'ಶ್ರೀಮಂತರಾಗ್ಬೇಕಾ? ಭಾರತದಲ್ಲಿ ಹೂಡಿಕೆ ಮಾಡಿ..' Investorsಗೆ ಸಲಹೆ ನೀಡಿದ ಜಿಮ್‌ ರೋಜರ್ಸ್‌

Published : Mar 26, 2024, 04:36 PM ISTUpdated : Mar 26, 2024, 04:44 PM IST
'ಶ್ರೀಮಂತರಾಗ್ಬೇಕಾ? ಭಾರತದಲ್ಲಿ ಹೂಡಿಕೆ ಮಾಡಿ..' Investorsಗೆ ಸಲಹೆ ನೀಡಿದ ಜಿಮ್‌ ರೋಜರ್ಸ್‌

ಸಾರಾಂಶ

Jim Rogers  2015 ರಲ್ಲಿ, ಇದೇ ಜಿಮ್‌ ರೋಜರ್ಸ್‌, ಭಾರತದ ಆರ್ಥಿಕ ಚೇತರಿಕೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಬರುತ್ತಿಲ್ಲ ಎನ್ನುವ ಮಾತು ಹೇಳಿ, ಭಾರತೀಯ ಕಂಪನಿಗಳಲ್ಲಿದ್ದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದರು.  

ನವದೆಹಲಿ (ಮಾ.26): ಅಮೆರಿಕದ ಹಿರಿಯ ಹಾಗೂ ಅನುಭವಿ ಹೂಡಿಕೆದಾರ ಜಿಮ್ ರೋಜರ್ಸ್‌ ಹೂಡಿಕೆದಾರರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಹಾಗೇನಾದರೂ ನೀವು ಶ್ರೀಮಂತರಾಗಬೇಕು ಎಂದು ಬಯಸಿದಲ್ಲಿ. ಭಾರತದಲ್ಲಿ ಹೂಡಿಕೆ ಮಾಡಿ  ಎಂದು ಸಲಹೆ ನೀಡಿದ್ದಾರೆ. ಬ್ಯುಸಿನೆಸ್ ಟುಡೇ ಜೊತೆಗಿನ ಮಾತುಕತೆಯಲ್ಲಿ ಅವರು ಈ ಮಾತು ಹೆಳಿದ್ದಾರೆ. 'ಜಗತ್ತಿನಲ್ಲಿ ಬಹಳ ಸ್ಮಾರ್ಟ್‌ ಆದ ಭಾರತೀಯರು ಕಾಣಸಿಗುತ್ತಿದ್ದಾರೆ. ಆದ ಕಾರಣದಿಂದ ಜನರು ಶ್ರೀಮಂತರಾಗಬೇಕು ಎಂದು ಬಯಸಿದರೆ, ಭಾರತೀಯ ಕಂಪನಿಗಳ ಷೇರುಗಳನ್ನು ಖರೀದಿ ಮಾಡುವಂತೆ ನಾನು ಸಲಹೆ ನೀಡುತ್ತೇನೆ. ಅಂತಹ ಕೆಲವು ಬುದ್ಧಿವಂತ ಭಾರತೀಯರನ್ನು ನೀವು ಕಂಡುಕೊಂಡರೆ ನೀವು ಸಾಕಷ್ಟು ಹಣವನ್ನು ಗಳಿಸಲಿದ್ದೀರಿ' ಎಂದಿದ್ದಾರೆ.

