
ನವದೆಹಲಿ(ಜ.21) ಪ್ರಸಕ್ತ ಸಾಲಿನ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ತೆರಿಗೆ ವಿನಾಯಿತಿ ಹೆಚ್ಚಿಸುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮಧ್ಯಮ ವರ್ಗ ಜನ ಮತ್ತಷ್ಟು ವಿನಾಯಿತಿ ಬಯಸುತ್ತಿದ್ದಾರೆ. ಪ್ರತಿ ವರ್ಷದ ಬಜೆಟ್ ಬಳಿಕ ಆದಾಯ ತೆರಿಗೆ ಸಲ್ಲಿಕೆ, ಟಿಡಿಎಸ್ ಸೇರಿದಂತೆ ತೆರಿಗೆ ಸಂಬಂಧಪಟ್ಟ ವಿಚಾರದಲ್ಲಿ ಮಹತ್ವದ ಬದಲಾವಣೆಗಳಾಗುತ್ತದೆ. 2024ರ ಬಜೆಟ್ ಬಳಿಕ ಆದಾಯ ತೆರಿಗೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಪೈಕಿ ತೆರಿಗೆ ಸಲ್ಲಿಕೆ ವೇಳೆ ಒಲ್ಡ್ ರೆಜಿಮ್ ಹಾಗೂ ನ್ಯೂ ರೆಜಿಮ್ ಆಯ್ಕೆಗಳು ಲಭ್ಯವಾಗುತ್ತದೆ. ಈ ಪೈಕಿ ನಿಮಗೆ ಯಾವುದು ಸೂಕ್ತ? ಇಲ್ಲಿದೆ ವಿವರ.
ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಸಲ್ಲಿಸುವ ವ್ಯಕ್ತಿಗಳಿಗೆ ಒಲ್ಡ್ ಅಥವಾ ನ್ಯೂ ರಿಜಿಮ್ ಲಭ್ಯವಿರುವುದಿಲ್ಲ. ಕೇವಲ ನ್ಯೂ ರಿಜಿಮ್ ಮಾತ್ರ ಲಭ್ಯವಿರುತ್ತದೆ. ಆದರೆ ಈಗಾಗಲೇ ಒಲ್ಡ್ ರೆಜಿಮ್ ಅಥವಾ ಹಳೇ ಪದ್ದತಿ ಮೂಲಕ ಆದಾಯ ತರಿಗೆ ಸಲ್ಲಿಕೆ ಮಾಡುವವರಿಗೆ ಎರಡು ಆಯ್ಕೆಗಳು ಲಭ್ಯವಿರುತ್ತದೆ. ಹೊಸ ಆದಾಯ ತರಿಗೆ ಸ್ಲ್ಯಾಬ್ ಹೆಚ್ಚಿನ ತೆರಿಗೆ ವಿನಾಯಿತಿ ನೀಡುತ್ತದೆ. ಹೊಸ ಆದಾಯ ತೆರಿಗೆ ಪದ್ಧತಿ ಅಥವಾ ನ್ಯೂ ರಿಜಿಮ್ ತೆರಿಗೆದಾರರಿಗೆ ಹೆಚ್ಚಿನ ಕಡಿತ ಅಥಾ ಯಾವುದೇ ಕಡಿತಗಳಿಲ್ಲದೆ ಕಡಿಮೆ ತೆರಿಗೆ ವಿಧಿಸುತ್ತದೆ. ಆದರೆ ಹಳೇ ಪದ್ದತಿ 1961ರ ತೆರಿಗೆ ಕಾಯ್ದೆ ಅಡಿಯಲ್ಲಿ ಹಲವು ಸೆಕ್ಷನ್ ಅಡಿಯಲ್ಲಿ ಕೆಲ ಕಡಿತಗಳನ್ನು ನೀಡುತ್ತದೆ. ಇಷ್ಟೇ ಅಲ್ಲ ಹಳೇ ತೆರಿಗೆ ಪದ್ದತಿಯಲ್ಲಿ ತೆರಿಗೆ ಕೂಡ ಹೆಚ್ಚು.
ಬಜೆಟ್ ಅಧಿವೇಶನದಲ್ಲಿ ಹೊಸ ನೇರ ತೆರಿಗೆ ಮಸೂದೆ ಮಂಡನೆ ಸಾಧ್ಯತೆ, ಇದರಿಂದ ಯಾರಿಗೆ ಲಾಭ?
