆ, ಒಂದಿಷ್ಟು ಐಷಾರಾಮಿ ವಾಹನ, ದುಬಾರಿ ಬೆಲೆಯ ಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ನಮ್ಮಲ್ಲಿ ಕೆಲವರು ಹಣವಿದ್ರೂ ಸಾಮಾನ್ಯರಂತೆ ಜೀವನ ನಡೆಸ್ತಾರೆ. ಕೆಲ ದಿನಗಳ ಹಿಂದೆ ಭಿಕ್ಷುಕನೊಬ್ಬನ ಸುದ್ದಿ ವೈರಲ್ ಆಗಿತ್ತು. ಒಂದು ಲಕ್ಷಕ್ಕಿಂತ ಹೆಚ್ಚು ಹಣ ಆತನ ಬಳಿ ಇದ್ರೂ ಆತನಿಗೆ ಅದು ತಿಳಿದಿರಲಿಲ್ಲ. ಈಗ ಮತ್ತೊಬ್ಬ ವ್ಯಕ್ತಿ ಸುದ್ದಿಯಲ್ಲಿದ್ದಾನೆ. ಈತ ಸಾಮಾನ್ಯನಲ್ಲ. ಕೋಟಿಗಟ್ಟಲೆ ಹಣ ಈತನ ಬಳಿ ಇತ್ತು.

ಲಕ್ಷ ಗಳಿಸೋದೆ ಕಷ್ಟ, ಇನ್ನು ಕೋಟ್ಯಾಂತರ ರೂಪಾಯಿ ನಮ್ಮ ಕೈಗೆ ಸಿಕ್ಕಿದ್ರೆ ಬಿಡ್ತಿವಾ? ಆದ್ರೆ ಈ ವ್ಯಕ್ತಿ ನಮ್ಮೆಲ್ಲರಿಗಿಂತ ಭಿನ್ನವಾಗಿ ನಿಲ್ತಾನೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ (life) ನಡೆಸಿದ ವ್ಯಕ್ತಿ 108 ಕೋಟಿ ರೂಪಾಯಿ ಬಿಟ್ಟು ಹೋಗಿದ್ದಾನೆ. ಈಗ ಆತನ ಹಣ, ಸಂಘ, ಸಂಸ್ಥೆಗಳಿಗೆ ಸೇರ್ತಿದೆ. 

Latest Videos

ಲಂಡನ್‌ನಲ್ಲಿ ಜಗತ್ತಿನ 2ನೇ ಅತಿ ದುಬಾರಿ ಮನೆ ಖರೀದಿಸಿದ ಪುಣೆಯ ಸೀರಂ ಸಂಸ್ಥೆಯ ಸಿಇಒ ಅದಾರ್‌ ಪೂನಾವಾಲ!

108 ಕೋಟಿ ಆಸ್ತಿ ಇದ್ರೂ ವೃದ್ಧಾಶ್ರಮ (Oldagehome)ದಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ : ನಿಮಗೆ ಅಚ್ಚರಿ ಆದ್ರೂ ಇದು ಸತ್ಯ. ಆತನ ಹೆಸರು ಟೆರ್ರಿ ಕಾನ್. ಅಮೆರಿಕದ ಇಂಡಿಯಾನಾಪೊಲಿಸ್‌ ನಿವಾಸಿ. ಕಳೆದ 30 ವರ್ಷಗಳಿಂದ ವೃದ್ಧರಿಗಾಗಿ ಕೆಲಸ ಮಾಡುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ದರು. 

ಫೋನ್ ಇರಲಿಲ್ಲ, ಸಾಮಾನ್ಯ ಮನೆಯಲ್ಲಿ ವಾಸ : ಟೆರ್ರಿ ಬಳಿ ಒಂದು ಫೋನ್ ಕೂಡ ಇರಲಿಲ್ಲ. ಫೋನ್ ಖರೀದಿ ದುಬಾರಿ ಎಂದು ಟೆರ್ರಿ ಭಾವಿಸಿದ್ದ. ಅಷ್ಟೇ ಅಲ್ಲ ಹಳೆಯ ಹೋಂಡಾ ಕಾರ್ ನಲ್ಲಿ ಸಂಚಾರ ಮಾಡ್ತಿದ್ದ. ಆತನ ಮನೆ ಕೂಡ ಸಾಧಾರಣವಾಗಿತ್ತು. ಸಾವಿನ ನಂತ್ರ ಅಂತ್ಯಸಂಸ್ಕಾರ ಸೇರಿದಂತೆ ಯಾವುದೇ ಕೆಲಸಕ್ಕೆ ಹೆಚ್ಚು ಖರ್ಚಾಗಬಾರದು ಎಂದು ಟೆರ್ರಿ ಹೇಳಿದ್ದನಂತೆ.