2015ರಲ್ಲಿ ಇದೇ ಜಿಮ್‌ ರೋಜರ್ಸ್‌ ಭಾರತದ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದ ತಮ್ಮ ಹಣವನ್ನು ವಾಪಾಸ್‌ ತೆಗೆದಿದ್ದರು. ಭಾರತೀಯ ಕಂಪನಿಗಳ ಎಲ್ಲಾ ಷೇರುಗಳನ್ನು ಅವರು ಮಾರಾಟ ಮಾಡಿದ್ದರು. 'ಭಾರತದ ಆರ್ಥಿಕ ಚೇತರಿಕೆಯ ಕ್ರಮಗಳು ಹಾಗೂ ದೇಶದ ಆರ್ಥಿಕತೆಯ ನಿರ್ವಹಣೆ ಬಗ್ಗೆ ನನಗೆ ಗ್ಯಾರಂಟಿ ಇಲ್ಲ' ಎನ್ನುವ ಮಾತು ಹೇಳಿ ತಮ್ಮ ಹಣವನ್ನು ವಾಪಾಸ್‌ ತೆಗೆದುಕೊಂಡಿದ್ದರು. ಆ ಹಂತದಲ್ಲಿ ಅವರು ಭಾರತದಲ್ಲಿ ಆರ್ಥಿಕ ಚೇತರಿಕೆಯ ಕ್ರಮಗಳ ಕೊರತೆ ಇದೆ ಎಂದೂ ದೂರಿದ್ದರು. ನಾನು ನನ್ನ ಇಂಡಿಯಾ ಷೇರುಗಳನ್ನು ಮಾರಾಟ ಮಾಡಿದ್ದೇನೆ. ಯಾಕೆಂದರೆ ಅವುಗಳು ಏನೂ ಆಗುತ್ತಿಲ್ಲ. ಮಾರುಕಟ್ಟೆ ಗರಿಷ್ಠ ಮಟ್ಟದಲ್ಲಿದೆ. ಹೂಡಿಕೆದಾರರು ಹೂಡ ಉತ್ತಮವಾದುದನ್ನು ನಿರೀಕ್ಷೆ ಮಾಡಿದ್ದರು. ಪ್ರಧಾನಿ ಮೋದಿ ಮಾತ್ರವಲ್ಲ ನಾನೂ ಕೂಡ ಶ್ರಮವಹಿಸಿದ್ದೆ. ಆದರೆ, ಮಾರುಕಟ್ಟೆಯು ಈಗಾಗಲೇ ಅದರ ಕೆಲವನ್ನು ಕಡಿಮೆ ಮಾಡಿದೆ ಏಕೆಂದರೆ ಅದು ಸಾಕಷ್ಟು ಏರಿಕೆಯಾಗಿದೆ ... ನೀವು ಕೇವಲ ಭರವಸೆಯ ಮೇಲೆ ಹೂಡಿಕೆ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದರು.

ಭಾರತೀಯ ಮಾರುಕಟ್ಟೆಗೆ ಜಿಮ್ ರೋಜರ್ಸ್  ನೀಡಿದ ಸಲಹೆ ಏನು? ಆದರೆ ಈಗ ಏಸ್ ಹೂಡಿಕೆದಾರರು, "ಅಮೆರಿಕನ್ನರು ಬಾಂಡ್ ಅನ್ನು ಖರೀದಿಸಲಿ, ನೀವು ಈಕ್ವಿಟಿಗಳನ್ನು ಖರೀದಿಸಿರಿ" ಎಂದು ಹೇಳುತ್ತಿದ್ದಾರೆ. ಭಾರತವು ಉತ್ತಮ ಸ್ಥಾನದಲ್ಲಿದೆ. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸಿದರೆ "ಭವಿಷ್ಯದಲ್ಲಿ ಇನ್ನಷ್ಟು ಉತ್ತಮವಾಗಲು" ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ ನನ್ನ ಜೀವನದಲ್ಲಿ ಮೊದಲ ಬಾರಿಗೆ, ಭಾರತ ಸರ್ಕಾರ  ಕೆಲವು ವಿಚಾರವನ್ನು ಬಹಳ ಸರಿಯಾಗಿ ಮಾಡುತ್ತಿದೆ ಎಂದು ನಾನು ಭಾವಿಸಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ.

ರಾಜಿ ಆಗಿಲ್ಲ, ಇನ್ನೆಂದೂ ಆತನ ಮನೆಗೆ ಕಾಲಿಡೋದಿಲ್ಲ: ರೇಮಂಡ್‌ ಗ್ರೂಪ್‌ ಚೇರ್ಮನ್‌ ಗೌತಮ್‌ ಬಗ್ಗೆ ತಂದೆ ಆಕ್ರೋಶ!

'ಬಹುಶಃ, ವಿಷಯಗಳು ಬದಲಾಗಲಿವೆ, ಆದ್ದರಿಂದ ಭವಿಷ್ಯದಲ್ಲಿ ಭಾರತವು ಈಗಿರುವುದಕ್ಕಿಂತ ಉತ್ತಮವಾಗಿರಲಿದೆ. ಹಾಗಾಗಿ ಪ್ರಧಾನಿ ಮೋದಿ ತಾನು ಏನು ಮಾಡಲಿದ್ದೇವೆ ಎಂದು ಹೇಳಿರುವುದನ್ನು ಮಾಡಿ ತೋರಿಸಿದರೆ, ಭಾರತವು ಈಗ ಇರುವ ಸ್ಥಿತಿಗಿಂತ ಇನ್ನಷ್ಟು ಹೆಚ್ಚು ಬೆರಗುಗೊಳಿಸುವಂಥ ಸ್ಥಿತಿ ತಲುಪಲಿದೆ ಎಂದಿದ್ದಾರೆ.

ಹನಿಮೂನ್‌ನ 'ಹಾಟ್‌' ಫೋಟೋ ಶೇರ್‌ ಮಾಡಿಕೊಂಡ ಕಿರುತೆರೆ ನಟಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!