ಹೊಸ ತೆರಿಗೆ ಅಥವಾ ನ್ಯೂ ರಿಜಿಮ್ ಸ್ಲ್ಯಾಬ್( 60 ವರ್ಷದ ಒಳಪಟ್ಟವರಿಗೆ)
3 ಲಕ್ಷ ರೂಪಾಯಿ ವರಗೆ: ಯಾವುದೇ ತೆರಿಗೆ ಇಲ್ಲ
3 ರಿಂದ 7 ಲಕ್ಷ ರೂಪಾಯಿವರೆಗೆ : ಶೇಕಡಾ 5ರಷ್ಟು ತೆರಿಗೆ
7 ರಿಂದ 10 ಲಕ್ಷ ರೂಪಾಯಿವರೆಗೆ :ಶೇಕಡಾ 10 ರಷ್ಟು ತರಿಗೆ
10 ರಿಂದ 12 ಲಕ್ಷ ರೂಪಾಯಿ ವರೆಗೆ: ಶೇಕಡಾ 15ರಷ್ಟು ತೆರಿಗೆ
12 ರಿಂದ 15 ಲಕ್ಷ ರೂಪಾಯಿ ವರೆಗೆ:ಶೇಕಡಾ 20 ರಷ್ಟು ತೆರಿಗೆ
15 ಲಕ್ಷ ರೂಪಾಯಿಗಿಂತ ಮೇಲ್ಪಟ್ಟು: ಶೇಕಡಾ 30 ರಷ್ಟು ತೆರಿಗೆ
ಓಲ್ಡ್ ಟ್ಯಾಕ್ಸ್ ರಿಜಿಮ್
2.5 ಲಕ್ಷ ರೂಪಾಯಿ ವರೆಗೆ: ಯಾವುದೇ ತೆರಿಗೆ ಇಲ್ಲ
2.5 ರಿಂದ 5 ಲಕ್ಷ ರೂಪಾಯಿ ವರೆಗೆ: ಶೇಕಡಾ 5ರಷ್ಟು ತೆರಿಗೆ
5 ರಿಂದ 10 ಲಕ್ಷ ರೂಪಾಯಿವರೆಗೆ: ಶೇಕಡಾ 20 ರಷ್ಟು ತೆರಿಗೆ
10 ಲಕ್ಷ ರೂಪಾಯಿಯಿಂದ ಮೇಲ್ಪಟ್ಟು: ಶೇಕಡಾ 30 ರಷ್ಟು ತೆರಿಗೆ
ಹೊಸ ರೆಜಿಮ್‌ನಲ್ಲಿ ತೆರಿಗೆದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ 75,000 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಆದರೆ ಓಲ್ಡ್ ರಿಜಿಮ್ ಪದ್ಧತಿಯಲ್ಲಿ ಫ್ಲ್ಯಾಟ್ 50,000 ರೂಪಾಯಿವರಿಗೆ ಮಾತ್ರ ಇದೆ. ನಿಮ್ಮ ಆದಾಯಕ್ಕೆ ಅನುಸಾರವಾಗಿ ರಿಜಿಮ್ ಆಯ್ಕೆ ಮಾಡಿಕೊಳ್ಳಿ. ಗೊಂದಲಗಳಿದ್ದರೆ ಉತ್ತಮ ಸಿಎ ಜೊತೆ ಚರ್ಚಿಸಿ ಆಯ್ಕೆ ಮಾಡಿಕೊಳ್ಳಿ.
ಹಳೇ ತೆರಿಗೆ ಪದ್ಧತಿಯಲ್ಲಿ ಹಲವು ವಿನಾಯಿತಿಗಳು ಲಭ್ಯವಿದೆ. ಆದರೆ ಹೊಸ ಪದ್ಧತಿಯಲ್ಲಿ ಈ ಸೌಲಭ್ಯವಿಲ್ಲ. ಪ್ರಮುಖವಾಗಿ ಹೂಡಿಕೆ ಅಂದರೆ ಸಕ್ಷನ್ 80ಸಿ, ವಿಮೆ 80ಡಿ, ಗೃಹ ಸಾಲ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಕೆಲ ವಿನಾಯಿತಿಗಳು ಲಭ್ಯವಿದೆ.
ಸೂಚನೆ: ಈ ಪದ್ಧತಿ 2025ರ ಬಜೆಟ್ ಮಂಡನೆ ಬಳಿಕ ಬದಲಾಗುವ ಸಾಧ್ಯತೆ ಇದೆ.
ಬ್ಯಾಂಕಲ್ಲಿ ಹಣ ಹಾಕೋದಿದ್ರೆ ಎಚ್ಚರ! ಇಷ್ಟು ಲಕ್ಷ ಅಕೌಂಟ್‌ಗೆ ಹಾಕಿದ್ರೆ ನೋಟಿಸ್ ಬರಬಹುದು ಹುಷಾರ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.