ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಮನು ಶರ್ಮ ಈಗ ಸಿದ್ಧಾರ್ಥ್ ಶರ್ಮ ಆಗಿ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮಾಲೀಕರಾಗಿದ್ದಾರೆ. ಈ ವಿಸ್ಕಿ ಹಲವು ಪ್ರಶಸ್ತಿಗಳನ್ನು ಗೆದ್ದಿದೆ, ಆದರೆ ಇದರ ಮಾಲೀಕನ ಹಿನ್ನೆಲೆ ಆಶ್ಚರ್ಯಕರವಾಗಿದೆ.
ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಬಗ್ಗೆ ನೀವು ಕೇಳಿರಲೇಬೇಕು. ಇಂದು ವಿಶ್ವದಾದ್ಯಂತ ಮನೆಮಾತಾಗಿರುವ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಗೆದ್ದಿರುವ ಪ್ರಶಸ್ತಿಗಳೇ ಲೆಕ್ಕವಿಲ್ಲದಷ್ಟು. ಇಲ್ಲಿಯವರೆಗೂ ಅಂದಾಜು 24 ಪ್ರಶಸ್ತಿಗಳನ್ನು ಇಂದ್ರಿ ಗೆದ್ದಿರುವ ಮಾಹಿತಿ ಇದೆ. ಅದ್ಯಾಕೆ ಈ ವಿಚಾರ ಅಂದ್ರೆ, 1999ರ ಏಪ್ರಿಲ್ 30. ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಒಂದು ಕೊಲೆ ದೆಹಲಿಯ ಮೆಹ್ರೊಲಿ ಪ್ರದೇಶದಲ್ಲಿರುವ ಬಿನಾ ರಮಣಿ ಒಡೆತನದ ಖುತಬ್ ಕೊಲನಾಡೆಯಲ್ಲಿರುವ ತಾಮರಿಂಡ್ ಕೋರ್ಟ್ ರೆಸ್ಟೋರೆಂಟ್ ನಲ್ಲಿ ಹತ್ಯೆ ನಡೆದಿತ್ತು. ವ್ಯಕ್ತಿ ಮದ್ಯ ಸರ್ವ್ ಮಾಡಲು ನಿರಾಕರಿಸಿದ್ದ ಕಾರಣಕ್ಕೆ ಸಿಟ್ಟಿಗೆದ್ದ ಮನು ಶರ್ಮ ಎನ್ನುವ ಹೆಸರಿನ ವ್ಯಕ್ತಿ, 34 ವರ್ಷದ ಜೆಸ್ಸಿಕಾ ಲಾಲ್ ಎನ್ನುವ ಯುವತಿಯನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ಅಲ್ಲಿ ಶೂಟ್ ಮಾಡಿ ಕೊಂದು ಹಾಕಿದ್ದ.
ಇಲ್ಲಿ ಈ ವಿಚಾರ ಯಾಕೆ ಅಂದರೆ, ಜೆಸ್ಸಿಕಾ ಲಾಲ್‌ಅನ್ನು ಹತ್ಯೆ ಮಾಡಿ ಅಂದು ಇಡೀ ದೇಶದಲ್ಲಿ ಸುದ್ದಿಯಾಗಿದ್ದ ಇದೇ ಮನು ಶರ್ಮ ಈಗ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮಾಲೀಕ. ಅಂದು ಮನು ಶರ್ಮ ಆಗಿದ್ದ ಈ ವ್ಯಕ್ತಿ ಈಗ ಸಿದ್ಧಾರ್ಥ್ ಶರ್ಮ ಆಗಿ ಬದಲಾಗಿದ್ದಾನೆ. ಎಣ್ಣೆ ಕೊಟ್ಟಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಕೊಲೆ ಮಾಡಿದ್ದ ವ್ಯಕ್ತಿ ಇಂದು ಮದ್ಯ ಸಾಮ್ರಾಜ್ಯದ ಅಧಿಪತಿಯಾಗಿದ್ದಾನೆ.
