ಇ-ರುಪೀ ಬಳಕೆಗೆ ಇಂಟರ್ ನೆಟ್ ಬೇಕಾ? ಬ್ಯಾಂಕ್ ಬಡ್ಡಿ ನೀಡುತ್ತಾ? ಇಲ್ಲಿದೆ ಮಾಹಿತಿ

By Suvarna NewsFirst Published Nov 30, 2022, 6:22 PM IST
Highlights

ನಾಳೆಯಿಂದ ದೇಶದಲ್ಲಿ ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದೆ. ಇದು ಮೊಬೈಲ್ ನಲ್ಲೇ ಇರುವ ಫೋನ್ ಪೇ, ಗೂಗಲ್ ಪೇ ಮುಂತಾದ ವ್ಯಾಲೆಟ್ ಮಾದರಿಯಲ್ಲೇ ಇರಲಿದೆ. ಕ್ಯುಆರ್ ಕೋಡ್ ಮೂಲಕ ಇದನ್ನು ಬಳಸಬಹುದು. ಹಾಗಾದ್ರೆ ಇದರ ಬಳಕೆಗೆ ಇಂಟರ್ ನೆಟ್ ಬೇಕಾ? 

Business Desk:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ನಾಳೆಯಿಂದ (ಡಿ. 1ರಿಂದ) ಡಿಜಿಟಲ್ ರೂಪಾಯಿ ಅನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿದೆ.  ಡಿಜಿಟಲ್ ರೂಪಾಯಿ ಮೊಬೈಲ್ ನಲ್ಲೇ ಇರುವ ವ್ಯಾಲೆಟ್ ಆಗಿದೆ. ಇದನ್ನು ಕ್ಯುಆರ್ ಕೋಡ್ ಮೂಲಕ ಬಳಸಬಹುದು. ಈಗಾಗಲೇ ನೀಡಿರುವ ಮಾಹಿತಿ ಪ್ರಕಾರ ಎಂಟು ಬ್ಯಾಂಕ್ ಗಳಲ್ಲಿ ಇ-ರುಪೀ ಪ್ರಾಯೋಗಿಕ ಪ್ರಾರಂಭ ಮಾಡಲಾಗಿದೆ. ಇದರ ಬಳಕೆಯನ್ನು ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತದೆ. ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಲು ಸಾಧ್ಯವಾಗುವಂತೆ ಡಿಜಿಟಲ್ ವ್ಯಾಲೆಟ್ ಅನ್ನು ಬ್ಯಾಂಕ್ ಗಳೇ ರಚಿಸುತ್ತವೆ ಕೂಡ. ಮೊದಲ ಹಂತದಲ್ಲಿ ಪ್ರಮುಖವಾಗಿ ನಾಲ್ಕು ನಗರಗಳಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಪ್ರಯೋಗಿಕವಾಗಿ ಪ್ರಾರಂಭವಾಗಲಿದೆ. ನವದೆಹಲಿ, ಬೆಂಗಳೂರು, ಮುಂಬೈ ಮತ್ತು ಭುವನೇಶ್ವರದಲ್ಲಿ ಪ್ರಾರಂಭಿಸಲಾಗುತ್ತದೆ. ಆ ಬಳಿಕ ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಟನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾರಂಭಿಸಲಾಗುತ್ತದೆ. ಇನ್ನು ಈ ಹೊಸ ವ್ಯವಸ್ಥೆ ಬಗ್ಗೆ ಅನೇಕರ ಮನದಲ್ಲಿ ಸಾಕಷ್ಟು ಗೊಂದಲ, ಪ್ರಶ್ನೆಗಳು ಮೂಡಿವೆ. ಅದರಲ್ಲಿ ಬ್ಯಾಂಕ್ ಖಾತೆಯಲ್ಲಿ ನಾವು ಇಟ್ಟಿರುವ ಮೊತ್ತಕ್ಕೆ ಬಡ್ಡಿದರ ಸಿಗುವಂತೆ  ಇ-ರುಪೀಗೂ ಬಡ್ಡಿ ಸಿಗುತ್ತದೆಯಾ? ಇದರ ಬಳಕೆಗೆ ಇಂಟರ್ ನೆಟ್ ಬೇಕಾ? ಎಂಬ ಪ್ರಶ್ನೆಗಳು ಕೂಡ ಸೇರಿವೆ. 

ಇಂಟರ್ ನೆಟ್ ಬೇಕಾ?
ಯುಪಿಐ (UPI) ವಹಿವಾಟು ನಡೆಸಲು ಇಂಟರ್ ನೆಟ್ (Internet) ಬೇಕು. ಆದರೆ, ಇತ್ತೀಚೆಗೆ ಇಂಟರ್ ನೆಟ್ (Internet) ಇಲ್ಲದೆಯೂ ಯುಪಿಐ ವಹಿವಾಟು ನಡೆಸಲು ಸಾಧ್ಯವಾಗುವಂತಹ ಫೀಚರ್ ಫೋನ್ ಗಳು ಬಂದಿವೆ. ಡಿಜಿಟಲ್ ರೂಪಾಯಿ ಅಥವಾ ಇ-ರುಪೇ ಬಳಕೆಗೆ ಕೂಡ ಯಾವುದೇ ಇಂಟರ್ ನೆಟ್ ಬೇಕಾಗಿಲ್ಲ. 

