70 ಗಂಟೆ ಕೆಲಸ ವಿವಾದ ಕುರಿತು ಹೊಸ ವಿಚಾರ ಮುಂದಿಟ್ಟ ನಾರಾಯಣ ಮೂರ್ತಿ!

Published : Jan 21, 2025, 06:44 PM IST
70 ಗಂಟೆ ಕೆಲಸ ವಿವಾದ ಕುರಿತು ಹೊಸ ವಿಚಾರ ಮುಂದಿಟ್ಟ ನಾರಾಯಣ ಮೂರ್ತಿ!

ಸಾರಾಂಶ

ನಾರಾಯಣ ಮೂರ್ತಿ ಹೇಳಿದ ವಾರದಲ್ಲಿ 70 ಗಂಟೆ ಕೆಲಸದ ವಿಚಾರ ಈಗಲೂ ಸದ್ದು ಮಾಡುತ್ತಿದೆ. ಭಾರಿ ವಿವಾದ ಸೃಷ್ಟಿಸಿದೆ. ಇದೇ ಇದೇ ವಿಚಾರ ಕುರಿತು ನಾರಾಯಣಮೂರ್ತಿ ಮಹತ್ವದ ಹೇಳಿಕೆ ನೀಡಿದ್ದಾರೆ. ಸದ್ಯ ನಾರಾಯಣ ಮೂರ್ತಿ ಏನಂದ್ರು?

ಬೆಂಗಳೂರು(ಜ.21) ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ನೀಡಿದ್ದ ವಾರದಲ್ಲಿ 70 ಗಂಟೆ ಕೆಲಸ ಭಾರಿ ವಿವಾದ ಸೃಷ್ಟಿಸಿತ್ತು. ಇದಾದದ ಬಳಿಕ ಎಲ್‌ಟಿ ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯ 90 ಗಂಟೆ ಕೆಲಸ ಹೇಳಿಕೆ ನೀಡಿ ವಿವಾದ ಮತ್ತಷ್ಟು ಹೆಚ್ಚಿಸಿದ್ದರು. ಇದೀಗ ಹೊಸ ವಿಚಾರ ಎಂದರೆ ನಾರಾಯಣಮೂರ್ತಿ ತಾವು ನೀಡಿದ್ದ 70 ಗಂಟೆ ಕೆಲಸದ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ಈ ಬಾರಿ ತಾವು ನೀಡಿದ್ದ ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. 70 ಗಂಟೆ ಕೆಲಸ ಆಜ್ಞೆಯಲ್ಲ, ಇದು ನಿಮ್ಮ ಆಯ್ಕೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಕಳೆದ 40 ವರ್ಷದ ವೃತ್ತಿ ಜೀವನದಲ್ಲಿ ನಾನು ಬೆಳಗ್ಗೆ 6.20ಕ್ಕೆ ಕಚೇರಿಯಲ್ಲಿ ಇರುತ್ತಿದ್ದೆ. ರಾತ್ರಿ 8.30ರ ವರೆಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಹೆಚ್ಚುವರಿ ಕೆಲಸ ಮಾಡಿ ಇನ್ಫೋಸಿಸ್ ಕಟ್ಟಿದ್ದೇನೆ. ಆದರೆ ಎಲ್ಲರೂ ಈ ರೀತಿ ಮಾಡಿ ಎಂದಲ್ಲ. ಆದರೆ ಕೆಲಸ ಮಾಡುವ ಉತ್ಸಾಹ, ಮನಸ್ಸು ನಿಮ್ಮೊಳಗೆ ಬರಬೇಕು. ನಿಮ್ಮ ವೃತ್ತಿ ಜೀವನದ ಯಶಸ್ಸು, ಕಂಪನಿ ಯಶಸ್ಸಿಗೆ ಕೆಲಸ ಮಾಡಬೇಕಾದ ಆಯ್ಕೆ ನಿಮ್ಮ ಮುಂದೆ ಇರುತ್ತದೆ. ಇದನ್ನು ಆಜ್ಞೆ ಮಾಡುವುದಿಲ್ಲ. ನೀವು ಸ್ವಯಂ ಪ್ರೇರಿತರಾಗಿ ಮಾಡುವುದಾಗಿದೆ ಎಂದು ನಾರಾಯಣ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಐಎಂಸಿ ಕಿಲಾಚಂದ್ ಮೆಮೋರಿಯಲ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಚರ್ಚೆ, ಪರ ವಿರೋಧಗಳು ತಪ್ಪಲ್ಲ. ಹಲವರು ಕೆಲಸದ ಕುರಿತು ಪರಾಪರ್ಶಸುತ್ತಾರೆ. ಕೆಲವರು ಬದಲಾವಣೆ ತರುತ್ತಾರೆ. ಹೆಚ್ಚು ಕೆಲಸ ಮಾಡುತ್ತಾರೆ. ಮತ್ತೆ ಕೆಲವರು ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ಯಾವುದು ತಪ್ಪಲ್ಲ. ಆದರೆ ಎಲ್ಲವೂ ನಿಮ್ಮ ಆಯ್ಕೆ ಮೂಲಕ ಬರಬೇಕು. ಆಜ್ಞೆಯಲ್ಲ ಎಂದಿದ್ದಾರೆ.