ಜಗತ್ತಿನಲ್ಲಿ ಸುದ್ದಿಯಲ್ಲಿರುವ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮಾಲೀಕತ್ವ ಹೊಂದಿರುವ ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ (ಪಿಎಐಎಲ್) ಸ್ಥಾಪನೆಯಾಗಿದ್ದು 1953ರಲ್ಲಿ. ಆಲ್ಕೋಹಾಲ್ ಉತ್ಪಾದನೆ ಬ್ಯುಸಿನೆಸ್‌ಗೆ ಇಳಿದ ಈ ಕಂಪನಿ ಈಗ ಹಲವು ಪ್ರಶಸ್ತಿ ಪುರಸ್ಕೃತ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಂಪನಿಯ ಸಂಸ್ಥಾಪಕ ಸಿದ್ಧಾರ್ಥ್ ಶರ್ಮನ ಮೊದಲ ಹೆಸರು ಮನು ಶರ್ಮ. ಜೆಸ್ಸಿಕಾ ಲಾಲ್ ಮರ್ಡರ್ ಕೇಸ್‌ನಲ್ಲಿ ಇದೇ ಹೆಸರಿನಿಂದ ಆತನನ್ನು ಗುರುತಿಸಲಾಗಿತ್ತದೆ.
ಆಕೆಗೆ 1 ಸಾವಿರ ರೂಪಾಯಿ ಲಂಚ ಕೊಡುತ್ತೇನೆ ಎಂದರೂ ಮದ್ಯ ಸರ್ವ್ ಮಾಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಸಿದ್ದಾರ್ಥ್ ಶರ್ಮ ಆಕೆಯ ಮೇಲೆ ಗುಂಡು ಹಾಕಿದ್ದ. ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅಲ್ಲಿಯೇ ಸಾವು ಕಂಡಿದ್ದಳು. ಹರಿಯಾಣ ಕಾಂಗ್ರೆಸ್ ನಾಯಕ ವಿನೋದ್ ಶರ್ಮ ಪುತ್ರನಾಗಿದ್ದ ಸಿದ್ಧಾರ್ಥ್ ಶರ್ಮ, ಭಾರತದ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಅವರ ದೂರದ ಸಂಬಂಧಿಯೂ ಆಗಿದ್ದ.
ಜೆಸ್ಸಿಕಾ ಲಾಲ್ ಮರ್ಡರ್ ಕೇಸ್: ಇಡೀ ದೇಶವನ್ನು ಬೆಚ್ಚಿಬೀಳಿಸಿದ ಕೊಲೆ ಕೇಸ್ ಇದು. ಶೂಟ್ ಮಾಡಿ ಎಸ್ಕೇಪ್ ಆಗಿದ್ದ ಸಿದ್ಧರ್ಥ್ ಶರ್ಮ ಬಳಿಕ ಚಂಡೀಗಢ ಕೋರ್ಟ್‌ಗೆ ಬಂದು ಶರಣಾಗಿದ್ದ ಈ ಕೊಲೆ ಕೇಸ್‌ಲ್ಲಿ 9 ಇತರ ಆರೋಪಿಗಳ ಪೈಕಿ ಈತನೇ ಪ್ರಮುಖನಾಗಿದ್ದ. ಈ ಪ್ರಕರಣದ ಮೂಲಕವೇ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೆಯೇ ಎನ್ನುವ ಬಗ್ಗೆಯೂ ಚರ್ಚೆ ಆರಂಭವಾಗಿತ್ತು.
ಸಾಕ್ಷಿಗಳು ಉಲ್ಟಾ ಹೊಡೆದ ನಂತರ, ಶರ್ಮಾ ಅವರ ತಂದೆ ಸಾಕ್ಷಿಗಳಿಗೆ ಲಂಚ ನೀಡಿದ್ದಾರೆ ಎಂದು ಜೆಸ್ಸಿಕಾ ಅವರ ಸಹೋದರಿ ಸಬ್ರಿನಾ ಲಾಲ್ ಆರೋಪ ಮಾಡಿದ್ದರು. ಇಡೀ ಪ್ರಕರಣವು ಗೊಂದಲದ ಗೂಡಾಯಿತು. 2006ರ ಫೆಬ್ರವರಿ 21ರಂದು, ಶರ್ಮಾ ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಖುಲಾಸೆಗೊಳಿಸಿತು. ಶರ್ಮಾ ಅವರ ತಂದೆ ಮತ್ತು ಅಜ್ಜನ ರಾಜಕೀಯ ಸಂಪರ್ಕಗಳು ಅವರಿಗೆ ಸಹಾಯ ಮಾಡಿದ್ದವು ಎಂದು ಹಲವರು ಆರೋಪಿಸಿದರು.
