ಪ್ರಥಮ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಲಾಭ ಎಷ್ಟು ಗೊತ್ತಾ?

Published : Jul 13, 2018, 09:24 PM IST
ಪ್ರಥಮ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಲಾಭ ಎಷ್ಟು ಗೊತ್ತಾ?

ಸಾರಾಂಶ

ಇನ್ಫೋಸಿಸ್ ಗೆ  3,612 ಕೋಟಿ ರೂ. ಲಾಭ ಪ್ರಥಮ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಾಧನೆ 270 ಕೋಟಿ ರೂ. ಲಾಭ ಕಡಿಮೆಯಾಗಿದೆ ಪನಾಯ ಸಂಸ್ಥೆ ಮಾರಾಟದ ಪರಿಣಾಮ ನಿವ್ವಳ ಲಾಭ ಶೇ.3.7 ರಷ್ಟು ಏರಿಕೆ

ಬೆಂಗಳೂರು(ಜು.13): ಜೂ.30 ಕ್ಕೆ ಕೊನೆಯಾದ 2018 ರ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆ 3,612 ಕೋಟಿ ರೂಪಾಯಿ ಲಾಭ ಗಳಿಸಿದೆ. 

ಈ ಹಿಂದೆ ಇನ್ಫೋಸಿಸ್ ಖರೀದಿಸಿದ್ದ ಇಸ್ರೇಲಿ ತಂತ್ರಜ್ಞಾನ  ಸಂಸ್ಥೆ ಪನಾಯವನ್ನು ಮಾರಾಟ ಮಾಡಿದ್ದರಿಂದ ಸುಮಾರು 270 ಕೋಟಿ ರೂಪಾಯಿ ವರೆಗೆ ಸಂಸ್ಥೆಯ ಲಾಭದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿಸುಮಾರು 270 ಕೋಟಿ ರೂಪಾಯಿ ವರೆಗೆ ಲಾಭ ಕಡಿಮೆಯಾಗಿದೆ ಎನ್ನಲಾಗಿದೆ.

 ಅಷ್ಟೇ ಅಲ್ಲದೇ ಈಕ್ವಿಟಿ ಷೇರಿನ ಮೌಲ್ಯವೂ ರೂ.1.24 ವರೆಗೆ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ. ವರ್ಷದ ಬೆಳವಣಿಗೆಯಲ್ಲಿ ಶೇ.12 ರಷ್ಟು ಏರಿಕೆಯಾಗಿದ್ದು, ನಿವ್ವಳ ಲಾಭ ಶೇ.3.7 ರಷ್ಟು ಏರಿಕೆಯಾಗಿದೆ. ಆದರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ.2.1 ರಷ್ಟು ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್‌: ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್‌ ಆಗಲು ಸಿಕ್ತು ಟ್ರಿಕ್‌
ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್: ಅತೀ ಕಡಿಮೆ ದರದ ಪ್ಲ್ಯಾನ್‌ನಲ್ಲಿ ಇಡೀ ವರ್ಷ ಅನ್‌ಲಿಮಿಟೆಡ್ ಕಾಲಿಂಗ್!