ಟೆರ್ರಿ ಕುಟುಂಬದಲ್ಲಿ ಯಾರಿದ್ರು? : ಟೆರ್ರಿಯ ಪೋಷಕರು ನಾಜಿ ಜರ್ಮನಿಯಿಂದ ಅಮೆರಿಕಕ್ಕೆ ಬಂದವರಾಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಟೆರ್ರಿ ಹಾಗೂ ಇನ್ನೊಬ್ಬಳು ಮಗಳು. ಟೆರ್ರಿ ಮದುವೆ ಆಗಿರಲಿಲ್ಲ. ಟೆರ್ರಿ ಸಹೋದರಿಗೆ ಇಬ್ಬರು ಮಕ್ಕಳು. ಆಕೆ ತನ್ನ ನಲವತ್ತನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಳು. ಆದ್ರೆ ಟೆರ್ರಿ ಸಹೋದರಿ ಮಕ್ಕಳ ಜೊತೆ ಯಾವುದೇ ಸಂಪರ್ಕಹೊಂದಿರಲಿಲ್ಲ.

ಟೆರ್ರಿ ಸಾಯುವ ಮುನ್ನ ಏನು ಹೇಳಿದ್ದ? : ಟೆರ್ರಿ ತನ್ನ ಆಸ್ತಿ ತನ್ನ ನಂತ್ರ ಟ್ರಸ್ಟ್ ಗೆ ಹೋಗ್ಬೇಕೆಂದು ಬರೆದಿದ್ದ. 13 ಮಿಲಿಯನ್ ಡಾಲರ್  ಅಂದ್ರೆ ಸುಮಾರು 108 ಕೋಟಿ ರೂಪಾಯಿಯನ್ನು ದಾನ ಮಾಡಬೇಕೆಂದು ಟೆರ್ರಿ ಹೇಳಿದ್ದ. ಟೆರ್ರಿ ಯಾವ ಸಂಸ್ಥೆಗೆ ಹಣವನ್ನು ದಾನ ಮಾಡ್ಬೇಕೆಂದು ಬರೆದಿರಲಿಲ್ಲ. ಹಾಗಾಗಿ ವಕೀಲ ಡ್ವೇನ್ ಇದ್ರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರು ಅನೇಕ ಸಂಸ್ಥೆಗಳಿಗೆ ಕರೆ ಮಾಡಿದ್ದಾರೆ. ಕೆಲ ಸಂಸ್ಥೆಗಳು ಡ್ವೇನ್ ದಾನದ ವಿಷ್ಯ ಕೇಳಿಯೇ ಫೋನ್ ಕಟ್ ಮಾಡಿದ್ದಾರೆ. ಇಷ್ಟೊಂದು ಹಣವನ್ನು ಯಾರು ದಾನ ಮಾಡ್ತಾರೆ, ಇದೊಂದು ಮೋಸ ಎಂಬ ಭಾವನೆ ಅವರದ್ದು. ಮತ್ತೆ ಕೆಲವರು ಫೋನ್ ಗೆ ಸ್ಪಂದಿಸಿದ್ದು ಅವರಿಗೆ ಈಗಾಗಲೇ ಡ್ವೇನ್ ಕೋಟ್ಯಾಂತರ ಹಣವನ್ನು ದಾನ ಮಾಡಿದ್ದಾರೆ.  

ಖಾತೆ ಒಂದು ಲಾಭ ಹಲವು;ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಉಳಿತಾಯ ಖಾತೆ ಪರಿಚಯಿಸಿದ ಬ್ಯಾಂಕ್ ಆಫ್ ಇಂಡಿಯಾ

 ವೃದ್ಧಾಶ್ರಮ ನಡೆಸುತ್ತಿರುವ ಆಮಿ ಹಿಲ್ಡೆಬ್ರಾಂಡ್ ಗೆ 1 ಮಿಲಿಯನ್ ಡಾಲರ್ ದೇಣಿ ಸಿಕ್ಕಿದೆ. ಫೋನ್ ನಲ್ಲಿ ಈ ದೇಣಿಗೆ ಹಣ ಕೇಳಿ ನಾನು ದಂಗಾಗಿದ್ದೆ ಎಂದು ಅವರು ಹೇಳಿದ್ದಾರೆ.  ಡ್ವೇನ್ ಅನೇಕ ಶಿಕ್ಷಣ ಸಂಸ್ಥೆಗಳಿಗೂ ಟೆರ್ರಿ ಹಣವನ್ನು ದಾನ ಮಾಡಿದ್ದಾರೆ.

click me!