ಸಾರ್ವಜನಿಕರ ಆಕ್ರೋಶ, ಬೃಹತ್ ಪ್ರತಿಭಟನೆಗಳು ಮತ್ತು ಮಾಧ್ಯಮಗಳ ಒತ್ತಡದ ನಂತರ, ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದರು. ಮನು ಶರ್ಮಾ (ಸಿದ್ಧಾರ್ಥ್ ಶರ್ಮ) ಜೆಸ್ಸಿಕಾ ಲಾಲ್ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟರು. ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಶರ್ಮ ಅವರು ಜೈಲಿನಲ್ಲಿದ್ದಾಗ, ಆಯಾ ಕುಟುಂಬದ ಏಕೈಕ ಜೀವನೋಪಾಯಕಾರರಾದ ತಿಹಾರ್ ಜೈಲು ಶಿಕ್ಷೆಗೊಳಗಾದವರನ್ನು ಗುರುತಿಸಿದರು ಮತ್ತು ಅವರೇ ನಡೆಸುತ್ತಿರುವ NGO ಸಿದ್ಧಾರ್ಥ ವಶಿಷ್ಠ ಚಾರಿಟೇಬಲ್ ಟ್ರಸ್ಟ್‌ಗೆ ವಿವರಗಳನ್ನು ನೀಡಿದರು. ಸಂಘಟನೆಯ ಪ್ರಕಾರ, ಅಪರಾಧಿಗಳಿಗೆ ಸಂಬಂಧಿಸಿದ ಸುಮಾರು 700 ಮಕ್ಕಳ ಅಧ್ಯಯನ ವೆಚ್ಚವನ್ನು ಅವರು ಪ್ರಾಯೋಜಿಸಿದ್ದಾರೆ. ಅವರ ಶಿಕ್ಷಣ ಶುಲ್ಕ ಮತ್ತು ಸಮವಸ್ತ್ರ, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳಿಗಾಗಿ NGO ಸಹಾಯ ಮಾಡಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಸುಮಾರು 15 ಅಪರಾಧಿಗಳಿಗೆ NGO ಪುನರ್ವಸತಿ ಕಲ್ಪಿಸಿದೆ.
ಸಬ್ರಿನಾ ಲಾಲ್ ನವದೆಹಲಿಯ ತಿಹಾರ್ ಜೈಲಿನ ಕಲ್ಯಾಣ ಅಧಿಕಾರಿಗೆ ಪತ್ರ ಬರೆದು, ತನ್ನ ಸಹೋದರಿಯ ಕೊಲೆಗಾರನನ್ನು ಕ್ಷಮಿಸಿರುವುದಾಗಿ ತಿಳಿಸಿದ್ದಾರೆ. “ನೀವು ಕೋಪದ ಹೊರೆಯನ್ನು ಬಿಡಬೇಕು. ಮನು ಶರ್ಮಾ ಮುಕ್ತವಾಗಿ ನಡೆದರೆ ಪರವಾಗಿಲ್ಲ ಎಂದು ನಾನು ಭಾವಿಸಿದೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲ. ನೀವು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡಬೇಕು ಮತ್ತು ನಿಮ್ಮ ಜೀವನವನ್ನು ಮುಂದುವರಿಸಬೇಕು' ಎಂದು ಸಬ್ರಿನಾ ಹೇಳಿದ್ದರು.
ಜೂನ್ 2020 ರಲ್ಲಿ, ಶರ್ಮಾ ಅವರನ್ನು "ಉತ್ತಮ ನಡವಳಿಕೆ" ಆಧಾರದ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಮೇಡ್ ಇನ್ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!
