ಮೋದಿ ಮೋಡಿ: ಆರ್ಥಿಕತೆಯಲ್ಲಿ 4 ರಾಷ್ಟ್ರ ಹಿಂದಿಕ್ಕಿದ ಭಾರತ!

Published : Jul 13, 2018, 03:20 PM ISTUpdated : Jul 13, 2018, 03:27 PM IST
ಮೋದಿ ಮೋಡಿ: ಆರ್ಥಿಕತೆಯಲ್ಲಿ 4 ರಾಷ್ಟ್ರ ಹಿಂದಿಕ್ಕಿದ ಭಾರತ!

ಸಾರಾಂಶ

ನಾಲ್ಕು ವರ್ಷದಲ್ಲಿ ನಾಲ್ಕು ರಾಷ್ಟ್ರ ಹಿಂದಿಕ್ಕಿದ ಭಾರತ ಬಲಾಡ್ಯ ಆರ್ಥಿಕತೆ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನೆಗೆತ ಬ್ರೆಜಿಲ್, ಇಟಲಿ, ರಷ್ಯಾ ಫ್ರಾನ್ಸ್ ಉಡೀಸ್ ಮಾಡಿದ ಭಾರತ ಬ್ರಿಟನ್ ಹಿಂದಿಕ್ಕಲು ನಡೆದಿದೆ ಸಕಲ ಸಿದ್ದತೆ ಹರ್ಷಕ್ಕೆ ಎಡೆ ಮಾಡಿದ ಐಎಂಎಫ್ ವರದಿ    

ನವದೆಹಲಿ(ಜು.13): ಕಳೆದ ನಾಲ್ಕು ವರ್ಷಗಳ ಮೋದಿ ಆಡಳಿತದ ಕುರಿತು ಅನೇಕ ವೇದಿಕೆಗಳಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಆದರೆ ಮೋದಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಕೊಳ್ಳದೇ ಗುಪ್ತಗಾಮಿನಿಯಂತೆ ದೇಶವನ್ನು ಸದೃಡಗೊಳಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬಳಿಕ, ಈ ನಾಲ್ಕು ವರ್ಷಗಳ ಅವಧಿಯಲ್ಲಿ ಆರ್ಥಿಕ ನಾಗಾಲೋಟದಲ್ಲಿ ವಿಶ್ವದ ನಾಲ್ಕು ದೈತ್ಯ ರಾಷ್ಟ್ರಗಳನ್ನು ಹಿಂದಿಕ್ಕಿದ್ದಾರೆ.

2014 ಕ್ಕೂ ಮೊದಲು ಭಾರತ ವಿಶ್ವದ ಸದೃಡ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಇದೀಗ ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿರುವ ಭಾರತ ವಿಶ್ವದ ಸದೃಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತ ಈ ಸಾಧನೆ ಮಾಡಿದ್ದು, ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ.

2017-18 ರ ಆರ್ಥಿಕ ವ‍ರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಕಾಯ್ದುಕೊಂಡಿರುವ ಭಾರತ, ಬ್ರೆಜಿಲ್, ಇಟಲಿ, ರಷ್ಯಾ ಮತ್ತು ಫ್ರಾನ್ಸ್ ನ್ನು ಈಗಾಗಲೇ ಹಿಂದಿಕ್ಕಿದೆ. ಇನ್ನು ಈ ವರ್ಷದ ಅಂತ್ಯದವರೆಗೂ ಇದೇ ಜಿಡಿಪಿ ದರ ಕಾಯ್ದುಕೊಂಡರೆ ಬ್ರಿಟನ್ ನ್ನೂ ಕೂಡ ಭಾರತ ಹಿಂದಿಕ್ಕಲಿದೆ ಎಂಬುದು ಆರ್ಥಿಕ ತಜ್ಞರ ಅಂಬೋಣ.

ಸದ್ಯ ಭಾರತದ ಜಿಡಿಪಿ 2018 ಆರ್ಥಿಕ ವರ್ಷದಲ್ಲಿ 2.597 ಮಿಲಿಯನ್ ಡಾಲರ್ ಇದ್ದು, ಬ್ರಿಟನ್ ಗಿಂತ ಕೇವಲ 25 ಮಿಲಿಯನ್ ಡಾಲರ್ ನಷ್ಟು ಹಿಂದೆ ಇದೆ. ಭಾರತ ಈ ವರ್ಷದ ಅಂತ್ಯದವರೆಎ ಇದೇ ಜಿಡಿಪಿ ಬೆಳವಣಿಗೆ ಕಾಯ್ದುಕೊಂಡರೆ ಬ್ರಿಟನ್ ನ್ನೂ ಕೂಡ ಹಿಂದಿಕ್ಕಲಿದೆ ಎಂದು ಐಎಂಎಫ್ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!