
ಮುಂಬೈ: ಚಿಲ್ಲರೆ ಹಣದುಬ್ಬರ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಬಡ್ಡಿದರವನ್ನು ಈ ತಿಂಗಳು 6.5ರಷ್ಟೆ ಇರಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೂ.8 ರಿಂದ ಜೂ.8 ರವರೆಗೆ ಆರ್‌ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಅವರ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ನಡೆಯಲಿದ್ದು, 8 ರಂದು ದ್ವೈಮಾಸಿಕ ವಿತ್ತ ನೀತಿ ಪ್ರಕಟವಾಗಲಿದೆ. ಆರ್‌ಬಿಐ ತನ್ನ ಬಡ್ಡಿದರವನ್ನು ಏಪ್ರಿಲ್‌ನಲ್ಲಿ ಶೇ.6.5ರಷ್ಟು ನಿಗದಿ ಮಾಡಿತ್ತು. ಇದೀಗ ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವ ಕಾರಣ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) 18 ತಿಂಗಳ ಕನಿಷ್ಠ ಶೇ.4.7ಕ್ಕೆ ಇಳಿದಿತ್ತು. ಶಕ್ತಿಕಾಂತ್ ದಾಸ್ (Shaktikant Das) ಅವರ ಅಭಿಪ್ರಾಯದ ಅನ್ವಯ ಮೇ ತಿಂಗಳ ಸೂಚ್ಯಂಕವು ಇನ್ನು ಕಡಿಮೆ ಆಗಬಹುದಾಗಿದೆ. ಜೂ.12ರಂದು ಹಣದುಬ್ಬರದ ಅಂಕಿ-ಅಂಶ ಹೊರಬೀಳುತ್ತವೆ.
ನೀವು ಬ್ಯಾಂಕ್ ನಲ್ಲಿ ಒಮ್ಮೆಗೆ ಎಷ್ಟು ನಾಣ್ಯಗಳನ್ನು ಠೇವಣಿ ಇಡಬಹುದು? ಆರ್ ಬಿಐ ಮಾರ್ಗಸೂಚಿಯಲ್ಲಿ ಏನಿದೆ?
ರಿಸರ್ವ್ ಬ್ಯಾಂಕ್ ಕಚೇರಿಗೆ ಬಾಂಬ್ ಕರೆ: ಯುವಕ ಸೆರೆ
ಬೆಂಗಳೂರು: ನಗರದ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿ (112)ಗೆ ಹುಸಿ ಕರೆ ಮಾಡಿ ಕುಚೋದ್ಯತನ ತೋರಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿ ನಗರದ (Rajarajeshwari Nagara) ನಿವಾಸಿ ವೈಭವ್ ಭಗವಾನ್ ಬಂಧಿತನಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿಗೆ ತನ್ನ ಮೊಬೈಲ್‌ನಿಂದ ಗುರುವಾರ ನಸುಕಿನಲ್ಲಿ ಆತ ಕರೆ ಮಾಡಿದ್ದ. ಈ ಬಗ್ಗೆ ನಿಯಂತ್ರಣ ಕೊಠಡಿ ಪಿಎಸ್‌ಐ ನೀಡಿದ ದೂರಿನ ಮೇರೆಗೆ ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸಿದ ವಿಧಾನಸೌಧ ಪೊಲೀಸರು, ಕರೆ ಬಂದಿದ್ದ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಚೋದ್ಯಕ್ಕಾಗಿ ಮಧ್ಯರಾತ್ರಿ ಕರೆ ಮಾಡಿದ್ದ ವಿದ್ಯಾರ್ಥಿ
ಖಾಸಗಿ ಕಾಲೇಜಿನ ಬಿಕಾಂ ಓದುತ್ತಿರುವ ವೈಭವ್, ತನ್ನ ಪೋಷಕರ ಜತೆ ನೆಲೆಸಿದ್ದಾನೆ. ಐದು ವರ್ಷಗಳಿಂದ ಮಾನಸಿ ಕಾಯಿಲೆಗೆ ಆತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಗುರುವಾರ ನಸುಕಿನ 2.40ಕ್ಕೆ ಕರೆ ಮಾಡಿದ ಆರೋಪಿ, ಬೆಂಗಳೂರಿನ ರಿಸರ್ವ್ ಬ್ಯಾಂಕ್ ಇಂಡಿಯಾದಲ್ಲಿ ಬಾಂಬ್ ಬ್ಲಾಸ್ಟ್ (Bomb Blast) ಆಗುತ್ತದೆ. ತಕ್ಷಣವೇ ಪರಿಶೀಲಿಸಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಕೂಡಲೇ ಈ ಬಗ್ಗೆ ಕೇಂದ್ರ ವಿಭಾಗದ ಪೊಲೀಸರಿಗೆ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.
ಯುದ್ಧ, ವಿಪತ್ತಿನ ವೇಳೆ ಬಳಕೆಗೆಂದೇ ಆರ್‌ಬಿಐ ಹೊಸ ಪಾವತಿ ವ್ಯವಸ್ಥೆ ಅಭಿವೃದ್ಧಿ!
ಈ ಮಾಹಿತಿ ಮೇರೆಗೆ ನಗರದ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ (RBI) ಕಚೇರಿಗೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ. ಬಳಿಕ ನಿಯಂತ್ರಣ ಕೊಠಡಿಯ ಪಿಎಸ್‌ಐ (PSI) ದೂರು ಆಧರಿಸಿ ತನಿಖೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.