
ಬೆಂಗಳೂರು(ಜೂ.18): ಇನ್ಫೋಸಿಸ್ ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾಗಿರುವ ಎಡ್ಜ್ ವರ್ವ್ ಸಿಸ್ಟಮ್ಸ್ ನ ಇನ್ಫೋಸಿಸ್ ಫಿನಾಕಲ್ ತನ್ನ ಡಿಜಿಟಲ್ ಬ್ಯಾಂಕಿಂಗ್ ಸಾಸ್ (Software-as-a-Service-SaaS) ಪ್ರಕಟಿಸಿದೆ. ಭಾರತೀಯ ನಗರ ಸಹಕಾರ ಬ್ಯಾಂಕ್ ಗಳು(ಇಂಡಿಯನ್ ಅರ್ಬನ್ ಕೋಆಪರೇಟಿವ್ ಬ್ಯಾಂಕ್ಸ್-ಯುಸಿಬಿಗಳು) ತಮ್ಮ ವ್ಯವಹಾರಗಳು ಮತ್ತು ಕಾರ್ಯಾಚರಣೆಗಳನ್ನು ಆಧುನೀಕರಣಗೊಳಿಸಿಕೊಳ್ಳಲು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
ಇನ್ಫೋಸಿಸ್ ಫೌಂಡೇಷನ್‌ನಿಂದ ಅತ್ಯಾಧುನಿಕ ಆಂಬ್ಯುಲೆನ್ಸ್ ಕೊಡುಗೆ
ಯುಸಿಬಿ ವರ್ಗಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ಪ್ಲಾಟ್ ಫಾರ್ಮ್ ಅನ್ನು ಈಗಾಗಲೇ ಭಾರತದ ಪ್ರಮುಖ ಮೂರು ಯುಸಿಬಿಗಳಾದ ವಿದ್ಯಾ ಸಹಕಾರಿ ಬ್ಯಾಂಕ್, ಬರೇಲಿಯ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಝೊರೊಆಸ್ಟ್ರಿಯನ್ ಕೋ-ಆಪರೇಟಿವ್ ಬ್ಯಾಂಕ್ ಅಳವಡಿಸಿಕೊಂಡಿವೆ. ಸುಲಭ ದರದ ಈ ಸಾಸ್ ಫಿನಾಕಲ್ ಬ್ಯುಸಿನೆಸ್ ಪಾಲುದಾರರಿಂದ ಕಾಂಪ್ಲಿಮೆಂಟರ್ ಸಲೂಶನ್ ಗಳು ಮತ್ತು ಕೆಪ್ಯಾಬಿಲಿಟಿಗಳೊಂದಿಗೆ ಸಮಗ್ರ ಕ್ರಿಯಾತ್ಮಕವಾದ ಫಿನಾಕಲ್ ಸಲೂಶನ್ ಸೂಟ್ ಅನ್ನು ಒದಗಿಸಲಿದೆ. ಸಾರಸ್ವತ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್(ಎಸ್ಐಪಿಎಲ್) ಮತ್ತು ಬೆಸ್ಟ್ ಆಫ್ ಬ್ರೀಡ್ ಸಾಫ್ಟ್ ವೇರ್ ಸಲೂಶನ್ಸ್ (ಬಿಬಿಎಸ್ಎಸ್ಎಲ್) ಸಂಸ್ಥೆಗಳು ಯುಸಿಬಿಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು, ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿಭಾಯಿಸಿಕೊಳ್ಳಲು ಮತ್ತು ವಿಶ್ವದರ್ಜೆಯ ಗ್ರಾಹಕ ಅನುಭವಗಳನ್ನು ನೀಡಲು ನೆರವಾಗುತ್ತವೆ.
ಎಂಡ್-ಟು-ಎಂಡ್ ಡಿಜಿಟಲ್ ಬ್ಯಾಂಕಿಂಗ್ ಪರಿಹಾರ ಸೂಟ್ ನಲ್ಲಿ ಎಟಿಎಂ ಸ್ವಿಚ್, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಹೆಚ್ಚಿನ ಹೆಚ್ಚುವರಿ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಆಯ್ಕೆಗಳೊಂದಿಗೆ ಎಸ್ಐಪಿಎಲ್ ನಿಂದ ಫಿನಾಕಲ್ ಕೋರ್ ಬ್ಯಾಂಕಿಂಗ್ ಮತ್ತು ಪೂರಕವಾದ ಪರಿಹಾರಗಳನ್ನು ಒಳಗೊಂಡಿದೆ.
ಹಂಪಿಯ 100 ಗೈಡ್‌ಗಳ ಖಾತೆಗೆ ಇನ್ಫಿ ಸುಧಾಮೂರ್ತಿ ತಲಾ 10,000 ರು. ಜಮೆ.
ಎಂಡ್-ಟು-ಎಂಡ್ ನಿರ್ವಹಣೆ ಸೇವೆಗಳೊಂದಿಗೆ ಯುಸಿಬಿಗಳು ತಮ್ಮ ತಂತ್ರಜ್ಞಾನ ಪರಿವರ್ತನೆಗಾಗಿ ಖರ್ಚು ಮಾಡುವ ಒಂದು ಒಪೆಕ್ಸ್ ಮಾದರಿಯಿಂದ ಪ್ರಯೋಜನವನ್ನು ಪಡೆಯುತ್ತವೆ. ಅದೇ ರೀತಿ ಗಮನಾರ್ಹವಾದ ಮುಂಗಡ ಹೂಡಿಕೆಗಳು ಇಲ್ಲದೇ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮಾತ್ರ ಪಾವತಿ ಮಾಡುತ್ತವೆ ಎಂಬುದನ್ನು ಖಚಿತಪಡಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.