ಹಾಲಿನ ದರ ಒಂದೇ ಬಾರಿಗೆ ಲೀ.ಗೆ 6 ರು.ನಷ್ಟು ಏರಿಕೆ!

By Web DeskFirst Published Aug 18, 2019, 10:26 AM IST
Highlights

ತಮಿಳ್ನಾಡಲ್ಲಿ ಹಾಲಿನ ದರ ಒಮ್ಮೆಗೆ ಲೀ.ಗೆ 6 ರು.ನಷ್ಟು ಏರಿಕೆ|  ಹಾಲು ಉತ್ಪಾದಕರಿಗೆ ಬಂಪರ್‌ ಕೊಡುಗೆ ಕೊಟ್ಟ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರ

ಚೆನ್ನೈ[ಆ.18]: ಪ್ರತೀ ಲೀ. ಹಾಲಿನ ದರವನ್ನು ಒಂದೇ ಸಲ 6 ರು. ಏರಿಕೆ ಮಾಡುವ ಮೂಲಕ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರ ಹಾಲು ಉತ್ಪಾದಕರಿಗೆ ಬಂಪರ್‌ ಕೊಡುಗೆ ನೀಡಿದೆ.

1 ಕಿಲೋ ಟೀ ಪುಡಿಯ ಬೆಲೆ ಭರ್ಜರಿ 75,000!

ಈ ಮೂಲಕ ಹಾಲಿನ ದರ ಏರಿಕೆ ಮಾಡಬೇಕೆಂಬ ಹಾಲು ಉತ್ಪಾದಕರ ಕೋರಿಕೆಯನ್ನು ಸರ್ಕಾರ ಈಡೇರಿಸಿದೆ. ಆದರೆ ಸರ್ಕಾರದ ಈ ಕ್ರಮವು ದಿನ ನಿತ್ಯ ಹಾಲು ಖರೀದಿದಾರರ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದನದ ಹಾಲಿನ ದರ ಲೀ. ಹಾಲು 28 ರು.ನಿಂದ 32 ರು.ಗೆ ಏರಿಕೆಯಾದರೆ, ಎಮ್ಮೆ ಹಾಲಿನ ದರ ಲೀ. ದರ 35 ರು.ನಿಂದ 41 ರು.ಗೆ ಜಿಗಿದಿದೆ.

4.60 ಲಕ್ಷ ಹಾಲು ಉತ್ಪಾದಕರು ಇದರ ಪ್ರಯೋಜನ ಪಡೆಯಲಿದ್ದಾರೆ.

click me!