ಇಸ್ರೋ PSLV ರಾಕೆಟ್‌ ಉತ್ಪಾದನೆ ಈಗ ಖಾಸಗೀಕರಣ!

Published : Aug 18, 2019, 12:41 PM IST
ಇಸ್ರೋ PSLV ರಾಕೆಟ್‌ ಉತ್ಪಾದನೆ ಈಗ ಖಾಸಗೀಕರಣ!

ಸಾರಾಂಶ

ಇಸ್ರೋ ಪಿಎಸ್‌ಎಲ್‌ವಿ ರಾಕೆಟ್‌ ಉತ್ಪಾದನೆ ಈಗ ಖಾಸಗೀಕರಣ| 5 ರಾಕೆಟ್‌ಗಾಗಿ ಖಾಸಗಿ ಕಂಪನಿಗಳಿಗೆ ಇಸ್ರೋ ಆಹ್ವಾನ| ತಂತ್ರಜ್ಞಾನ ವರ್ಗಾವಣೆ 1000 ಕೋಟಿ ರು. ಡೀಲ್‌

ನವದೆಹಲಿ[ಆ.18]: ಆ.15ಕ್ಕೆ 50 ವಸಂತಗಳನ್ನು ಪೂರೈಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಯಶಸ್ವಿ ಪಿಎಸ್‌ಎಲ್‌ವಿ ರಾಕೆಟ್‌ ಉತ್ಪಾದನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈಗಾಗಲೇ 5 ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ಉತ್ಪಾದಿಸಿಕೊಡುವಂತೆ ಖಾಸಗಿ ಕಂಪನಿಗಳಿಗೆ ಆಹ್ವಾನವಿತ್ತಿದೆ.

ಸ್ವತಃ ಇಸ್ರೋ ಅಧ್ಯಕ್ಷ ಕೆ. ಶಿವನ್‌ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ದೇಶೀಯ ಖಾಸಗಿ ಕಂಪನಿಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿಯನ್ನು ಕರೆದಿದ್ದೇವೆ. ಆದರೆ ವಿದೇಶಿ ಕಂಪನಿಗಳಿಗೆ ಅವಕಾಶವಿಲ್ಲ. ಈ ಬಗ್ಗೆ ಇಸ್ರೋದಲ್ಲಿ ಬಹಳ ಹಿಂದಿನಿಂದ ಪರಿಶೀಲನೆ ನಡೆಯುತ್ತಿತ್ತು. ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಪ್ರಯತ್ನಕ್ಕೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದ್ದಾರೆ.

ಆಯ್ಕೆಯಾಗುವ ಖಾಸಗಿ ಕಂಪನಿಗಳಿಗೆ ಪಿಎಸ್‌ಎಲ್‌ವಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಇಸ್ರೋ ವರ್ಗಾಯಿಸಿಕೊಡಲಿದೆ. ಪ್ರತಿ ರಾಕೆಟ್‌ಗೆ 200 ಕೋಟಿ ರು. ಖರ್ಚಾಗುತ್ತದೆ. ಅದರಂತೆ 5 ರಾಕೆಟ್‌ಗೆ 1000 ಕೋಟಿ ರು. ವೆಚ್ಚವಾಗುತ್ತದೆ. ಹೀಗಾಗಿ 1 ಸಾವಿರ ಕೋಟಿ ರು. ಡೀಲ್‌ ಇದಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಶಿವನ್‌ ಅವರು ಖರ್ಚು- ವೆಚ್ಚದ ಮಾಹಿತಿಯನ್ನು ನೀಡಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ನೀವು IMPS ಹಣ ವರ್ಗಾವಣೆ, ಎಟಿಎಂನಿಂದ ವಿಥ್‌ಡ್ರಾ ಮಾಡ್ತೀರಾ? ಫೆ.15ರಿಂದ SBI ಹೊಸ ನಿಯಮ
ಆಧ್ಯಾತ್ಮಿಕ ಗುರು ಎಂದು Condom ಫ್ಯಾಕ್ಟರಿ ನಡೆಸ್ತಿರುವ Bigg Boss ಸ್ಪರ್ಧಿ; ಪ್ರೈವೆಟ್‌ ಜೆಟ್‌ನಲ್ಲಿ ಪ್ರಯಾಣ!