Retail Inflation:ಆರ್‌ಬಿಐ ಗುರಿಯ ಮಿತಿಯೊಳಗೆ ಚಿಲ್ಲರೆ ಹಣದುಬ್ಬರ; ನವೆಂಬರ್‌ನಲ್ಲಿ ಶೇ.5.88ಕ್ಕೆ ಇಳಿಕೆ

Published : Dec 13, 2022, 11:12 AM ISTUpdated : Dec 13, 2022, 11:19 AM IST
Retail Inflation:ಆರ್‌ಬಿಐ ಗುರಿಯ ಮಿತಿಯೊಳಗೆ ಚಿಲ್ಲರೆ ಹಣದುಬ್ಬರ; ನವೆಂಬರ್‌ನಲ್ಲಿ ಶೇ.5.88ಕ್ಕೆ ಇಳಿಕೆ

ಸಾರಾಂಶ

*ಅಕ್ಟೋಬರ್ ನಲ್ಲಿ ಶೇ.6.77ರಷ್ಟಿದ್ದ ಚಿಲ್ಲರೆ ಹಣದುಬ್ಬರ   *ಭಾರತದ ಕೈಗಾರಿಕ ಉತ್ಪಾದನೆ ಅಕ್ಟೋಬರ್ ನಲ್ಲಿ ಶೇ.4ಕ್ಕೆ ಕುಸಿತ *ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಕೂಡ ಇಳಿಕೆ

ನವದೆಹಲಿ (ಡಿ.13):  ದೇಶದಲ್ಲಿ ಕಳೆದ 11 ತಿಂಗಳಿಂದ ಆರ್ ಬಿಐ ಸಹನ ಮಿತಿ ಶೇ.6ಕ್ಕಿಂತ ಹೆಚ್ಚಿದ್ದ ಚಿಲ್ಲರೆ ಹಣದುಬ್ಬರ, ನವೆಂಬರ್ ನಲ್ಲಿ ಶೇ.5.88ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಆಹಾರ ಪದಾರ್ಥಗಳ ಬೆಲೆ ಕೂಡ ಇಳಿಕೆಯಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ನವೆಂಬರ್ ನಲ್ಲಿ ಹಣದುಬ್ಬರ ಶೇ.6.09ಕ್ಕೆ ಇಳಿಕೆಯಾಗಿದ್ರೆ, ನಗರ ಪ್ರದೇಶಗಳಲ್ಲಿ ಶೇ.5.68ಕ್ಕೆ ತಗ್ಗಿದೆ. ಬೆಲೆಗಳಲ್ಲಿ ಈ ರೀತಿ ಇಳಿಕೆಯಾಗುತ್ತಿರೋದು ಇದು ಸತತ ಎರಡನೇ ಬಾರಿಯಾಗಿದೆ. ಅಕ್ಟೋಬರ್ ನಲ್ಲಿ ಕೂಡ ಚಿಲ್ಲರೆ ಹಣದುಬ್ಬರ  ಶೇ. 6.77ಕ್ಕೆ ಇಳಿಕೆ ಕಂಡಿತ್ತು.  ಸೆಪ್ಟೆಂಬರ್ ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶೇ.7.41ರಷ್ಟಿತ್ತು.ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿದ್ದರೆ, ಜೂನ್ ನಲ್ಲಿ ಶೇ.7.01ಕ್ಕೆ ಇಳಿಕೆಯಾಗಿತ್ತು. ಜುಲೈನಲ್ಲಿ ಕೂಡ ಇಳಿಕೆಯಾಗಿ ಶೇ.6.71ರಷ್ಟಿತ್ತು. ಆದರೆ, ಆಗಸ್ಟ್ ನಲ್ಲಿ ಶೇ.7ಕ್ಕೆ ಏರಿಕೆ ಕಂಡಿತ್ತು. ಭಾರತದ ಕೈಗಾರಿಕ ಉತ್ಪಾದನೆ ಅಕ್ಟೋಬರ್ ನಲ್ಲಿ ಶೇ.4ಕ್ಕೆ ಕುಸಿತ ಕಂಡಿತ್ತು. ಇದಕ್ಕೆ ಮುಖ್ಯಕಾರಣ ಉತ್ಪಾದನಾ ವಲಯದ ಬೆಳವಣಿಗೆಯಲ್ಲಿ ಇಳಿಕೆ. ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಕೂಡ ಪ್ರಗತಿ ತಗ್ಗಿದೆ.

