ATM‌ ಹಣ ಡ್ರಾ to ವಿಮಾನ ನೀತಿ; ಫೆ.1 ರಿಂದ ಬದಲಾಗುತ್ತಿದೆ ಹಲವು ನಿಯಮ!

By Suvarna NewsFirst Published Jan 29, 2021, 8:06 PM IST
Highlights

ಫೆಬ್ರವರಿ 1 ರಂದು ಹಣ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಂದಿನಿಂದ ದೇಶದಲ್ಲಿ ಕೆಲ ನೀತಿಗಳು ಬದಲಾಗಲಿದೆ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳಾಗಲಿದೆ. ಫೆಬ್ರವರಿ 1 ರಿಂದ ಬದಲಾಗುತ್ತಿರವ ನಿಯಮವೇನು? ಇಲ್ಲಿವೆ ವಿವರ.

ನವದೆಹಲಿ(ಜ.29): ಕೇಂದ್ರದ ಬಜೆಟ್‌ಗೆ ಕಾತರ ಹೆಚ್ಚಾಗಿದೆ. ಕೊರೋನಾ ಹೊಡೆತದಿಂದ ಹಳ್ಳ ಹಿಡಿದಿರುವ ಆರ್ಥಿಕತೆಗೆ ಯಾವ ರೀತಿ ಪುನ್ಚೇತನ ನೀಡಲಿದೆ ಕೇಂದ್ರ ಅನ್ನೋ ಕುತೂಹಲ ಹೆಚ್ಚಾಗಿದೆ. ಜೊತೆಗೆ ಜನಸಾಮಾನ್ಯರಿಗೆ ಆಗುವ ಪ್ರಯೋಜನಗಳು ಕುರಿತು ಚರ್ಚೆಯಾಗುತ್ತಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ದಿನ, ಭಾರತದಲ್ಲಿ ಕೆಲ ನೀತಿ, ರೀತಿಯಲ್ಲಿ ಬದಲಾವಣೆಯಾಗುತ್ತಿದೆ.

ಭಾರತದ ಆರ್ಥಿಕತೆ V ಶೇಪ್ ಪ್ರಗತಿ; ಆರ್ಥಿಕ ಸಮೀಕ್ಷೆ ಹೆಚ್ಚಿಸಿದ ನಿರೀಕ್ಷೆ!

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ, ಎಟಿಎಂ ಹಣ ವಿಥ್‌ಡ್ರಾ, ಅಂತಾರಾಷ್ಟ್ರೀಯ ವಿಮಾನ ನೀತಿ ಸೇರಿದಂತೆ ಹಲವು ನಿಮಯದಲ್ಲಿ ಬದಲಾವಣೆಯಾಗುತ್ತಿದೆ.

ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ!
2020ರ ಅಂತಿಮ ತಿಂಗಳ ಅಂದರೆ ಡಿಸೆಂಬರ್ ತಿಂಗಳಲ್ಲಿ 2 ಬಾರಿ ಎಲ್‌ಪಿಜಿ ಬೆಲೆ ಏರಿಕೆಯಾಗಿತ್ತು. ಆದರೆ ಜನವರಿ ತಿಂಗಳಲ್ಲಿ ಏರಿಕೆಯಾಗಿಲ್ಲ. ಇದೀಗ ಫೆಬ್ರವರಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಕಂಪನಿಗಳು ಬೆಲೆ ನಿಗದಿ ಮಾಡುತ್ತದೆ. ಹೀಗಾಗಿ ಫೆಬ್ರವರಿ ಆರಂಭದಲ್ಲಿ ಮತ್ತೊಂದು ಬೆಲೆ ಏರಿಕೆ ಸಾಧ್ಯತೆ ಇದೆ.

ನಾನ್ EMV ATMನಿಂದ ಹಣ ವಿಥ್‌ಡ್ರಾ ನಿರ್ಬಂಧ
ಫೆಬ್ರವರಿ 1 ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರುತ್ತಿದೆ. ಎಟಿಎಂ ವಂಚನೆ ತಡೆಯಲು ಪಿಎನ್‌ಬಿ ಬ್ಯಾಂಕ್ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಪಿಎನ್‌ಬಿ ಗ್ರಾಹಕರಿಗೆ ನಾನ್ EMV ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.

ಕೇಂದ್ರ ಬಜೆಟ್‌ನ ಮೊಬೈಲ್‌ ಆ್ಯಪ್‌ ಬಿಡುಗಡೆ!

ಹಲವು ವಸ್ತುಗಳ ಬೆಲೆಯಲ್ಲಿ ಬದಲಾವಣೆ
ಪಿಠೋಪಕರ, ಟೆಲಿಕಮ್ಯಾನಿಕೇಶನ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗುವು ಸಾಧ್ಯತೆ ಇದೆ. ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಬಳಿಕ ಈ ಬದಲಾವಣೆಗಳಾಗಲಿವೆ.

ಅಂತಾರಾಷ್ಟ್ರೀಯ ವಿಮಾನ
ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಹಲವು ಅಂತಾರಾಷ್ಟ್ರೀಯ ವಿಮಾನ ಸೇವೆ ಫೆಬ್ರವರಿ 1 ರಂದು ಆರಂಭಗೊಳ್ಳಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗಾಗಲೇ ಘೋಷಣೆ ಮಾಡಿದೆ. ತಿರ್ಚಿ-ಸಿಂಗಾಪರು, ಕುವೈಟ್- ಮಂಗಳೂರು, ಕುವೈಟ್-ಹೈದರಾಬಾದ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಳ್ಳುತ್ತಿದೆ.

click me!