70 ಗಂಟೆ ಕೆಲಸ ಚರ್ಚೆ ನಡುವೆ 1800 ಕೋಟಿ ರೂ ಕಳೆದುಕೊಂಡ ನಾರಾಯಣ ಮೂರ್ತಿ

ಹೆಚ್ಚು ಗಂಟೆ ಕೆಲಸ ಒತ್ತಾಯ ಪೂರ್ವಕವಾಗಿ ಮಾಡುವುದಲ್ಲ. ಅವರವರ ಆಯ್ಕೆಯಾಗಿರುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಈ ಮೂಲಕ 70 ಗಂಟೆ ಕೆಲಸದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ದೇಶದಲ್ಲಿ 70 ಹಾಗೂ 90 ಗಂಟೆ ವಾರದಲ್ಲಿ ಕೆಲಸದ ವಿಚಾರವಾಗಿ ಸಾಕಷ್ಟು ವಿರೋದಗಳು, ಟ್ರೋಲ್, ಮೀಮ್ಸ್ ವ್ಯಕ್ತವಾಗಿದೆ.

ಇತ್ತೀಚೆಗೆ ಎಲ್‌ಟಿ ಮುಖ್ಯಸ್ಥರು ವಾರದಲ್ಲಿ 90 ಗಂಟೆ ಕೆಲಸ ಸೂಚಿಸಿದ್ದರು. ಇದರ ವಿರುದ್ಧ ಹಲವು ಸಿಇಒ, ಕಂಪನಿ ಸಂಸ್ಥಾಪಕರು, ಉದ್ಯೋಗಿಗಳು, ಸೆಲೆಬ್ರೆಟಿಗಳು ಸೇರಿದಂತೆ ಜನಸಾಮಾನ್ಯರು ಹರಿಹಾಯ್ದಿದ್ದರು. ಸುಬ್ರಹ್ಮಣ್ಯನ್ ಇದೇ ವಿಚಾರವಾಗಿ ಮಾತನಾಡುತ್ತಾ, ಭಾನುವಾರ ಪತ್ನಿ ಮುಖವನ್ನು ಎಷ್ಟು ನೋಡುತ್ತೀರಿ. ಇದರ ಬದಲು ಕಚೇರಿಯಲ್ಲಿ ಕೆಲಸ ಮಾಡಿ ಎಂದಿದ್ದರು. ಈ ಮಾತಿಗೆ ಹಲವರು ಭಾರಿ ವಿರೋಧ ವ್ಯಕ್ತಪಡಿಸಿದ್ದರು.

LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!