IPL ಫ್ಯಾನ್ಸ್‌ಗಾಗಿ Jioದಿಂದ ಅನ್‌ಲಿಮಿಟೆಡ್‌ ಪ್ಲಾನ್; JioHotstar ಮೆಂಬರ್‌ಶಿಪ್‌ ಜೊತೆ ಮತ್ತಷ್ಟು ಮಗದಷ್ಟು ಆಫರ್

ರಿಲಯನ್ಸ್ ಜಿಯೋ IPL ವೀಕ್ಷಕರಿಗಾಗಿ ಹೊಸ ಆಫರ್ ಬಿಡುಗಡೆ ಮಾಡಿದೆ. ರೀಚಾರ್ಜ್‌ನಲ್ಲಿ ಉಚಿತ ಹಾಟ್‌ಸ್ಟಾರ್ ಮೆಂಬರ್‌ಶಿಪ್ ಮತ್ತು 4Kನಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಲಭ್ಯವಿದೆ.

IPL offer from Jio Free Hotstar on Rs 299 recharge watch matches in 4K mrq

ನವದೆಹಲಿ: ಈ ವಾರ ಭಾರತದಲ್ಲಿ ಚಿನುಕುರುಳಿ ಕ್ರಿಕೆಟ್ ಪಂದ್ಯಾವಳಿಗಳು ಆರಂಭಗೊಳ್ಳಲಿವೆ. ಐಪಿಎಲ್-2025 ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಭಾರತ ಸೇರಿದಂತೆ ಇಡೀ ಜಗತ್ತು ಕಾಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವೀಕ್ಷಕರಿಗಾಗಿ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಹೊಸ ಮತ್ತು ವಿಶೇಷ ಆಫರ್ ಬಿಡುಗಡೆ ಮಾಡಿದೆ. ಈ ಯೋಜನೆ ಹಾಲಿ  ಮತ್ತು ಹೊಸ ಜಿಯೋ ಬಳಕೆದಾರರಿಗೆ ಲಾಭವಾಗಲಿದೆ. ಜಿಯೋ ನೀಡುತ್ತಿರುವ  ಹೊಸ ಆಫರ್ ಬಳಕೆದಾರರಿಗೆ ಹೆಚ್ಚುವರಿ ಬೆನೆಫಿಟ್ ಜೊತೆಯಲ್ಲಿ ಉಚಿತವಾಗಿ JioHotstar ಮೆಂಬರ್‌ಶಿಪ್ ಪಡೆಯುವ ಅವಕಾಶವನ್ನು ನೀಡಲಾಗುತ್ತಿದೆ. ಏನಿದು ಹೊಸ ಮತ್ತು ವಿಶೇಷ ಪ್ಲಾನ್ ಎಂಬುದರ ಮಾಹಿತಿ ಇಲ್ಲಿದೆ. 

ಜಿಯೋದ ಹೊಸ ಅನ್‌ಲಿಮಿಟೆಡ್ ಆಫರ್ 
ಜಿಯೋ ಬಳಕೆದಾರರು 299 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಹಾಲಿ ಅಥವಾ ಹೊಸ ಬಳಕೆದಾರರು ಇದೇ ಪ್ಲಾನ್ ಅಥವಾ ಇದಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಈ ರೀಚಾರ್ಜ್ ಮಾಡಿಕೊಂಡ ಗ್ರಾಹಕರಿಗೆ 90 ದಿನಗಳವರೆಗೆ JioHotstar ಸಬ್‌ಸ್ಕ್ರಿಪ್ಷನ್ 4Kನಲ್ಲಿ ಲಭ್ಯವಾಗುತ್ತದೆ.  ಈ ಸಬ್‌ಸ್ಕ್ರಿಪ್ಷನ್ ಪಡೆಯುವ ಮೂಲಕ ಎಲ್ಲಾ ಐಪಿಎಲ್ ಪಂದ್ಯಗಳನ್ನು ಆನಂದಿಸಬಹುದಾಗಿದೆ. 

