
ನವದೆಹಲಿ (ಮಾ.3): ಆಪಲ್ ಕಂಪನಿಯ ಅತೀದೊಡ್ಡ ಪಾಲುದಾರರಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಬಹಳ ದೊಡ್ಡ ನಿರ್ಧಾರ ಮಾಡಿದೆ. ವಾಷಿಂಗ್ಟನ್ ಹಾಗೂ ಬೀಜಿಂಗ್ ನಡುವೆ ದಿನದಿಂದ ದಿನಕ್ಕೆ ಉದ್ವಿಗ್ನ ವಾತಾವರಣ ಹೆಚ್ಚಾಗುತ್ತಿದೆ. ಈ ಹಂತದಲ್ಲಿ ಚೀನಾದ ಫಾಕ್ಸ್‌ಕಾನ್ ಫ್ಯಾಕ್ಟರಿಯನ್ನು ತ್ವರಿತವಾಗಿ ಬೇರೆಡೆಗೆ ಶಿಫ್ಟ್ ಮಾಡುವ ಯೋಜನೆಯನ್ನೂ ರೂಪಿಸಿದೆ. ಅದರಂತೆ ತನ್ನ ಉತ್ಪಾದನೆಯನ್ನು ಇನ್ನಷ್ಟು ಏರಿಸುವ ನಿಟ್ಟಿನಲ್ಲಿ ಭಾರತದಲ್ಲಿ 700 ಮಿಲಿಯನ್ ಯುಎಸ್ ಡಾಲರ್‌ನ ಹೊಸ ಪ್ಲ್ಯಾಂಟ್ ನಿರ್ಮಾಣವನ್ನು ಘೋಷಣೆ ಮಾಡಿದೆ. ಇನ್ನೂ ಖುಷಿಯಾದ ವಿಚಾರವೆಂದರೆ ಈ ಪ್ಲ್ಯಾಂಟ್ ಕರ್ನಾಟಕದ ಬೆಂಗಳೂರಿನ ವಿಮಾನನಿಲ್ದಾಣದ ಸನಿಹ ಸಿದ್ಧವಾಗಲಿದೆ. ಇದಕ್ಕಾಗಿ 300 ಎಕರೆ ಜಾಗವನ್ನು ಕೇಳಲಾಗಿದೆ. ಹೊನ್ ಹೈ ಹೈ ಪ್ರಿಸೆಶನ್ ಉದ್ಯಮಕ್ಕೆ ಹೆಸರುವಾಸಿಯಾಗಿರುವ ತೈವಾನೀಸ್ ಕಂಪನಿಯು ಕರ್ನಾಟಕದ ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪವಿರುವ 300 ಎಕರೆ ಪ್ರದೇಶದಲ್ಲಿ ಪ್ಲ್ಯಾಂಟ್‌ಅನ್ನು ರೂಪಿಸಲು ಯೋಜಿಸಿದೆ. ಕಾರ್ಖಾನೆಯು ಆಪಲ್‌ನ ರಿಸೀವರ್‌ಗಳನ್ನು ಕೂಡ ಸಂಗ್ರಹಿಸಬಹುದು ಮತ್ತು ಫಾಕ್ಸ್‌ಕಾನ್ ಹೊಸ ಎಲೆಕ್ಟ್ರಿಕ್ ವಾಹನ ವ್ಯಾಪಾರವನ್ನು ಉತ್ಪಾದಿಸಲು ಕೂಡ ಈ ಪ್ರದೇಶವನ್ನು ಬಳಸಿಕೊಳ್ಳಲಿದೆ.
ಫಾಕ್ಸ್‌ಕಾನ್ ಸಂಸ್ಥೆ ಮಾಡಲಿರುವ ಈ ಹೂಡಿಕೆಯು ಕಂಪನಿಯು ಭಾರತದಲ್ಲಿ ಮಾಡಲಿರುವ ಅತೀದೊಡ್ಡ ಹೂಡಿಕೆಗಳಲ್ಲಿ ಒಂದಾಗಿದೆ. ಅದರೊಂದಿಗೆ ವಿಶ್ವದ ಅತೀದೊಡ್ಡ ಎಲೆಕ್ಟ್ರಾನಿಕ್ಸ್ ಉತ್ಪಾದಕ ರಾಷ್ಟ್ರವಾಗಿ ಚೀನಾ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಸ್ಪಷ್ಟ ಸೂಚನೆಯಾಗಿದೆ. ಆಪಲ್‌ನೊಂದಿಗೆ ಅಮೆರಿಕದ ಇತರ ಬ್ರ್ಯಾಂಡ್‌ಗಳು ಕೂಡ ಭಾರತ ಹಾಗೂ ವಿಯೆಟ್ನಾಂನ ಹೊಸ ಪ್ರದೇಶದಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪನೆ ಮಾಡುತ್ತಿವೆ. ಆಪಲ್‌ನ ಪಾಲುದಾರ ಕಂಪನಿಯ ಫಾಕ್ಸ್‌ಕಾನ್ ಹೂಡಿಕೆಯಿಂದಾಗಿ ರಾಜ್ಯದಲ್ಲಿ ಅಂದಾಜು 1 ಲಕ್ಷ ನೇರ ಹಾಗೂ ಪರ್ಯಾಯ ಉದ್ಯೋಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.