ತೆರಿಗೆ ಉಳಿತಾಯದ ಎಫ್ ಡಿ ಮೇಲೆ ಅತ್ಯಧಿಕ ಬಡ್ಡಿ ನೀಡುವ ನಾಲ್ಕು ಸರ್ಕಾರಿ ಬ್ಯಾಂಕ್ ಗಳು ಇವೇ ನೋಡಿ!

ಡಿಜಿಟಲ್ ರೂಪಾಯಿಗೆ ಬಡ್ಡಿ ವಿಧಿಸುತ್ತಾರಾ?
ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ (Interest) ನೀಡಲಾಗುತ್ತದೆ. ಇಂಥ ಸೌಲಭ್ಯ ಡಿಜಿಟಲ್ ರೂಪಾಯಿಗೂ (Digital Rupee) ಇದೆಯಾ ಎಂಬ ಅನುಮಾನ ಅನೇಕರನ್ನು ಕಾಡಬಹುದು. ಆದರೆ, ಡಿಜಿಟಲ್ ರೂಪಾಯಿಗೆ (Digital Rupee) ಯಾವುದೇ ಬಡ್ಡಿದರ ನೀಡುವುದಿಲ್ಲ. ನಮ್ಮ ಜೇಬಿನಲ್ಲಿರುವ ನಗದು ಹಣಕ್ಕೆ ಯಾವುದಾದ್ರೂ ಬಡ್ಡಿ ಸಿಗುತ್ತದೆಯಾ? ಇದು ಕೂಡ ಹಾಗೆಯೇ. ನಗದು ಹಣ ಜೇಬಿನಲ್ಲಿದ್ದರೆ ಕಳ್ಳತನದ ಭಯ ಕಾಡಬಹುದು. ಆದರೆ, ಇ-ವ್ಯಾಲೆಟ್ ನಲ್ಲಿರುವ (e-wallet) ಹಣ ಸುರಕ್ಷಿತ. ಆದ್ರೆ, ಆನ್ ಲೈನ್ ವಂಚನೆಗೊಳಗಾದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಅಷ್ಟೆ.

ಡಿಜಿಟಲ್ ರೂಪಾಯಿ ಪ್ರಯೋಜನಗಳೇನು?
*ಮೊಬೈಲ್ (Mobile) ಕೈಯಲ್ಲಿದ್ರೆ ಸಾಕು, ವ್ಯಾಲೆಟ್ (Wallet) ಮೂಲಕವೇ ವಹಿವಾಟು ನಡೆಸಬಹುದು.
*ಡಿಜಿಟಲ್ ರೂಪಾಯಿಯನ್ನು ಶೀಘ್ರವಾಗಿ ಬ್ಯಾಂಕ್ ಹಣ ಅಥವಾ ನಗದಾಗಿ ಪರಿವರ್ತಿಸಬಹುದು.
*ಹಣ ವರ್ಗಾವಣೆ ಸಮಯದಲ್ಲಿ ತಗಲುವ ವೆಚ್ಚ ಕಡಿಮೆಯಾಗುತ್ತದೆ
*ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಇ-ರುಪಿ ಬಳಸಬಹುದು.
*ಡಿಜಿಟಲ್ ಇಕಾನಮಿಗೆ ಇ-ರುಪೀ ಅಥವಾ ಡಿಜಿಟಲ್ ಕರೆನ್ಸಿ ಸಹಾಯಕ.

ಡಿಸೆಂಬರ್ ತಿಂಗಳಲ್ಲಿ ಈ ನಿಯಮಗಳಲ್ಲಿ ಬದಲಾವಣೆ; ಜೇಬಿನ ಮೇಲೆ ಹೆಚ್ಚಲಿದೆಯಾ ಹೊರೆ?

ಪರ್ಸ್ ನಲ್ಲಿ ನಗದು ಇಟ್ಟುಕೊಳ್ಳುವ ಅಗತ್ಯವಿಲ್ಲ
ಡಿಜಿಟಲ್ ರಿಟೇಲ್ ರೂಪಾಯಿ ಡಿಜಿಟಲ್ ಟೋಕನ್ (Digital token) ರೂಪದಲ್ಲಿ ಲಭ್ಯವಿದೆ. ಇದನ್ನು ಒಂದರ್ಥದಲ್ಲಿ ಕರೆನ್ಸಿ ನೋಟಿನ ಡಿಜಿಟಲ್ ರೂಪ ಎಂದೇ ಹೇಳಬಹುದು. ಆರ್ ಬಿಐ ಈ ಡಿಜಿಟಲ್ ರೂಪಾಯಿಯನ್ನು ಒದಗಿಸಲಿದೆ. ಹೀಗಾಗಿ ಪರ್ಸ್ ನಲ್ಲಿ ನಗದು (Cash) ಇಟ್ಟುಕೊಳ್ಳದೆ ಎಲ್ಲ ವಹಿವಾಟುಗಳನ್ನು (Transactions) ನಡೆಸಬಹುದು. ಯುಪಿಐ ಬಳಸುವಾಗ ಯುಪಿಐ ಐಡಿ (UPI ID) ಹಾಗೂ ಕ್ಯೂಆರ್ ಕೋಡ್ (QR code) ಹೊಂದಿರಬೇಕು. ಹಾಗೆಯೇ ನೀವು ಇ-ರುಪೀ (e-Rupee) ವಹಿವಾಟು ನಡೆಸಲು ಡಿಜಿಟಲ್ ರೂಪಾಯಿ ಕ್ಯುಆರ್ ಕೋಡ್ ಹೊಂದಿರೋದು ಅಗತ್ಯ. 
 

click me!