Latest Videos

ಇದನ್ನೂ ಓದಿ:  ಐಪಿಎಲ್, ಚಾಂಪಿಯನ್ಸ್ ಟ್ರೋಫಿಗಾಗಿ ಉಚಿತ ಜಿಯೋಹಾಟ್‌ಸ್ಟಾರ್ ಪ್ಲಾನ್ ಘೋಷಿಸಿದ ಜಿಯೋ

ಐಪಿಎಲ್ ಪಂದ್ಯದ ವಿಡಿಯೋಗಳು 4K ರೆಸೆಲ್ಯೂಷನ್‌ನಲ್ಲಿ ನೋಡಬಹುದಾಗಿದೆ. 50 ದಿನಗಳವರೆಗೆ ಉಚಿತವಾಗಿ JioFiber/AirFiber ಟ್ರಾಯಲ್‌ನಲ್ಲಿ  JioFiber ಅಥವಾ JioAirFiber ಜೊತೆ ಅಲ್ಟ್ರಾ ಫಾಸ್ಟ್ ಇಂಟರ್‌ನೆಟ್ ಅನುಭವ ನಿಮ್ಮದಾಗುತ್ತದೆ.  ಈ ಆಫರ್‌ನಲ್ಲಿ  800+ ಟಿವಿ ಚಾನೆಲ್ , 11+ ಓಟಿಟಿ ಆಪ್ ಆಕ್ಸೆಸ್  ಮತ್ತು ಅನ್‌ಲಿಮಿಟೆಡ್ ವೈಫೈ ಕನೆಕ್ಟಿವಟಿ ಮತ್ತು  4K ರೆಸೆಲ್ಯೂಷನ್‌ನಲ್ಲಿ ಕ್ರಿಕೆಟ್ ವಿಡಿಯೋಗಳನ್ನು ನೋಡಬಹುದಾಗಿದೆ. 

ಇದಕ್ಕಾಗಿ ಬಳಕೆದಾರರು ಮಾರ್ಚ್ 17ರಿಂದ 31ನೇ ಮಾರ್ಚ್ ಅವಧಿಯ ನಡುವೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಬೇರೆ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಸಿಕೊಂಡಿರುವ ಬಳಕೆದಾರರು 299 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ಹೊಸ ಬಳಕೆದಾರರು ಜಿಯೋ ಸಿಮ್ ಖರೀದಿಸಿ  299 ರೂಪಾಯಿ ಅಥವಾ  ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಕೊಳ್ಳಬಹುದು. ಈ ಪ್ಲಾನ್ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು 60008-60008  ಸಂಖ್ಯೆ ಮಿಸ್ ಕಾಲ್ ಕೊಡಿ.

ಇದನ್ನೂ ಓದಿ: ಸಾವಿರಾರು ಕೋಟಿ ಒಡೆಯ ಮುಕೇಶ್ ಅಂಬಾನಿಗೆ ಫ್ರೀ ಆಫರ್ ಕೊಟ್ಟ ಮಕ್ಕಳು; ಏನ್ಮಾಡ್ತಾರೆ ರಿಲಯನ್ಸ್ ಮಾಲೀಕ?

17ನೇ ಮಾರ್ಚ್‌ ಮೊದಲೇ ರೀಚಾರ್ಜ್ ಮಾಡಿಕೊಂಡಿದ್ದರೆ ಈ ಆಫರ್ ಪಡೆದುಕೊಳ್ಳಲು 100 ರೂಪಾಯಿ ಆಡ್-ಆನ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ಈ ಪ್ಲಾನ್ ಐಪಿಎಲ್ ಮೊದಲ ಪಂದ್ಯ ನಡೆಯುವ ಮಾರ್ಚ್ 22ರಂದು ಲೈವ್ ಆಗುತ್ತದೆ. ನೀವು ಇಂದೇ ರೀಚಾರ್ಜ್ ಮಾಡಿಸಿಕೊಂಡ್ರೆ  ಪ್ಲಾನ್ ಮಾತ್ರ ಮಾರ್ಚ್ 22ರಂದು ಆಕ್ಟಿವೇಟ್ ಆಗಲಿದ್ದು, 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿರುತ್ತದೆ. 

Big matches need big data! Go unlimited with Jio! ⚡🔥 pic.twitter.com/TjUgk9knAn

— Reliance Jio (@reliancejio)
click me!