ಇಂದ್ರಿ ವಿಸ್ಕಿ: ಪಿಕ್ಕಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ (PAIL), ಶರ್ಮಾ ಅವರ ಕುಟುಂಬ ವ್ಯವಹಾರವಾಗಿದ್ದು, ಪ್ರಶಸ್ತಿ ವಿಜೇತ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ ಹೆಸರುವಾಸಿಯಾಗಿದೆ. ಈ ಬ್ರ್ಯಾಂಡ್ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡಿದೆ. PAIL ತನ್ನ ಹೋಟೆಲ್‌ಗಳು, ಮುದ್ರಣ, ಡಿಜಿಟಲ್ ಮತ್ತು ದೂರದರ್ಶನ ಮಾಧ್ಯಮ ಬ್ರ್ಯಾಂಡ್‌ಗಳಿಂದಲೂ ಹೆಸರುವಾಸಿಯಾಗಿದೆ. ಇತ್ತೀಚೆಗೆ, ಇದು ಅತ್ಯುತ್ತಮ ಭಾರತೀಯ ವಿಸ್ಕಿ ವಿಭಾಗದಲ್ಲಿ 2024 ರ ಅಂತರರಾಷ್ಟ್ರೀಯ ವಿಸ್ಕಿ ಸ್ಪರ್ಧೆಯನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿತು, ಅದರ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2024 ನೊಂದಿಗೆ ಪಾಲ್ ಜಾನ್ ಅವರನ್ನು ಹಿಂದಿಕ್ಕಿತು.
ವಿಸ್ಕಿ ಮಾರಾಟದಲ್ಲೂ 'ಆತ್ಮನಿರ್ಭರ', ಜಾಗತಿಕ ದೈತ್ಯ ವಿಸ್ಕಿ ಕಂಪನಿಗಳ ಮೀರಿಸಿದ ಮೇಡ್ ಇನ್ ಇಂಡಿಯಾ ಲಿಕ್ಕರ್ಸ್!
ಕಂಪನಿಯ ಫೈಲಿಂಗ್‌ಗಳ ಪ್ರಕಾರ, ಶರ್ಮಾ 2011-12 ರಿಂದ ಸಿದ್ಧಾರ್ಥ ವಶಿಷ್ಠ ಎಂಬ ಹೆಸರಿನಲ್ಲಿ PAIL ನ ಷೇರುದಾರರಾಗಿದ್ದಾರೆ. ಆ ಸಮಯದಲ್ಲಿ ಅವರು ಇನ್ನೂ ಜೆಸ್ಸಿಕಾ ಕೊಲೆಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಹಿಂದಿನ ಮಾಧ್ಯಮ ವರದಿಗಳು ಶರ್ಮಾ ಸ್ಕಾಟ್ಲೆಂಡ್‌ನಲ್ಲಿ ಡಿಸ್ಟಿಲರಿ ತೆರೆಯಲು ಬಯಸಿದ್ದರು, ಆದರೆ ಅವರ ಕ್ರಿಮಿನಲ್ ದಾಖಲೆ ಹೊಂದಿರುವ ವ್ಯಕ್ತಿಯಾಗಿ ಪರವಾನಗಿ ನೀಡುವುದು ಕಷ್ಟಕರವಾಗಿತ್ತು ಎಂದು ಸೂಚಿಸಿವೆ.
ತಮ್ಮ ಹೊಸ ಹೆಸರಿನಲ್ಲಿ, ಶರ್ಮಾ ಭಾರಿ ಯಶಸ್ಸನ್ನು ಸಾಧಿಸಿದ್ದಾರೆ ಮತ್ತು ಈಗ ಭಾರತದಲ್ಲಿ ಮಾಲ್ಟ್ ಸ್ಪಿರಿಟ್‌ಗಳ ಅತಿದೊಡ್ಡ ಸ್ವತಂತ್ರ ತಯಾರಕ ಮತ್ತು ಮಾರಾಟಗಾರ ಪಿಕ್ಕಾಡಿಲಿ ಡಿಸ್ಟಿಲರೀಸ್‌ನ ಸ್ಥಾಪಕರಾಗಿ ಪಟ್ಟಿಮಾಡಲ್ಪಟ್ಟಿದ್ದಾರೆ.