ಆಹಾರ ಹಣದುಬ್ಬರ ಇಳಿಕೆ
ರಾಷ್ಟ್ರೀಯ ಸಾಂಖ್ಯಿಕ ಕಚೇರಿ  (NSO)ಇತ್ತೀಚಿನ ಅಂಕಿಅಂಶಗಳ ಪ್ರಕಾರ ಆಹಾರ ಬಾಸ್ಕೆಟ್ ಹಣದುಬ್ಬರ ಅಥವಾ ಗ್ರಾಹಕ ಆಹಾರ ಬೆಲೆ ಸೂಚ್ಯಂಕ  ನವೆಂಬರ್ ನಲ್ಲಿ ಶೇ.4.67ಕ್ಕೆ ತಗ್ಗಿದೆ. ಅಕ್ಟೋಬರ್ ನಲ್ಲಿ ಇದು ಶೇ.7.01ರಷ್ಟಿತ್ತು. ಇನ್ನು ಸೆಪ್ಟೆಂಬರ್ ನಲ್ಲಿ ಆಹಾರ ಹಣದುಬ್ಬರ (Food Inflation) ಶೇ.8.60ರಷ್ಟಿತ್ತು.  

ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಹೆಚ್ಚಳ..? ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ

ಆರ್ ಬಿಐ ಚಿಲ್ಲರೆ ಹಣದುಬ್ಬರ (Retail inflation) ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. ಹೀಗಾಗಿ ಹಣದುಬ್ಬರದ (Inflation) ಗರಿಷ್ಠ ಮಿತಿ ಶೇ.6. ಆದ್ರೆ ಸತತ 11 ತಿಂಗಳಿಂದ ಚಿಲ್ಲರೆ ಹಣದುಬ್ಬರ (Retail inflation) ಈ ಮಿತಿಯನ್ನು ಮೀರಿತ್ತು. ಹೀಗಾಗಿ ಡಿಸೆಂಬರ್ 5ರಂದು  ಆರ್ ಬಿಐ ರೆಪೋ ದರವನ್ನು (Repo rate) 35 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ.  ಇದರಿಂದ ರೆಪೋ ದರವು ಶೇ.6.25ಕ್ಕೆಏರಿಕೆಯಾಗಿದೆ.  ಸೆಪ್ಟೆಂಬರ್ 30ರಂದು ಆರ್ ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ (RBI) ಈ ವರ್ಷದ ಪ್ರಾರಂಭದಿಂದ ಈ ತನಕ ಒಟ್ಟು ಐದು ಬಾರಿ ರೆಪೋ ದರವನ್ನು (Repo rate) ಹೆಚ್ಚಳ ಮಾಡಿದೆ. ಈ ಹೆಚ್ಚಳದೊಂದಿಗೆ 10 ತಿಂಗಳಿನಲ್ಲಿ ರೆಪೋ ದರ ಶೇ.2.25ರಷ್ಟು ಏರಿಕೆಯಾದಂತಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಕೊನೆಯವರೆಗೂ (ಮಾರ್ಚ್‌ ಅಂತ್ಯ) ಹಣದುಬ್ಬರ ಶೇ.6.7ರಷ್ಟುಇರುವ ಸಾಧ್ಯತೆಯಿದ್ದು, ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರ ಶೇ.6.8ರಷ್ಟುಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಂತಿಮ ಗಡುವು ಮುಗಿದಿದ್ರೂ 3 ದಿನಗಳ ಕಾಲ ದಂಡ ವಿಧಿಸುವಂತಿಲ್ಲ, ಏಕೆ ಗೊತ್ತಾ?

2022-23ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.8ರ ದರದಲ್ಲಿ ಬೆಳವಣಿಗೆ ಹೊಂದಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಅಂದಾಜಿಸಿದೆ. ಇದು ಈ ಹಿಂದೆ ಆರ್‌ಬಿಐ ಅಂದಾಜಿಸಿದ್ದ ಶೇ.7ರ ಅಭಿವೃದ್ಧಿ ದರಕ್ಕಿಂತ ಶೇ.0.2ರಷ್ಟು ಕಡಿಮೆಯಾಗಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಉಂಟಾಗುತ್ತಿರುವ ಏರಿಳಿತ ಹಾಗೂ ಇನ್ನೂ ಮುಂದುವರಿದಿರುವ ಭೌಗೋಳಿಕ-ರಾಜಕೀಯ ಅಸ್ಥಿರತೆಗಳಿಂದಾಗಿ ದೇಶದ ಆರ್ಥಿಕಾಭಿವೃದ್ಧಿಯ ವೇಗ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೂ ಭಾರತವು ಈ ವರ್ಷ ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರಲಿದೆ ಎಂದು ಆರ್‌ಬಿಐ (RBI) ಹೇಳಿದೆ.


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?