ಇಡೀ ವರ್ಷಕ್ಕಾಗುವಷ್ಟು ಶಾಕ್ ಒಂದೇ ದಿನದಲ್ಲಿ: ಹ್ಯಾಪಿ(?) ನ್ಯೂ ಇಯರ್ ಎಂದ ಮೋದಿ ಸರ್ಕಾರ!

By Suvarna News  |  First Published Jan 1, 2020, 2:44 PM IST

ಹೊಸ ವರ್ಷಕ್ಕೆ ಶಾಕ್ ಮೇಲೆ ಶಾಕ್ ಕೊಟ್ಟ ಮೋದಿ ಸರ್ಕಾರ|  ಎಲ್‌ಪಿಜಿ  ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ| ದರ ಹೆಚ್ಚಳ ಅನಿವಾರ್ಯ ಎಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್| ಸಬ್ಸಿಡಿ ರಹಿತ ಎಲ್‌ಪಿಜಿ ಗ್ಯಾಸ್ ದರದಲ್ಲಿ ಏರಿಕೆ | ನವದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 19 ರೂ. ಏರಿಕೆ|  ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 19.5 ರೂ. ಹೆಚ್ಚಳ| ದೇಶದ ಮಹಾನಗರಗಳಲ್ಲಿ ಏರಿಕೆ ಕಂಡ ಸಿಲಿಂಡರ್ ಬೆಲೆ| 


ನವದೆಹಲಿ(ಜ.01): ಹೊಸ ವರ್ಷದ ಆರಂಭದಲ್ಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನತೆಗ ಶಾಕ್ ನೀಡಿದೆ. ರೈಲ್ವೆ ಪ್ರಯಾಣದ ದರ ಹೆಚ್ಚಳದ ಜೊತೆಗೆ  ಎಲ್‌ಪಿಜಿ ಬೆಲೆಯಲ್ಲೂ ಭಾರೀ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 

ಸಬ್ಸಿಡಿ ರಹಿತ ಎಲ್‌ಪಿಜಿ ಗ್ಯಾಸ್ ದರದಲ್ಲಿ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ  ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸದ್ಯದ ಪರಿಸ್ಥಿತಿಯಲ್ಲಿ ದರ ಹೆಚ್ಚಳ ಅನಿವಾರ್ಯ ಕ್ರಮ ಎಂದು ಹೇಳಿದೆ.

Non-Subsidized LPG price hiked by Rs 19 per cylinder pic.twitter.com/R1fY3WTFDE

— ANI (@ANI)

Latest Videos

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 19 ರೂ. ಏರಿಕೆಯಾಗಿದ್ದರೆ, ಮುಂಬೈನಲ್ಲಿ 19.5 ರೂ. ಹೆಚ್ಚಳವಾಗಿದೆ.  ಇದಕ್ಕೂ ಮೊದಲು ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 714 ರೂ.ಗಳಿದ್ದರೆ, ಮುಂಬೈನಲ್ಲಿ 684 ರೂ.ಇತ್ತು. 

ಈರುಳ್ಳಿ ತರಂಗಿಲ್ಲ, ಬೇಯಿಸಂಗಿಲ್ಲ: ಸಿಲಿಂಡರ್ ಬೆಲೆ ಏರಿದೆಯಲ್ಲ!

ಅದರಂತೆ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಕ್ರಮವಾಗಿ 21.5 ರೂ. ಹಾಗೂ 20 ರೂ. ಹೆಚ್ಚಳವಾಗಿದೆ.  ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ ಬೆಲೆ 747 ರೂ ಇದ್ದರೆ, ಚೆನ್ನೈನಲ್ಲಿ 734 ರೂ.ಇದೆ.

click me!