ವರ್ಷಾಂತ್ಯದ ರಜೆಗಳು ಹಾಗೂ ಕೋವಿಡ್ ವಿಚಾರವಾದ ಸಮಸ್ಯೆಗಳಿಂದಾಗಿ ಫಾಕ್ಸ್‌ಕಾನ್ ಝೆಂಗ್‌ಝೌ ಪ್ಲ್ಯಾಂಟ್‌ನ ಉತ್ಪಾದನೆ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಆಪಲ್ ತನ್ನ ಚೀನಾ ಸಂಬಂಧಗಳನ್ನು ಮರುಪರಿಶೀಲಿಸುವಂತೆ ಮಾಡಿದೆ. ಫಾಕ್ಸ್‌ಕಾನ್‌ನ ಈ ನಿರ್ಧಾರವು ಹೊಸದಾಗಿದ್ದು, ನಿಗದಿಗಿಂತ ಮುಂಚಿತವಾಗಿ ಆಪಲ್‌ನ ಪೂರೈಕೆದಾರರು ಚೀನಾದಿಂದ ಹೊರಹೋಗಲು ನಿರ್ಧಾರ ಮಾಡಿದ್ದಾರೆ.
1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು
ಆಪಲ್ ಕಂಪನಿಗೆ ಭಾರತದ ಪ್ರೋತ್ಸಾಹ: ಆಪಲ್ ಕಂಪನಿಯ ಉತ್ಪನ್ನಗಳ ಪೂರೈಕೆದಾರರಿಗೆ ಭಾರತ ದೊಡ್ಡ ಮಟ್ಟದ ಹಣಕಾಸು ಪ್ರೋತ್ಸಾಹವನ್ನು ನೀಡಿದೆ. ಕಳೆದ ವರ್ಷ ತಮಿಳುನಾಡಿನಲ್ಲಿ ಫಾಕ್ಸ್‌ಕಾನ್ ಹೊಸ ಮಾದರಿಯ ಐಫೋನ್ ಉತ್ಪಾದನೆಗಳನ್ನು ಆರಂಭ ಮಾಡಿತ್ತು. ಈ ನಡುವೆ ಆಪಲ್‌ನ ಪೂರೈಕೆದಾರರಾದ ವಿಸ್ಟ್ರಾನ್ ಹಾಘೂ ಪೆಗಾಟ್ರಾನ್ ಕೂಡ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸುವ ನಿರೀಕ್ಷೆ ಇದೆ. ಈ ನಡುವೆ ಜಬಿಲ್ ಕಾರ್ಪೋರೇಷನ್ ಈಗಾಗಲೇ ಭಾರತದಲ್ಲಿ ಆಪಲ್‌ನ ಏರ್‌ಪಾಡ್ಸ್‌ಗಳ ಉತ್ಪಾದನೆಯನ್ನು ಆರಂಭ ಮಾಡಿದೆ.
ನೂತನ ಸೆಮಿಕಂಡಕ್ಟರ್ ಲ್ಯಾಬ್ ಉದ್ಘಾಟಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಕರ್ನಾಟಕದಲ್ಲಿ ಆಪಲ್ ಮೊಬೈಲ್ ಉತ್ಪಾದನಾ ಘಟಕ: '300 ಎಕರೆ ಭೂಮಿಯಲ್ಲಿ ಕಂಪನಿ ಸ್ಥಾಪನೆಯಾಗಲಿದೆ. ಇದು ಕರ್ನಾಟಕದ ಒಂದು ಟ್ರಿಲಿಯನ್ ಕನಸನ್ನ ನನಸುಮಾಡುವತ್ತ ಸಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಈ ಕಾರ್ಯಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿಗೆ ಧನ್ಯವಾದಗಳು. ಇದರಿಂದ ರಾಜ್ಯದಲ್ಲಿ ಹೂಡಿಕೆಯ ಜೊತೆಗೆ ಸ್ಥಳಿಯ ಜನರಿಗೆ ಉದ್ಯೋಗ ಅವಕಾಶ ಸಹ ಸಿಗಲಿದೆ' ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.