ಮೂಲ ಸೌಕರ್ಯ ಉತ್ಪಾದನೆ ಕ್ಷೇತ್ರದಲ್ಲಿ ಕುಸಿತ: ಅಂಕಿಅಂಶ!

Suvarna News   | Asianet News
Published : Jan 01, 2020, 04:54 PM ISTUpdated : Jan 01, 2020, 06:07 PM IST
ಮೂಲ ಸೌಕರ್ಯ ಉತ್ಪಾದನೆ ಕ್ಷೇತ್ರದಲ್ಲಿ ಕುಸಿತ: ಅಂಕಿಅಂಶ!

ಸಾರಾಂಶ

ಒಂದಾದ ಮೇಲೊಂದರಂತೆ ನೆಗೆಟಿವ್ ಸುದ್ದಿಗಳು| ಮೋದಿ ಸರ್ಕಾರಕ್ಕೆ ಏಕಾಏಕಿ ಬಂದೆರಗಿದ ಆಘಾತಕಾರಿ ಸುದ್ದಿಗಳು| ಭಾರತದ ಮೂಲಭೂತ ಉತ್ಪಾದನೆಯಲ್ಲಿ ಕುಸಿತ| ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಕುಸಿತ ಕಂಡ ಉತ್ಪಾದನೆ| ಉತ್ಪಾದನಾ ವಲಯಗಳ ಮಾರಾಟದಲ್ಲಿ ಇಳಿಕೆ ದಾಖಲು| ಪ್ರಸಕ್ತ ಖಾತೆ ಕೊರತೆ 36.3 ಬಿಲಿಯನ್ ಇದೆ ಎಂದ ಆರ್‌ಬಿಐ| 

ನವದೆಹಲಿ(ಜ.01): ಭಾರತದ ಮೂಲಭೂತ ಸೌಕರ್ಯ ಉತ್ಪಾದನಾ ಕ್ಷೇತ್ರ ಕಳೆದ ಹಣಕಾಸು ವರ್ಷದ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಕೂಡ ಕುಸಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಉತ್ಪಾದನಾ ವಲಯಗಳ ಮಾರಾಟದಲ್ಲಿ ಇಳಿಮುಖವಾಗಿದ್ದು, ಮೂಲಭೂತ ಸೌಕರ್ಯಗಳಲ್ಲಿ ಕೊರತೆ ಎದ್ದು ಕಾಣಿತ್ತಿದೆ ಎಂಬುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಭಾರತದ ಆರ್ಥಿಕ ಕುಸಿತದ IMF ಬಗ್ಗೆ ಕಳವಳ

ಕಳೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಕೇವಲ ಶೇಕಡಾ 4.5ರಷ್ಟು ಏರಿಕೆಯಾಗಿದ್ದು, ಪ್ರಯಾಣಿಕರ ಕಾರು ಮಾರಾಟ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಶೇ. 18ರಷ್ಟು ಕುಸಿದಿದೆ.

ಅದರಂತೆ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು ಮತ್ತು ಸಿಮೆಂಟ್ ಮಾರಾಟದಲ್ಲಿ ಕೂಡ ಗಮನಾರ್ಹ ಇಳಿಕೆ ಕಂಡುಬಂದಿದೆ.

ವಿದ್ಯುದ್ದೀಕರಣ ಕ್ಷೇತ್ರದಲ್ಲಿ ಶೇ. 0.7ರಷ್ಟು ಬೆಳವಣಿಗೆಯಾಗಿದ್ದು ಸ್ಟೀಲ್ ಮತ್ತು ರಸಗೊಬ್ಬರಗಳ ಉತ್ಪಾದನೆ ಮತ್ತು ಮಾರಾಟದಲ್ಲಿ  ಅಲ್ಪ ಪ್ರಮಾಣದ ಬೆಳವಣಿಗೆ ಮಾತ್ರ ಕಂಡುಬಂದಿದೆ.

ಆರ್‌ಬಿಐ ಪ್ರಕಾರ ಪ್ರಸಕ್ತ ಖಾತೆ ಕೊರತೆ ಸೆಪ್ಟೆಂಬರ್ 2019 ರ ತ್ರೈಮಾಸಿಕದವರೆಗೆ 36.3 ಬಿಲಿಯನ್ ಇದ್ದು, ಜಿಡಿಪಿ ಶೇ. 0.9 ಕ್ಕೆ ಕುಗ್ಗಿದೆ.

ನಾವು ಮತ್ತೆ ಮೇಲೆದ್ದು ಬರುತ್ತೇವೆ: ಸಣ್ಣ ಧ್ವನಿಯಲ್ಲಿ ಮೋದಿ ಅಂದಿದ್ದೇನು?

ಮೂಲಸೌಕರ್ಯ ಕ್ಷೇತ್ರದಲ್ಲಿ ಸರ್ಕಾರದ ಖರ್ಚು ಹೆಚ್ಚಳದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ಬರುವಂತೆ  102 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ಬೆನ್ನಲ್ಲೇ ಈ ಅಂಕಿ ಅಂಶ ಹೊರಬಿದ್ದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!